ಕರ್ನಾಟಕ ಮೆಚ್ಚುವ ಮಾದರಿ ವಿನ್ಯಾಸ ತಯಾರಿಸಿದರೇ ಸಿಗಲಿದೆ 25 ಸಾವಿರ ಬಹುಮಾನ ! ಏತಕ್ಕಾಗಿ ಗೊತ್ತಾ? ಇಲ್ಲಿದೆ ವಿಶೇಷ

Here is the announcement of the Department of Kannada and Culture regarding the Karnataka Celebration Programಕರ್ನಾಟಕ ಸಂಭ್ರಮ ಕಾರ್ಯಕ್ರಮದ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ಇಲ್ಲಿದೆ

ಕರ್ನಾಟಕ ಮೆಚ್ಚುವ ಮಾದರಿ ವಿನ್ಯಾಸ ತಯಾರಿಸಿದರೇ ಸಿಗಲಿದೆ 25 ಸಾವಿರ ಬಹುಮಾನ ! ಏತಕ್ಕಾಗಿ ಗೊತ್ತಾ? ಇಲ್ಲಿದೆ ವಿಶೇಷ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ಐವತ್ತು ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವ ಆಚರಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸ್ತಿದೆ. "ಕರ್ನಾಟಕ ಸಂಭ್ರಮ ೫೦" "ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ" ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. 

ಈ ಮೂಲಕ ಕರ್ನಾಟಕ ಸಂಭ್ರಮ 50 ಕ್ಕೆ  ವಿಶೇಷ ಮೆರುಗು ನೀಡಲು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉದ್ದೇಶಿಸಿದೆ. ವಿಶೇಷ ಅಂದರೆ, ಈ ಸಂಭ್ರಮದಲ್ಲಿ ಭಾಗಿಯಾಗಲು ನಾಡಿನ ಜನತೆಗೂ ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವಕಾಶ ನೀಡುತ್ತಿದೆ.  

ವಿಶೇಷ ಕಾರ್ಯಕ್ರಮಕ್ಕಾಗಿ  ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ(ಲೋಗೋ)ವನ್ನು ಬಳಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಸುಂದರವಾದ ಲಾಂಛನ(ಲೋಗೋ)ದ ಮಾದರಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ ರೂ 25,000/- ಗಳ ಬಹುಮಾನವನ್ನು ನಿಗದಿಪಡಿಸಲಾಗಿದೆ.

ಲಾಂಛನ(ಲೋಗೋ)ದ ಮಾದರಿಯನ್ನು ಕಳುಹಿಸಲು ದಿನಾಂಕ: 20.09.2023 to: 30.09.2023 ವರೆಗೆ ಅವಕಾಶವಿದೆ ಆಸಕ್ತರು ಈ ಕುರಿತು ಅಗತ್ಯ ಮಾಹಿತಿಗಳನ್ನು ಇಲಾಖೆಯ ಜಾಲತಾಣ https://www.kannadasiri.karnataka.gov.in ದಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ 


ಇನ್ನಷ್ಟು ಸುದ್ದಿಗಳು