ಕುಡುಗೋಲಿಗೂಅರೆಸ್ಟ್ ಮಾಡ್ತಾರಾ? ಗಾಂಜಾ ಕಿಕ್​, ಕೋರ್ಟ್​​ಲ್ಲಿ ಕಿರಿಕ್​! ಹೊಸ ಕಾರಿನ ಮೇಲೆ ಬಿದ್ದ ಮರ! ಮೋರಿಗೆ ಜಾರಿದ ಬಸ್! ಬೈಕ್​ ಆಟೋ ಡಿಕ್ಕಿ TODAY @NEWS

Malenadu Today

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS 

ಕುಡುಗೋಲಿಗೂ ಮಚ್ಚಿಗೂ ವ್ಯತ್ಯಾಸಗೊತ್ತಿಲ್ಲವಾ?

ರೈತರ ಬಳಿ ಕುಡುಗೋಲು ಇರುವುದು ಮಾಮೂಲು, ಆದರೆ ಕತ್ತಿ, ಕುಡುಗೋಲು ಮತ್ತು ಮಚ್ಚು ಯಾವುದು ಎನ್ನುವ ವ್ಯತ್ಯಾಸವೇ ತಿಳಿಯದ ಅಧಿಕಾರಿಗಳು, ರಾಜಕೀಯ ಪ್ರೇರಿತ ಮಾತು ಕೇಳಿಕೊಂಡು, ಕೊಲೆ ಯತ್ನಕ್ಕೆ ಮಚ್ಚು ಹಿಡಿದು ಬಂದಿದ್ದರು ಎಂದು ಸುಳ್ಳು ದೂರು ದಾಖಲಿಸುವುದು ಅಕ್ಷಮ್ಯ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ಧಾರೆ, ಮಡಸೂರು ಗ್ರಾಮದ ಸರ್ವೇ ನಂ. 71ರ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ 7 ರೈತರ ಬಂಧನ ಬಗ್ಗೆ ಮಾತನಾಡಿದ ಅವರು,  ಆ ರೈತರು ಯಾವ ರೀತಿ ಕೊಲೆ ಯತ್ನ ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಬೇಕು. ವಿನಾಕಾರಣ ರಾಜಕೀಯ ಪ್ರೇರಿತವಾಗಿ ರೈತರ ಕೃಷಿಗೆ ತೊಂದರೆ ಕೊಡುವುದನ್ನು ಯಾರೂ ಸಹಿಸಲಾಗದು ಎ೦ದಿದ್ದಾರೆ. 

ಗಾಂಜಾ ನಶೆಯಲ್ಲಿ ಕೋರ್ಟ್​ನಲ್ಲಿ ಕಿರಿಕ್​

ದೊಡ್ಡಪೇಟೆ ಪೊಲೀಸ್ ಸ್ಟೇಷನ್ (Doddpet Police Station) ವ್ಯಾಪ್ತಿಯಲ್ಲಿ ನಡೆದ ಗಲಾಟೆ ಸಂಬಂಧ ವಿಚಾರಣೆಗೆ ಅಂತಾ ಶಿವಮೊಗ್ಗ ಕೋರ್ಟ್​ಗೆ ಬಂದಿದ್ದ ವ್ಯಕ್ತಿಯೊಬ್ಬ ಗಾಂಜಾ ನಶೆಯಲ್ಲಿ ನ್ಯಾಯಾಲಯದ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು ಈ ಸಂಬಂಧ ಕೇಸ್ ದಾಖಲಾಗಿದೆ. ಈ ಸಂಬಂದ ಜಯನಗರ ಪಿಎಸ್​ನಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನ ವೈದ್ಯಕೀಯ ಪರೀಕ್ಷೆಗೆ  ಒಳಪಡಿಸಿದಾಗ, ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.  

ಆಟೋ ಬೈಕ್​ ನಡುವೆ ಡಿಕ್ಕಿ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ನ್ಯೂಟೌನ್ ಠಾಣಾ ವ್ಯಾಪ್ತಿಯ ಕಾರ್ಪೊರೇಷನ್ ಹತ್ತಿರ ಆಟೋ & ಬೈಕ್ ನಡುವೆ ಅಪಘಾತವಾಗಿದೆ. ಗಟನೆಯಲ್ಲಿ ಎರಡು ವಾಹನಗಳುಜಖಂಗೊಂಡಿದ್ದು, ವಾಹನದಲ್ಲಿದ್ದವರು ಗಾಯಗೊಂಡಿದ್ದಾರೆ. ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಬಂದ  ERV ಸಿಬ್ಬಂದಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಟ್ರಾಫಿಕ್ ಠಾಣೆ ಸಿಬ್ಬಂದಿ ಸಹಾಯದಿಂದ ವಾಹನಗಳನ್ನು ಠಾಣೆಗೆ ರವಾನಿಸಿದ್ದಾರೆ. 

Malenadu Today

ಆಟೊ ರಾಮು ಮಗಳು ನೇಹಾಗೆ 5 ಚಿನ್ನ

ಕುವೆಂಪು ವಿವಿಯ ಘಟಿಕೋತ್ಸವದಲ್ಲಿ ಶಿವಮೊಗ್ಗದ ಅಣ್ಣಾನಗರದ ಆಟೋ ಚಾಲಕ ಕೆ.ರಾಮು ಮತ್ತು ಎಸ್.ಬಿ.ಶಾಂತಿ ದಂಪತಿ ಪುತ್ರಿ  ಆರ್ ನೇಹಾ ಎಂಬಿಎದಲ್ಲಿ ಪ್ರಥಮ ಬ್ಯಾಂಕ್ ನೊಂದಿಗೆ 5 ಚಿನ್ನದ ಪದಕಗಳನ್ನು ಗಳಿಸಿದ್ಧಾರೆ. ‘ಅಪ್ಪ 30 ವರ್ಷದಿಂದ ಆಟೊ ಓಡಿಸುತ್ತಿದ್ದಾರೆ. ಅವರ ಬದುಕಿನ ಬಂಡಿ ಮುನ್ನಡೆಸಲು ನೆರವಾಗಬೇಕು ಎಂಬುದು ನನ್ನ ಕನಸಾಗಿತ್ತು. ಹೀಗಾಗಿ ಕಷ್ಟಪಟ್ಟು ಓದಿದೆ. ಒಳ್ಳೆ ಫಲ ಸಿಕ್ಕಿದೆ. ಬೆಂಗಳೂರಲ್ಲಿ ಖಾಸಗಿ ಕಂಪನಿಯ ಹಣಕಾಸು ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದೇನೆ. ಹಣಕಾಸು ವಿಭಾಗದಲ್ಲೆ ಪಿಎಚ್‌ಡಿ ಮಾಡುವ ಗುರಿ ಇದೆ ಎಂದು ತಿಳಿಸಿದ್ಧಾರೆ. 

ಕಾರಿನ ಮೇಲೆ ಬಿದ್ದ ಮರ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದುರ್ಗಮಹಳ್ಳ ಕಾಳಭೈರವೇಶ್ವರ ದೇವಸ್ಥಾನದ ಬಳಿ ಭಾರಿ ಮಳೆಗೆ ಮರವೊಂದು ಉರುಳಿಬಿದ್ದಿದೆ. ಹೊಚ್ಚ ಹೊಸ  ಬಲೆನೋ ಕಾರಿನ ಮೇಲೆಯೇ ಮರ ಉರುಳಿದ್ದು, ಕಾರು ಪೂರ್ಣ ಜಖಂಗೊಂಡಿದ್ಧಾನೆ. ಮಳೆ ಗಾಳಿಗೆ ಎಲ್ಲೆಂದರಲ್ಲಿ ಮರಗಳು ಉರುಳುತ್ತಿದ್ದು, ವಾಹನ ಸವಾರರು ಸಂಚರಿಸುವಾಗ ಎಚ್ಚರಿಕೆಯಿಂದ ಪ್ರಯಾಣಿಸಬೇಕಾಗಿದೆ. 

ಮೋರಿಗೆ ಜಾರಿದ ಬಸ್​  

ರಿಪ್ಪನ್‌ಪೇಟೆ ಕಡೆಯಿಂದ ಶಿವಮೊಗ್ಗದತ್ತ ತೆರಳುತಿದ್ದ KSRTC ಬಸ್ ಸೂಡೂರು ಗೇಟ್ ಬಳಿಯಲ್ಲಿ ವಾಹನವೊಂದನ್ನು ಓವರ್ ಟೇಕ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಚರಂಡಿಗೆ ಉರುಳಿಬಿದ್ದಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,  ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ವರದಿಯಾಗಿದೆ.  

Malenadu Today

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 

 

Share This Article