Dwarakish | ಕನ್ನಡ ಸಿನಿಲೋಕದ ದಿಗ್ಗಜ ದ್ವಾರಕೀಶ್‌ ನಿಧನ | ಶಿವಮೊಗ್ಗದಲ್ಲಿ ಶಿವರಾಜ್‌ ಕುಮಾರ್‌ ಸಂತಾಪ

Dwarakish has passed away

Dwarakish | ಕನ್ನಡ ಸಿನಿಲೋಕದ ದಿಗ್ಗಜ ದ್ವಾರಕೀಶ್‌ ನಿಧನ | ಶಿವಮೊಗ್ಗದಲ್ಲಿ ಶಿವರಾಜ್‌ ಕುಮಾರ್‌ ಸಂತಾಪ
Dwarakish has passed away.

Shivamogga  Apr 16, 2024 ಕನ್ನಡದ ಸ್ಟಾರ್‌ ನಿರ್ದೇಶಕ, ಹೊಸತನಗಳ ಸಾಧಕ ಎನಿಸಿದ್ದ ದ್ವಾರಕೀಶ್‌ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇವತ್ತು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದ್ದಾರೆ. 

Kannada star director, innovator Dwarakish has passed away.

1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್‌ ಚಿತ್ರರಂಗದಲ್ಲಿ ಅದಿಪತ್ಯ ಸಾಧಿಸಿದ್ದರು. . ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ.  ಡಾ.ರಾಜಕುಮಾರ್‌ , ವಿಷ್ಣುವರ್ದನ್‌ರ ಜೊತೆಗೂಡಿ ಹಿಟ್‌ ಸಿನಿಮಾಗಳನ್ನ ನೀಡಿದ್ದ ದ್ವಾರಕೀಶ್‌ ಅಪರೂಪದ ರೆಕಾರ್ಡ್‌ಗಳನ್ನ ಕನ್ನಡ ಸಿನಿರಂಗದಲ್ಲಿ ದಾಖಲಿಸಿದ್ದಾರೆ. 

ಶಿವಣ್ಣ ಸಂತಾಪ

ಇನ್ನೂ ಶಿವಮೊಗ್ಗದಲ್ಲಿ ಚುನಾವಣೆ ಪ್ರಚಾರದಲ್ಲಿರುವ ನಟ ಶಿವರಾಜ್‌ ಕುಮಾರ್‌ ರವರು ದ್ವಾರಕೀಶ್‌ ಅಂಕಲ್‌ ರವರ ನಿಧನ ಬಹಳ ಕಷ್ಟವಾದ ಸಂಗತಿ ಎಂದಿದ್ದಾರೆ. ದೂರದ ಬೆಟ್ಟದ ಸಿನಿಮಾ ನಡೆಯುತ್ತಿದ್ದ ಸಮಯದಿಂದಲೂ ನಮಗವರು ತುಂಬಾನೇ ಆತ್ಮೀಯರು. ನಾವು ಅವರ ಮನೆಯಲ್ಲಿ ಆಡೀ ಬೆಳೆದವರು. ಅವರಿಲ್ಲ ಎಂಬ ನೋವನ್ನ ಸಹಿಸುವುದು ಕಷ್ಟವಾಗುತ್ತಿದೆ. ಅವರ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ