ವಿಮಾನದಲ್ಲಿದ್ದವರಿಗೆ ಸಿಕ್ತು ಬೆಳ್ಳಿ ಕಾಯಿನ್​, ಬಿಎಸ್​ವೈ ಹೊಗಳಿದ ಪಾಟೀಲ್​ರು! ಇಂಡಿಗೋ ಪ್ಲೈಟ್​ನ ರೂಟ್ ಗೊತ್ತೇನು! 5 ಪಾಯಿಂಟ್ಸ್​ ಸ್ಟೋರಿ!

Shimoga Airport, IndiGo flight, commercial flight launch programme, ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ವಿಮಾನ, ವಾಣಿಜ್ಯಯಾನ ವಿಮಾನ ಯಾನಕ್ಕೆ ಚಾಲನೆ ಕಾರ್ಯಕ್ರಮದ ವಿಶೇಷತೆಗಳು

ವಿಮಾನದಲ್ಲಿದ್ದವರಿಗೆ ಸಿಕ್ತು ಬೆಳ್ಳಿ ಕಾಯಿನ್​, ಬಿಎಸ್​ವೈ  ಹೊಗಳಿದ ಪಾಟೀಲ್​ರು!  ಇಂಡಿಗೋ ಪ್ಲೈಟ್​ನ ರೂಟ್ ಗೊತ್ತೇನು!  5 ಪಾಯಿಂಟ್ಸ್​ ಸ್ಟೋರಿ!

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಯಾನಕ್ಕೆ ಚಾಲನೆ ಸಿಕ್ಕಿದೆ . ಈ ನಿಟ್ಟಿನಲ್ಲಿ ಇವತ್ತು ನಡೆದ ಕಾರ್ಯಕ್ರಮ ಹಾಗೂ ವಿಮಾನ ನಿಲ್ದಾಣ ಮತ್ತು ವಿಮಾನದ ಕುರಿತಾದ ವಿಶೇಷ ಸಂಗತಿಗಳನ್ನು ನೋಡುವುದಾದರೆ, ಇವತ್ತು, ಬೆಳಗ್ಗೆ ಬೆಂಗಳೂರಿನಿಂದ ಬಂದಿಳಿದ ವಿಮಾನ  ಎಟಿರ್‌ 72 ಮಾದರಿಯ ವಿಮಾನವಾಗಿದೆ.  

ಇಂಡಿಗೋ ವಿಮಾನ ಎಷ್ಟೊತ್ತಿಗೆ ಬಂತು

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ 6E 77312 ವಿಮಾನ ಹೊರಟು ಕುವೆಂಪು ವಿಮಾನ ನಿಲ್ದಾಣಕ್ಕೆ ಬೆ. 10:40 ಕ್ಕೆ ಆಗಮಿಸಿತು. ವಿಮಾನದಲ್ಲಿ 74 ಸೀಟುಗಳಿದ್ದು,  ಸುಮಾರು 70 ಜನರು ಇವತ್ತು ಪ್ರಯಾಣಿಸಿದ್ರು.  ಮೊದಲ ವಾಣಿಜ್ಯ ವಿಮಾನದಲ್ಲಿ ಬಂದವರಿಗೆ  ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ವಿಮಾನ ನಿಲ್ದಾಣದ ನಿರ್ದೇಶಕರು ಹೂಗುಚ್ಚ ನೀಡಿ ಸ್ವಾಗತಿಸಿದ್ರು. 

ಮದ್ಯಾಹ್ನ ಬೆಂಗಳೂರಿಗೆ ವಾಪಸ್ 

ಇನ್ನೂ ಬೆಂಗಳೂರಿನಿಂದ ಬಂದಿದ್ದ ಇಂಡಿಗೋ ವಿಮಾನ ಮೊದಲ ದಿನ ಹಾಗೂ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತುಸು ತಡವಾಗಿ ಬೆಂಗಳೂರಿಗೆ ಹೊರಟಿತು. ಮಧ್ಯಾಹ್ನ 12.08ಕ್ಕೆ ಶಿವಮೊಗ್ಗದಿಂದ ಹೊರಟ ವಿಮಾನದಲ್ಲಿ. ಸಚಿವ ಎಂ.ಬಿ.ಪಾಟೀಲ್‌, ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ಬೆಂಗಳೂರಿಗೆ ಪ್ರಯಾಣಿಸಿದರು. 

ದಿನನಿತ್ಯದ ಪ್ರಯಾಣ ಹೇಗಿರುತ್ತೆ 

ಎಟಿರ್‌ 72 ಮಾದರಿ ವಿಮಾನವು  ಇವತ್ತು ಬೆಳಗ್ಗೆ ಹುಬ್ಬಳ್ಳಿಯಿಂದ ಬೆಳಗ್ಗೆ 9.10ಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ಬೆಳಗ್ಗೆ 9.56ಕ್ಕೆ ಬೆಂಗಳೂರಿನಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಿತ್ತು. 12.08ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿತ್ತು. ಅಲ್ಲಿಂದ  ಮಧ್ಯಾಹ್ನ 1.43ಕ್ಕೆ ತಮಿಳುನಾಡಿನ ಟುಟಿಕಾರನ್​ಗೆ ತೆರಳಿದೆ.  ಸಂಜೆ ವೇಳೆಗೆ ಇದೇ ವಿಮಾನ ಬೆಳಗಾವಿಗೆ ತೆರಳಲಿದೆ. ಇನ್ಮುಂದೆ ಇದು ಇಂಡಿಗೋ ವಿಮಾನದ ರೂಟ್ ಆಗಲಿದೆ.  

ಬಿಎಸ್​ವೈಗೆ ಅಭಿನಂದನೆ 

ಇನ್ನೂ ಸಚಿವ ಎಂಬಿ ಪಾಟೀಲ್​ ಇವತ್ತು ಬೆಳಗ್ಗೆ ವಿಮಾನಯಾನಕ್ಕೆ ಚಾಲನೆ ನೀಡಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಮಾಜಿ ಸಿಎಂರನ್ನು ಭೇಟಿಯಾಗುತ್ತಲೇ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಆನಂತರ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಎಂ ಬಿ ಪಾಟೀಲ್​,   ವಿಮಾನ ನಿಲ್ದಾಣದ ಕನಸು ನನಸ್ಸಾಗಿದ್ದು  ಯಡಿಯೂರಪ್ಪರವರಿಂದ ಎನ್ನುತ್ತಾ ಅವರಿಗೆ ಅಭಿನಂದನೆಗಳು ತಿಳಿಸಿದರು.  

ವಿಮಾನದಲ್ಲಿ ಬೆಳ್ಳಿ ಕಾಯಿನ್​ 

ಇನ್ನೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಯೂಥ್‌ ಹಾಸ್ಟೆಲ್‌ ವತಿಯಿಂದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ಪ್ರಯಾಣದ ಅವಧಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ನಮ್ಮೂರು ಶಿವಮೊಗ್ಗ ನಮಗೆಷ್ಟು ಗೊತ್ತು ಎಂಬ ಸಬ್ಜೆಕ್ಟ್​ನ ಮೇಲೆ ಕೇಳಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಹತ್ತು ಬೆಳ್ಳಿ ಕಾಯಿನ್​ಗಳನ್ನು ನೀಡಲಾಗಿದೆ.   


ಇನ್ನಷ್ಟು ಸುದ್ದಿಗಳು