20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಮೆಸ್ಕಾಂ AEE

Mescom AEE caught by Lokayukta while accepting Rs 20,000 bribe

20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಮೆಸ್ಕಾಂ AEE
shivamogga lokayuktha

SHIVAMOGGA |  Dec 21, 2023  | ಆನವಟ್ಟಿ ಮೆಸ್ಕಾಂ ಏಇಇ ಜಿ. ರಮೇಶ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.   ಆನವಟ್ಟಿ ಮೆಸ್ಕಾಂ ಕಛೇರಿಗೆ ಹೋಗಿ ಎ.ಇ.ಇ. ಜಿ. ರಮೇಶ್  ಎಲೆಕ್ಟ್ರಿಕ್ ಕಂಟ್ರಾಕ್ಟರ್ ಪ್ರದೀಪ್ ಜಿ. ಎಂಬುವವರಿಂದ ರೂ. 20,000/- ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ರೇಡ್ ಮಾಡಿ ಅವರನ್ನ ಬಂಧಿಸಿದ್ದಾರೆ. 

ಲೋಕಾಯುಕ್ತ ಪೊಲೀಸ್ 

 

ಕಳೆದ 6 ವರ್ಷಗಳಿಂದ ಕೆಇಬಿ ಇಲಾಖೆಯಲ್ಲಿ ಕ್ಲಾಸ್-! ಎಲೆಕ್ನಿಕಲ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ ಪ್ರದೀಪ್ ಎಂಬವರಿಗೆ ಸೊರಬ ತಾಲ್ಲೂಕು ಕೃಷಿ ಪಂಪ್‍ಸೆಟ್ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ವರ್ಕ್ ಆರ್ಡರ್ ಆಗಿತ್ತು. 

ಈ ಎಲ್ಲಾ ಕಾಮಗಾರಿಗಳ ಲೈನ್ ವರ್ಕ್ ಮುಕ್ತಾಯಗೊಂಡಿದೆ. ಅವುಗಳಿಗೆ 25 ಕೆ.ವಿ.ಎ. ಟಿಸಿಗಳನ್ನು ಅಳವಡಿಸುವ ಕೆಲಸ ಬಾಕಿಯಿದ್ದುದರಿಂದ ಈ ಬಗ್ಗೆ ಪ್ರದೀಪ್​  ಒಟ್ಟು 07 ಟಿ.ಸಿ.ಗಳನ್ನು ಕೊಡಲು ಕೇಳಿದ್ದರು. ಇದಕ್ಕಾಗಿ ಎ.ಇ.ಇ. ರಮೇಶ್ ರೂ.20,000/-ಗಳ ಲಂಚದ ಹಣದ  ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರದೀಪ್ ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟಿದ್ದರು. 

READ : ಬಾಗಿಲಿಗೆ ಟಾಪ್ ಲಾಕ್ ಹಾಕಬೇಡಿ! ಪಾಲಿಶ್ ಮಾತು ನಂಬಬೇಡಿ! ಸಾರ್ವಜನಿಕರಿಗೆ 14 ಸೂಚನೆಗಳನ್ನು ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್

ಅದರಂತೆ ಇಂದು ದಿ:21-12-2023ರಂದು ಜಿ. ರಮೇಶ್, ಎ.ಇ.ಇ., ಮೆಸ್ಕಾಂ, ಆನವಟ್ಟಿ, ಸೊರಬ ತಾಲ್ಲೂಕು,ಶಿವಮೊಗ್ಗ ಜಿಲ್ಲೆ ಇವರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಕಛೇರಿಯಲ್ಲಿ ಫಿರ್ಯಾದಿಯಿಂದ ರೂ.20,000/-ಗಳ ಲಂಚದಹಣವನ್ನು ಪಡೆಯುವಾಗ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. 

ಆರೋಪಿ ಜಿ. ರಮೇಶ್, ಎ.ಇ.ಇ. ಇವರನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ರೂ.20,000/-ಗಳ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್.ಎಸ್.ಸುರೇಶ್, ಪಿಐ-1, ಕ.ಲೋ., ಶಿವಮೊಗ್ಗರವರು ಮುಂದಿನ ತನಿಖೆ ಕೈಗೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.