ಬಾಗಿಲಿಗೆ ಟಾಪ್ ಲಾಕ್ ಹಾಕಬೇಡಿ! ಪಾಲಿಶ್ ಮಾತು ನಂಬಬೇಡಿ! ಸಾರ್ವಜನಿಕರಿಗೆ 14 ಸೂಚನೆಗಳನ್ನು ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್

Shivamogga district police issues 14 instructions to public

ಬಾಗಿಲಿಗೆ ಟಾಪ್ ಲಾಕ್ ಹಾಕಬೇಡಿ! ಪಾಲಿಶ್ ಮಾತು ನಂಬಬೇಡಿ! ಸಾರ್ವಜನಿಕರಿಗೆ 14 ಸೂಚನೆಗಳನ್ನು ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್

SHIVAMOGGA |  Dec 21, 2023  |  ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆಯನ್ನ ವಿವಿಧೆಡೆ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ  ಶಿವಮೊಗ್ಗ  ಜಿಲ್ಲಾ ಪೊಲೀಸ್ ಮತ್ತು ಜಯನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಚಾರಣೆ ಅಂಗವಾಗಿ  ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದ  ಎಎಸ್‍ಪಿ ಅನಿಲ್​ ಕುಮಾರ್ ಭೂಮರಡ್ಡಿ ಸಾರ್ವಜನಿಕರಿಗೆ ಬಹುಮುಖ್ಯ ಮಾಹಿತಿಯನ್ನ ತಿಳಿಸಿದ್ದಾರೆ. ಅನಿಲ್ ಕುಮಾರ್ ಭೂಮರೆಡ್ಡಿಯವರು ತಿಳಿಸಿದ ಸಲಹೆ ಸೂಚನೆಗಳು ಇಲ್ಲಿದೆ 

ಇತ್ತೀಚೆಗೆ ಸರಗಳ್ಳತನ, ಮನೆಗೆ ಬಂದು ಬಂಗಾರ ಇತರೆ ಬೆಲೆ ಬಾಳುವ ವಸ್ತುವನ್ನು ಪಾಲಿಶ್ ಮಾಡುವುದಾಗಿ ಹೇಳಿ ಬರುವುದು ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.

ವರ್ಚುವಲ್ ಜಗತ್ತಿನ ಮೂಲಕ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಆದ್ದರಿಂದ ಜನರು ಅತಿ ಎಚ್ಚರಿಕೆಯಿಂದ ಇರಬೇಕು. 

READ : ಕುವೆಂಪು ವಿಶ್ವವಿದ್ಯಾಲಯದ ವೆಬ್​ಸೈಟ್ ಹ್ಯಾಕ್ ! ಆಮೇಲಾನಾಯ್ತು?

ಸಾರ್ವಜನಿಕರು ಒಂದಕ್ಕಿಂತ ಹೆಚ್ಚು ದಿವಸ ಮನೆಗೆ ಬೀಗಹಾಕಿಕೊಂಡು ಹೋಗುವಾಗ ಸ್ಥಳೀಯ ಪೊಲೀಸ್​  ಠಾಣೆಗೆ ಮಾಹಿತಿ ನೀಡುವುದು ಹಾಗೂ ಬೆಲೆ ಬಾಳುವ ವಸ್ತುಗಳನ್ನು  ಬ್ಯಾಂಕ್ ಲಾಕರ್‍ನಲ್ಲಿ ಇಡುವುದು ಒಳ್ಳೆಯದು

ಮನೆಯಿಂದ ಹೊರಗೆ ಹೋಗುವಾಗ ಬಾಗಿಲಿಗೆ ಟಾಪ್‍ಲಾಕ್‍ನ್ನು ಹಾಕುವ ಬದಲು ಇಂಟರ್‍ಲಾಕ್ ಮಾಡುವುದು ಹಾಗೂ ಹಾಲಿನವರಿಗೆ, ಪೇಪರ್ ಹಾಕುವವರಿಗೆ ಮನೆಯಿಂದ ಹೊರಗೆ ಹೋಗುವಾಗ ಪೇಪರ್ ಮತ್ತು ಹಾಲು ಹಾಕದಂತೆ ತಿಳಿಸುವುದು. ಮನೆಯ ಕಿಟಕಿಯ ಪಕ್ಕದಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದಂತೆ ಎಚ್ಚರ ವಹಿಸುವುದು ಒಳ್ಳೆಯದು

ಹೆಂಗಸರು ಒಬ್ಬಂಟಿಯಾಗಿ ರಸ್ತೆಯಲ್ಲಿ ಓಡಾಡುವ ಸಮಯದಲ್ಲಿ ಕುತ್ತಿಗೆಯಲ್ಲಿನ ಬಂಗಾರದ ಆಭರಣಗಳು ಹೊರಗೆ ಎದ್ದುಕಾಣದಂತೆ ಮುಂಜಾಗ್ರತೆ ವಹಿಸುವುದು. 

ಸಾರ್ವಜನಿಕರು ತಮ್ಮ ದಾಖಲಾತಿ ಹಾಗೂ ಮೊಬೈಲ್ ಇನ್ನಿತರೆ ವಸ್ತುಗಳನ್ನು ಕಳೆದುಕೊಂಡಾಗ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಕೆಎಸ್‍ಪಿ ಆಪ್ ಡೌನ್‍ಲೋಡ್ ಮಾಡಿಕೊಂಡು ಇ-ಲಾಸ್ಟ್ ಕಂಪ್ಲೇಂಟ್ ರಿಜಿಸ್ಟರ್ ಮಾಡಿಕೊಳ್ಳುವುದು.

ಯಾವುದೇ ತುರ್ತು ಸಮಯದಲ್ಲಿ 112 ನಂಬರ್‍ಗೆ ಕರೆ ಮಾಡುವುದು. ರಸ್ತೆ ಸಂಚಾರದ ಸಮಯದಲ್ಲಿ ರಸ್ತೆ ಹಾಗೂ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು

ಜಾನುವಾರುಗಳನ್ನು ಸಾಕಿದ್ದಲ್ಲಿ ಅವುಗಳ ರಕ್ಷಣೆಗೆ ಕೊಟ್ಟಿಗೆ ಸುತ್ತ ಬೆಳಕಿನ ಹಾಗೂ ಮನೆಯಲ್ಲಿ ನೋಡಿದರೆ ಕಾಣುವ ಹಾಗೆ ನೋಡಿಕೊಳ್ಳುವುದು. 

ಸಾಧ್ಯವಾದಷ್ಟು ತಮ್ಮ ಮನೆಗಳಿಗೆ ಹಾಗೂ ಅಂಗಡಿಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು.

ಬ್ಯಾಂಕ್ ಅಧಿಕಾರಿ, ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿ ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಫೆÇೀನ್ ಮಾಡಿ. ಕಾರ್ಡ್ ನಂ/ಸಿವಿವಿ ನಂ/ಓಟಿಪಿ ಅನ್ನು ಪಡೆದು ಮೋಸ ಮಾಡುವವರ ಬಗ್ಗೆ ಎಚ್ಚರ ಇರಲಿ, ಯಾರಿಗೂ ಯಾವುದೇ ಕಾರಣಕ್ಕೂ ಓಟಿಪಿ ಅನ್ನು ನೀಡಬೇಡಿ.  

ಪ್ಲೇಸ್ಟೋರ್‍ನಲ್ಲಿ ಸಿಗುವ ಆಪ್‍ಗಳೆಲ್ಲ ಅಧಿಕೃತವಲ್ಲ. ನಕಲಿ ಆಪ್‍ಗಳ ಮೂಲಕ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ, ಆನ್‍ಲೈನ್ ಲೋನ್ ತೆಗೆಯುವುದಾಗಲಿ, ಸೋಲಾರ್/ಎನರ್ಜಿ/ಅಮೇಜಾನ್ ಮುಂತಾದ ಮೋಸದ ಆಪ್ ಬಳಕೆ ಮೂಲಕ ಹಣ ಹೂಡಿಕೆ ಮಾಡಿ ಮೋಸ ಹೋಗಬೇಡಿ

ಕೌನ್ ಬನೇಗಾ ಕರೋಡ್‍ಪತಿ/ ಬಾರಿ ಮೊತ್ತದ ಲಾಟರಿ/ ದಿನಪತ್ರಿಕೆ/ ಟಿವಿ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ ಆಮಿಷಗಳ ಮೂಲಕ ಟ್ರಾನ್ಸ್‍ಪೋರ್ಟ್ ಫೀ ಇತ್ಯಾದಿ ಫೀಗಳೆಂದು ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ವಂಚಕರಿಂದ ದೂರವಿರಿ. 

ಸಾರ್ವಜನಿಕರು ಸೈಬರ್ ಕ್ರೈಂಗೆ ಸಂಬಂಧಪಟ್ಟ ದೂರುಗಳನ್ನು ಆನ್‍ಲೈನ್ ಮೂಲಕವೂ ದಾಖಲಿಸಬಹುದಾಗಿದ್ದು ವೆಬ್‍ಸೈಟ್ ವಿಳಾಸ : www.cybercrime.gov.in  ಮತ್ತು ಜಿಲ್ಲಾ  ಪೊಲೀಸ್ ಕಂಟ್ರೋಲ್ ರೂಂ ನಂ.112/08182-261413, ಸಿ.ಇ.ಎನ್.ಕ್ರೈಂ ಪೊಲೀಸ್​ ಠಾಣೆ ನಂ.08182-261426/9480803383 ನ್ನು ಸಂಪರ್ಕಿಸಬಹುದಾಗಿದೆ