ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮಕ್ಕೆ ಮಕ್ಕಳ ಬಳಕೆಗೆ ವಿರೋಧ

Malenadu Today

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ವಿಮಾನ ನಿಲ್ಧಾಣ ಉದ್ಘಾಟನೆ ಬಿಜೆಪಿ ಕಾರ್ಯಕ್ರಮ ಆಗುತ್ತಿದೆ, ಸರ್ಕಾರಿ ಕಾರ್ಯಕ್ರಮವಾಗುತ್ತಿಲ್ಲ ಮೇಲಾಗಿ ಬೇರೆ ಬೇರೆ ತಾಲ್ಲೂಕುಗಳಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಿ, ಶಾಲೆ ಮಕ್ಕಳನ್ನು ಕರೆದುಕೊಂಡು ಬರಲಾಗುತ್ತಿದೆ ಎಂದು ಸ್ವರಾಜ್​ ಇಂಡಿಯಾದ ಕೆ.ಪಿ. ಶ್ರೀಪಾಲ್​ ಆರೋಪಿಸಿದ್ದಾರೆ

READ :  ಪ್ರಯಾಣಿಕರಲ್ಲಿ ವಿನಂತಿ! ಫೆಬ್ರವರಿ 26 ಮತ್ತು 27 ಕೆಎಸ್​ಆರ್​ಟಿಸಿ ಬಸ್ ಸಂಚಾರಲ್ಲಿ ವ್ಯತ್ಯಯ! ಕಾರಣ ಇಲ್ಲಿದೆ

ಏರ್​ಪೋರ್ಟ್ ನಿರ್ಮಾಣಕ್ಕೆ ಬಿಎಸ್​ವೈರವರೇ ಕಾರಣ! ಅಲ್ಲದೆ ಅವರ ಆಸಕ್ತಿಯ ಜೊತೆ ಬಿವೈ ರಾಘವೇಂದ್ರರ ನಿರಂತರ ಪ್ರಯತ್ನವು ಸಹ ಏರ್​ಪೋರ್ಟ್ ಕನಸನ್ನು ಸಾಕಾರಗೊಳಿಸಿದೆ. ಆದಾಗ್ಯು ವಿಮಾನ ನಿಲ್ಧಾಣಕ್ಕೆ ಜನರು ಭೂಮಿಕೊಟ್ಟು ತಮ್ಮ ಬದುಕನ್ನ ತ್ಯಾಗ ಮಾಡಿದ್ದಾರೆ ಎಂಬುದನ್ನ ಸ್ಮರಿಸಬೇಕಿದೆ. ಉದ್ಘಾಟನಾ ಕಾರ್ಯಕ್ರಮವನ್ನು ಜನರ ತೆರಿಗೆ ಹಣದಲ್ಲಿ ಮಾಡಲಾಗುತ್ತಿದೆ. ಆದರೆ ಇದು ಬಿಜೆಪಿ ಸಮಾವೇಶ  ಆಗಬಾರದು ವಿವಿಧ ತಾಲ್ಲೂಕುಗಳಿಂದ ಮಕ್ಕಳನ್ನು ಕರೆಸಲಾಗುತ್ತಿದೆ ಎಂಬ ಮಾತುಗಳಿವೆ. ಹಾಗಾದಲ್ಲಿ ಯಾವ ಕಾರಣಕ್ಕೆ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Share This Article