ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?

Shivamogga Airport Inauguration Expenditure

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?

ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ, ಆ ಕಾರ್ಯಕ್ರಮಕ್ಕೆ ಎಷ್ಟು ಜನರು ಬಂದರು, ಹೋದರು ಎಂಬುದಕ್ಕಿಂತಲೂ ಹೆಚ್ಚಾಗಿ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಎಷ್ಟು ಎನ್ನುವ ಪ್ರಶ್ನೆಯೇ ಕುತೂಹಲ ಮೂಡಿಸಿರುತ್ತದೆ. ಇದೇ ರೀತಿಯಲ್ಲಿ ಕೇಳಿಬಂದ, ಶಿವಮೊಗ್ಗ ವಿಮಾನ ನಿಲ್ಧಾಣದ ಉದ್ಘಾಟನೆ ಕಾರ್ಯಕ್ರಮಕ್ಕೆ ಆದ ಖರ್ಚುವೆಚ್ಚವೆಷ್ಟು ಎಂಬ ಪ್ರಶ್ನೆಯು ಇದೀಗ ಉತ್ತರ ಪಡೆದುಕೊಂಡಿದೆ. 

Shivamogga Airport ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? 

ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ಧಾಣ ಹೆಸರು ನಿಕ್ಕಿಯಾಗಿಲ್ಲವಾದರು ಕುವೆಂಪು ವಿಮಾನ ನಿಲ್ಧಾಣ ಎಂದು ಹೆಸರಿಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ.ಇನ್ನೂ ಈ ವಿಮಾನ ನಿಲ್ಧಾಣದ ಕಾರ್ಯಕ್ರಮಕ್ಕೆ ಖರ್ಚಾ ಮಾಡಲು ಅನುಮೋದನೆಗೊಂಡ ಅನುಧಾನ ಎಷ್ಟು ಎಂಬುದಕ್ಕೆ ಕರ್ನಾಟಕ ರಾಜ್ಯಪತ್ರದಲ್ಲಿಯೇ ಉತ್ತರಿಸಲಾಗಿದೆ. ದಿನಾಂಕ 23-02-2023ರಂದು ಪ್ರಕಟಿಸಿರುವ ರಾಜ್ಯಪತ್ರದಲ್ಲಿ ಒಟ್ಟು 21 ಕೋಟಿ ರೂಪಾಯಿಗಳ ಖರ್ಚಿಗೆ ಅನುಮೋದನೆ ನೀಡಲಾಗಿದೆ.  

ಯಾವುದಕ್ಕೆ ಎಷ್ಟು?

ಪ್ರಧಾನಿಯವರ ಗ್ರೀನ್ ರೂಮ್, ಫ್ಲವರ್ ಡೆಕೊರೇಷನ್, ಗಣ್ಯರು ಕೂರಲು ಜರ್ಮನ್ ಮಾದರಿಯ ವಾಟರ್ ಫ್ರೂಪ್ ಪೆಂಡಾಲ್, ಸ್ಟೇಜ್ ಮುಂಭಾಗದ ಡಯಾಸ್ ಪುಡ್​ ಕೌಂಟರ್, ಇಲೆಕ್ಟ್ರಿಕಲ್ ಸಿಸ್ಟಂ, ಪವರ್ ಜನರೇಟರ್, ಫೋಟೊ- ವೀಡಿಯೊಗ್ರಫಿ ಮತ್ತು ವಿಮಾನ ನಿಲ್ದಾಣದ ಉದ್ಘಾಟನೆಗೆ ಸಾರ್ವಜನಿಕರನ್ನು ಕರೆ ತರುವ ಖರ್ಚು ಸೇರಿ ಒಟ್ಟು 21 ಕೋಟಿ ರೂಪಾಯಿಗಳ ಅನಧಾನ ನೀಡಲಾಗಿತ್ತು. ಈ ಪೈಕಿ ಒಟ್ಟಾರೆ ಖರ್ಚು ಎಷ್ಠಾಗಿದೆ ಎಂಬುದರ ವಿವರ ಇನ್ನಷ್ಟೆ ಸಿಗಬೇಕಿದೆ. 

ಆರ್​ಟಿಐ ನಲ್ಲಿ ಹೊರಬಿದ್ದ ಮಾಹಿತಿ ಏನು? 

ಇನ್ನೊಂದೆಡೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಜನರನ್ನು ಕರೆತರುವುದಕ್ಕಾಗಿ ರಾಜಪತ್ರದಲ್ಲಿ 4.24 ಕೋಟಿ ರೂಪಾಯಿ ನೀಡಲಾಗಿತ್ತು. ಈ ಪೈಕಿ ಎಷ್ಟು ಖರ್ಚಾಗಿದೆ ಎಂದು,  ಕಾನೂನು ವಿದ್ಯಾರ್ಥಿಯೊಬ್ಬರು ಮಾಹಿತಿ ಹಕ್ಕು ಅಡಿ ಮಾಹಿತಿ ಕೇಳಿದ್ದರು.  ಆಕಾಶ್ ಆರ್.ಪಾಟೀಲ್ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಜನರನ್ನು ಕರೆತರಲು ಎಷ್ಟು ಬಸ್ಸುಗಳನ್ನು ಬಳಸಲಾಗಿತ್ತು, ಅದಕ್ಕೆ ವೆಚ್ಚವಾಗಿದ್ದೆಷ್ಟು ಮತ್ತು ಹಣ ಪಾವತಿಸಿದವರಾರು ಎಂದು ಮಾಹಿತಿ ಕೇಳಿದ್ದರು. ಇವರ ಪ್ರಶ್ನೆಗಳಿಗೆ  ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಉತ್ತರ ನೀಢಿದ್ದು,  ಜಿಲ್ಲೆಯ ವಿವಿಧೆಡೆಯಿಂದ ವಿಮಾನ ನಿಲ್ದಾಣಕ್ಕೆ ಜನರನ್ನು ಕರೆತರಲು 1600 KSRTC ಬಸ್ಸುಗಳನ್ನು ಬಳಕೆ ಮಾಡಲಾಗಿತ್ತು ಇವುಗಳ  ಬಾಡಿಗೆ ಮೊತ್ತ 3,93,92,565 ರೂಪಾಯಿ ಹಾಗೂ ಕಾರ್ಯಪಾಲಕ ಇಂಜಿನಿಯರ್ ಅವರು ಈ ಬಾಡಿಗೆ ಹಣ ಪಾವತಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.  

ಇದನ್ನು ಸಹ ಓದಿ



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS

 

HASHTAGS

 

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga

#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnada Around ₹3.94cr was spent by the State gvnt for bringing people in 1,600 KSRTC buses for inauguration of the Shivamogga airport. This was obtained through an RTI filed by a citizen. RTI reply states that the money for hiring buses was paid by an ‘executive engineer’ of Shivamogga shivamogga airport,shivamogga airport inauguration,pm modi inaugurate shivamogga airport,shivamogga,airport,pm modi inaugurates shivamogga airport,shivamogga airport​,shivamogga new airport,shivamogga mp,shivamogga airport project,reacts on shivamogga airport,shivamoga airport,new airport,pm modi in shivamogga,shimoga airport,pm modi to inaugurate shivamogga airport,shivamogga airport live,#shivamogga airport,shivamogga airport opening,sogane airport