ಶಿವಮೊಗ್ಗ ಸಿಟಿಯಲ್ಲಿನ ಈ ಅಂಗಡಿ ಮಾಲೀಕರಿಗೆ ಶಾಕ್​ ಕೊಟ್ಟ ಟ್ರಾಫಿಕ್​ ಪೊಲೀಸ್!?

Malenadu Today

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

SHIVAMOGGA |  ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತೆ ಆ್ಯಕ್ಷನ್​ಗೆ ಇಳಿದಿದ್ದಾರೆ. ಶಿವಮೊಗ್ಗ ನಗರದಲ್ಲಿ ಕರ್ಕಶ್ ಧ್ವನಿ ಮಾಡುವ ದೋಷಪೂರಿತ ಸೈಲೆನ್ಸರ್ ಗಳನ್ನು  ಹೊಂದಿರುವ ವಾಹನಗಳನ್ನ ತಡೆದು ಇದುವರೆಗೂ ಕೇಸ್ ಹಾಕಲಾಗುತ್ತಿತ್ತು. ಇದೀಗ ಅಂತಹ ಸೈಲೆನ್ಸರ್​ಗಳನ್ನು ಅಳವಡಿಸುವ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 

ಶಿವಮೊಗ್ಗ ಬಿ ಉಪ ವಿಭಾಗದದಲ್ಲಿ  ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್​ಐ  ತಿರುಮಲೇಶ್ ನೇತೃತ್ವದಲ್ಲಿ ವಿಶೇಷ ತಂಡ ಇಂದು ಕಾರ್ಯಾಚರಣೆ ನಡೆಸಿದೆ.

READ : ಹೊಸನಗರ ಪೊಲೀಸರಿಂದ 09 ಜನ ಆರೋಪಿಗಳ ಬಂಧನ ! ಕಾರಣವೇನು ಗೊತ್ತಾ?

ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಬ್ಲಾಕ್ ಸ್ಮಿತ್ ಮತ್ತು ವೆಲ್ಡಿಂಗ್ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ, ದೋಷಪೂರಿತ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿರುತ್ತಾರೆ  

ದೋಷಪೂರಿತ ಸೈಲೆನ್ಸರ್ ಗಳನ್ನು ದ್ವಿ ಚಕ್ರ ವಾಹನಗಳಿಗೆ ಅಳವಡಿಸಿಕೊಟ್ಟಲ್ಲಿ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 


Share This Article