ಶಿವಮೊಗ್ಗ ಜಿಲ್ಲೆಯಲ್ಲಿ ಹಲವರ ಕಣ್ಣು ಕೆಂಪಾಗಿಸಿದ ಮದ್ರಾಸ್ ಐ ! ಮಕ್ಕಳನ್ನೆ ಹೆಚ್ಚು ಭಾದಿಸ್ತಿದೆ ಕೋಳಿಕಣ್ಣು

Madras Eye infection is spreading widely in Shivamogga district ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಮದ್ರಾಸ್ ಐ ಸೋಂಕು ಹರಡುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹಲವರ ಕಣ್ಣು ಕೆಂಪಾಗಿಸಿದ ಮದ್ರಾಸ್ ಐ ! ಮಕ್ಕಳನ್ನೆ ಹೆಚ್ಚು ಭಾದಿಸ್ತಿದೆ ಕೋಳಿಕಣ್ಣು

KARNATAKA NEWS/ ONLINE / Malenadu today/ Jul 24, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ನಡುವೆ ಮದ್ರಾಸ್ ಐನ  ಆತಂಕ ಹೆಚ್ಚಾಗುತ್ತಿದೆ. ಸಾಗರ, ತೀರ್ಥಹಳ್ಳಿ , ಹೊಸನಗರ ಸೇರಿದಂತೆ ಶಿವಮೊಗ್ಗ ನಗರದಲ್ಲಿ ಮದ್ರಾಸ್ ಐ ಕಾಣಿಸಿಕೊಳ್ಳುತ್ತಿದೆ. ಮೇಲಾಗಿ ಇದು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಸೋಂಕು ತಗುಲಿದ ವ್ಯಕ್ತಿಗೆ ಐದು ದಿನ ಸಮಸ್ಯೆ ಮಾಡುತ್ತಿದೆ. 

ಕಳೆದೊಂದು ತಿಂಗಳಿನಲ್ಲಿ ಮದ್ರಾಸ್ ಐ ಸೋಂಕಿನ ಬಗ್ಗೆ ನೆಂಟರಿಷ್ಟರು, ಸ್ನೇಹಿತರು ಹೇಳಿದ್ದನ್ನ ಹಲವರು ಕೇಳಿದ್ಧಾರೆ. ಬಹುತೇಕ ಪ್ರಕರಣಗಳಲ್ಲಿ ಮಕ್ಕಳಿಂದ ಪೋಷಕರಿಗೆ ಕಣ್ಣಾಗಿರುವ ಬಗ್ಗೆ ವರದಿಯಾಗುತ್ತಿದೆ. ಇನ್ನೂ ಶಾಲೆಗಳಲ್ಲಿ ಮದ್ರಾಸ್ ಐ ಆತಂಕದಿಂದ ರಜೆ ನೀಡಲಾಗುತ್ತಿದೆ. ಮತ್ತು ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ತಿರುವುದು ಪೋಷಕರ ತಲೆಬಿಸಿಗೆ ಕಾರಣವಾಗಿದೆ. 

ಏನಿದು ಮದ್ರಾಸ್ ಐ?  (madras eye)

ಮಳೆಗಾಲದ ಸಂದರ್ಭದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಕಣ್ಣಿಗೆ ಸಂಬಂಧಿಸಿದ ಸೋಂಕನ್ನು ಮದ್ರಾಸ್ ಐ ಎನ್ನಲಾಗುತ್ತದೆ. ವೈದ್ಯರು ಹೇಳುವ ಪ್ರಕಾರ ಕಣ್ಣುಗಳನ್ನು ಹೆಚ್ಚು ಸಲ ಮುಟ್ಟಿಕೊಳ್ಳುವುದರಿಂದ ಮಕ್ಕಳಲ್ಲಿ ಈ ಸೋಂಕು ಬೇಗ ಕಾಣಿಸಿಕೊಳ್ಳುತ್ತದೆ ಮತ್ತು ವಾತಾವರಣ ತಂಪಾಗಿದ್ದಷ್ಟು ಈ ಸೋಂಕು ಬೇಗ ಹರಡುತ್ತದೆಯಂತೆ. ಹಾಗಂತ ಮದ್ರಾಸ್ ಐನಿಂದ ತುಂಬಾ ಸಮಸ್ಯೆಗಳು ಆಗುವುದಿಲ್ಲ. ಹೆಚ್ಚೆಂದರೆ ಚೂರು ನೋವು ಕೊಟ್ಟು,  ನಾಲ್ಕೈದು ದಿನ ರೆಸ್ಟ್​ ಕೊಡುತ್ತದೆ. ಎಕೆಂದರೆ ಕಣ್ಣಾಗಿದೆ ಎಂದರೆ,  ಹತ್ತಿರವೂ ಬಿಟ್ಟುಕೊಳ್ಳುವುದೇ ಮನೆಯಲ್ಲಿ ಇರಿ ಎಂದು ತಾಕೀತು ಮಾಡುವವರೇ ಹೆಚ್ಚು. ಸಾಮಾನ್ಯವಾಗಿ ಈ ಸೋಂಕು ತಗುಲಿದ್ದಲ್ಲಿ ಸಣ್ಣಗೆ ಜ್ವರ ಬಂದು , ಕಣ್ಣಿನಲ್ಲಿ ಪಿಸುರು ಬರಲು ಆರಂಭವಾಗುತ್ತದೆ , ನಿಧಾನವಾಗಿ ಕಣ್ಣು ಕೆಂಪಾಗುತ್ತದೆ. ಶೀತ, ಜ್ವರ ಕೆಮ್ಮಿನೊಂದಿಗೆ ನಾಲ್ಕೈದು ದಿನಗಳಲ್ಲಿ ಬಾವು ಕಡಿಮೆಯಾಗುತ್ತದೆ. 

ನೆರೆ ಜಿಲ್ಲೆ ದಾವಣಗೆರೆಯಲ್ಲಿಯು ಮದ್ರಾಸ್ ಐ ಸೋಂಕು ವಿಪರೀತವಾಗಿ ಹರಡುತ್ತಿದೆ. ಮಳೇಗಾಲದಲ್ಲಿ ವಾತಾವರಣ ಬಹಳ ತಂಪಾಗಿರುವ ಕಾರಣ ಸೋಂಕುಗಳು ಸಹಜವಾಗಿ ಹರಡುತ್ತದೆ. ಕಣ್ಣುಗಳನ್ನು ಪದೇ ಉಜ್ಜಿಕೊಳ್ಳುವುದು, ತಿಕ್ಕಿಕೊಳ್ಳುವುದು, ಸೋಂಕಿರುವ ವ್ಯಕ್ತಿಗಳ ಸಂಪರ್ಕಕ್ಕೆ ಬರುವುದರಿಂದ ವೈರಸ್ ಬೇಗ ತಗಲುತ್ತದೆ ಎನ್ನುತ್ತಾರೆ ವೈದ್ಯರು. ಅಲ್ಲದೆ  ಖಾಸಗಿ ವೈದ್ಯರೊಬ್ಬರ ಪ್ರಕಾರ, ಸದ್ಯ ಕಾಣಿಸಿರುವ ವೈರಸ್ ಮೈಲ್ಡ್ ಆಗಿದ್ದು, ಮಕ್ಕಳಲ್ಲಿ ಕಣ್ಣಿನ ಬೇನೆ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಂತ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ. 

ಒಟ್ಟಾರೆ, ಈ ಸಲ ಕೋಳಿಕಣ್ಣು, ಮದ್ರಾಸ್ ಐ, ಚೆನ್ನೈ ಐ, ಹೀಗೇ ನಾನಾ ಹೆಸರಿನಿಂದ ಕರೆಸಿಕೊಳ್ಳುವ ಕಣ್ಣಿನ ಬೇನೆ ಸಾಕಷ್ಟು ತಲೆಬಿಸಿ ಮಾಡುತ್ತಿದೆ. ಭರಪೂರ ಮಳೆಯ ನಡುವೆ ವೀಕೆಂಡ್​ನಲ್ಲಿ ಪೋಷಕರಿಗೆ ಹೊರಕ್ಕೆ ಹೋಗದಂತೆ ಮನೆಯಲ್ಲಿಯೇ ಕಟ್ಟಿಹಾಕುತ್ತಿದೆ. ಕಪ್ಪು ಕನ್ನಡಕ ಹಾಕಿಕೊಂಡು ಓಡಾಡುವಂತೆ ಮಾಡುತ್ತಿದೆ. ಮಕ್ಕಳಲ್ಲಿ ತುಸು ಜಾಸ್ತಿ ಕಿರಿಕಿರಿ ಮಾಡುತ್ತಿದೆ. ಆದರೆ ಇದರಿಂದ ಮಾರಕ ಹಾನಿಯಾಗದು, ತುಸು ಜಾಗ್ರತೆ ವಹಿಸಿ, ಆಗಾಗ ಕೈಗಳನ್ನು ತೊಳೆದುಕೊಳ್ಳುವುದು ಹಾಗೂ ಪದೇ ಪದೇ ಕಣ್ಣನ್ನ ಮುಟ್ಟಿಕೊಳ್ಳದೆ ಇದ್ದರೇ ಸೋಂಕು ತಗಲುವುದನ್ನ ತಡೆಯಬಹುದು.   

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

madras eye, about madras eye, about madras eye in tamil, why madras eye comes, why is it called madras eye, how long does madras eye last, madras eye vs conjunctivitis, madras eye why the name, how to prevent madras eye, what is madras eye, madras eye with fever, is madras eye contagious, madras eye precautions, madras eye other name, madras eye also called as, madras eye is also known as, madras eye in english, madras eye in tamil, madras eye in babies, madras eye in kannada, madras eye in tamilnadu, Omadras eye in telugu, madras eye in medical term, madras eye in bangalore, madras eye in toddlers, madras eye in pregnancy, how to prevent madras eye before coming, madras eye tamil,, madras eye care bareilly, madras eye hospital, madras eye symptoms tamil, madras eye meaning in tamil, madras eye and fever, Omadras eye for babies,