ಕೆಎಸ್‌ ಈಶ್ವರಪ್ಪ 3, ಗೀತಾ ಶಿವರಾಜ್‌ ಕುಮಾರ್‌ 2 | ಇದುವರೆಗೂ ಶಿವಮೊಗ್ಗದಲ್ಲಿ ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು ಗೊತ್ತಾ?

KS Eshwarappa 3, Geetha Shivraj Kumar 2 | Do you know how many nominations have been submitted in Shimoga so far?

ಕೆಎಸ್‌ ಈಶ್ವರಪ್ಪ 3, ಗೀತಾ ಶಿವರಾಜ್‌ ಕುಮಾರ್‌ 2 | ಇದುವರೆಗೂ ಶಿವಮೊಗ್ಗದಲ್ಲಿ ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು ಗೊತ್ತಾ?
Shimoga Lok Sabha constituency

Shivamogga  Apr 16, 2024   ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shimoga Lok Sabha constituency) ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದೆ. ನಿನ್ನೆ ಒಂದೇ ದಿನ ನಾಲ್ಕು ಮಂದಿ ಒಟ್ಟು ಐದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

Shimoga Lok Sabha constituency

ವಿಶೇಷ ಅಂದರೆ ಈ ಮೊದಲು ಎರಡು ನಾಮಪತ್ರಗಳನ್ನ ಸಲ್ಲಿಸಿದ್ದ ಕೆಎಸ್‌ ಈಶ್ವರಪ್ಪ  (KS Eshwarappa)ನಿನ್ನೆ ಮೂರನೇ ನಾಮಪತ್ರವನ್ನು ಸಲ್ಲಿಸಿದರು. 

Shimoga Lok Sabha constituency

ಗೀತಾ ಶಿವರಾಜ ಕುಮಾರ್‌  ನಾಮಪತ್ರ ಸಲ್ಲಿಕೆ

 

ಲೋಕಸಭೆಗೆ ಆಯ್ಕೆ ಬಯಸಿ ನಿನ್ನೆ ಸೋಮವಾರ ಕಾಂಗ್ರೆಸ್‌ನಿಂದ ಗೀತಾ ಶಿವರಾಜಕುಮಾರ್ (Geeta Shivraj Kumar Nomination Submission) 2 ಪ್ರತಿ ನಾಮಪತ್ರಗಳನ್ನ ಸಲ್ಲಿಸಿದ್ದಾರೆ. 

Shimoga Lok Sabha constituency

 

ಇವರಷ್ಟೆ ಅಲ್ಲದೆ  ಪಕ್ಷೇತರ ಅಭ್ಯರ್ಥಿಗಳಾಗಿ ಪಿ.ಶ್ರೀಪತಿ ಮತ್ತು ಎನ್.ವಿ.ನವೀನ್ ಕುಮಾರ್ ತಲಾ ಒಂದು ಪ್ರತಿ ನಾಮಪತ್ರ ಸಲ್ಲಿಸಿದರು.

Shimoga Lok Sabha constituency

 

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮತ್ತೊಂದು ಪ್ರತಿ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಇದೂವರೆಗೆ 8 ಅಭ್ಯರ್ಥಿಗಳು 11 ಪ್ರತಿ ನಾಮಪತ್ರ ಸಲ್ಲಿಸಿದಂತಾಗಿದೆ.