WORLD SKILL INDIA COMPETITION-2024 / ಇಲ್ಲಿದೆ ವಿಶ್ವ ವೇದಿಕೆಯಲ್ಲಿ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ

World Skill India Competition-2024 / Here Is The Opportunity To Showcase Skills On The World Stage

WORLD SKILL INDIA COMPETITION-2024 / ಇಲ್ಲಿದೆ  ವಿಶ್ವ ವೇದಿಕೆಯಲ್ಲಿ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ
World Skill India Competition-2024 / Here Is The Opportunity To Showcase Skills On The World Stage

SHIVAMOGGA  |  Jan 10, 2024  |  ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು (KSDC) ವತಿಯಿಂದ ಆಯೋಜಿಸಿರುವ WORLD SKILL INDIA COMPETITION-2024 ಪೂರ್ವಭಾವಿ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ

ಸದ್ಯ ಈ ನೋಂದಣಿಗೆ ಇನ್ನಷ್ಟು ಅವಕಾಶ ನೀಡಲಾಗಿದೆ.  ದಿನಾಂಕ:15.01.2024 ವರೆಗೆ ನೋಂದಣಿ ಮಾಡಲು ದಿನಾಂಕ ಮುಂದೂಡಲಾಗಿದೆ.  

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು (KSDC) ವತಿಯಿಂದ “ವಿಶ್ವ ಕೌಶಲ್ಯ ಸ್ಪರ್ಧೆ" ಯನ್ನು ಆಯೋಜಿಸಲಾಗುತ್ತಿದೆ.. 

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು

ಈ ಸ್ಪರ್ಧೆಯಲ್ಲಿ ವಿವಿಧ 57 ಕೌಶಲ್ಯಗಳಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಜಿಲ್ಲಾ, ವಿಭಾಗ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವುದು.

ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ 2024ರಲ್ಲಿ ಫ್ರಾನ್ಸ್‌ನ ಲಿಯೋನ್ ನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. 

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ದಿನಾಂಕ:15.01.2024 ರ ವರೆಗೆ ನೋಂದಣಿ ಮಾಡಲು ದಿನಾಂಕ ಮುಂದೂಡಲಾಗಿದೆ. ಈ ಸಂಬಂಧ ವೆಬ್‌ಸೈಟ್‌ನಲ್ಲಿ www.skillindiadigital.gov.in ನೋಂದಣಿ ಮಾಡಿಕೊಳ್ಳಬೇಕು. 

ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕಛೇರಿ, ನಂ. 303/528, ಶಾಂತಲ ಟವರ್ಸ್, 2ನೇ ಮಹಡಿ, 3ನೇ ಅಡ್ಡರಸ್ತೆ, ನೆಹರುರಸ್ತೆ, ಗಾರ್ಡನ್‌ಏರಿಯಾ, ಶಿವಮೊಗ್ಗ.