ಶಿವಮೊಗ್ಗ | ಎರಡು ದಿನ ಮಾಂಸ ಮಾರಾಟ ಬಂದ್‌ | ಕಾರಣ ಇಲ್ಲಿದೆ

Shimoga | Sale of meat banned for two days | Here's the reason | Sri Rama Navami | Ayodhya | Mahavir Jayanti |

ಶಿವಮೊಗ್ಗ | ಎರಡು ದಿನ ಮಾಂಸ ಮಾರಾಟ ಬಂದ್‌ |  ಕಾರಣ ಇಲ್ಲಿದೆ
Sri Rama Navami , Mahavir Jayanti ,Sale of meat banned

Shivamogga  Apr 16, 2024   ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದ ನಂತರ ಆಗಮಿಸುತ್ತಿರುವ ರಾಮನವಮಿ ಸಕಲ ಸಿದ್ಧತೆಗಳು ಆರಂಭವಾಗಿದೆ. ಜೊತೆಯಲ್ಲಿ ಮಹಾವೀರ ಜಯಂತಿ ಕೂಡ ಬಂದಿದೆ. ಹೀಗಾಗಿ ಶಿವಮೊಗ್ಗದಲ್ಲಿ ಎರಡು ದಿನ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ 

17, 21ರಂದು ಮಾಂಸ ಮಾರಾಟ ನಿಷೇಧ

ಏಪ್ರಿಲ್ 17ರಂದು ಶ್ರೀ ರಾಮನವಮಿ ಹಾಗೂ 21ರಂದು ಮಹಾವೀರ ಜಯಂತಿ ಹಿನ್ನೆಲೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಬೇಕು. ಆದೇಶ ಉಲ್ಲಂಘಿ ಸಿದರೆ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ