UPSC Exam 2023-24 | ಎರಡನೇ ಸಲ ಶಿವಮೊಗ್ಗಕ್ಕೆ ಹೆಸರು ತಂದು ಕೊಟ್ಟ ಮೇಘನಾ! ಇದು ಸಾಧನೆ!

Meghna brings name to Shimoga for the second time! This is an achievement! UPSC Exam 2023-24

UPSC Exam 2023-24 | ಎರಡನೇ ಸಲ ಶಿವಮೊಗ್ಗಕ್ಕೆ ಹೆಸರು ತಂದು ಕೊಟ್ಟ ಮೇಘನಾ! ಇದು ಸಾಧನೆ!
UPSC Exam 2023-24

Shivamogga  Apr 16, 2024 | UPSC Exam 2023-24  ಈ ಸಲದ ಯುಪಿಎಸ್‌ ಪರೀಕ್ಷೆಯಲ್ಲಿ ಶಿವಮೊಗ್ಗದ ಯುವತಿ ಎರಡನೇ ಸಲ ಸಾಧನೆ ಮೆರೆದಿದ್ದಾರೆ. ಶಿವಮೊಗ್ಗದ  ಹಾಲ್ಕೊಳ ಬಡಾವಣೆಯ ನಿವಾಸಿ ಐ.ಎನ್.ಮೇಘನಾ  2023–24ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಪರೀಕ್ಷೆಯ ಫಲಿತಾಂಶದಲ್ಲಿ 589ನೇ ರ‍್ಯಾಂಕ್ ಪಡೆದಿದ್ದಾರೆ.

ಕಳೆದ ವರ್ಷ ಮೇಘನಾ ಯುಪಿಎಸ್‌ಸಿ ಪರೀಕ್ಷೆಯಲ್ಲಿ 617 ನೇ ರ್ಯಾಂಕ್‌ ಪಡೆದುಕೊಂಡಿದ್ದರು. ಸದ್ಯ ಅವರು ಐಪಿಎಸ್‌ ಟ್ರೈನಿಂಗ್‌ ನಲ್ಲಿದ್ದಾರೆ. ಇವರು ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ್ದ ಡಿಸಿಎಫ್ ಐ.ಎಂ.ನಾಗರಾಜ್ ಹಾಗೂ ಜಿ.ಜಿ.ನಮಿತಾ ದಂಪತಿ ಪುತ್ರಿ 

ಸದ್ಯ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯಾಗಿ ತರಬೇತಿಯಲ್ಲಿರುವ ಮೇಘನಾ ಐಎಎಸ್‌ ಹುದ್ದೆ ಪಡೆಯುವ ಸಲುವಾಗಿ ಪುನಃ  ಮತ್ತೊಮ್ಮೆ ಪರೀಕ್ಷೆ ಎದುರಿಸಿದ್ದರು. ಈ ಪ್ರಯತ್ನದಲ್ಲಿ ಅವರು  589 ನೇ ರ್ಯಾಂಕ್‌ ಪಡೆದಿದ್ದಾರೆ.