ಬಾಲಕಿ ರಾಖಿ ಕಟ್ಟಿದ್ದಕ್ಕೆ ಅತ್ತ ಬಾಲಕ! ಎಲ್ಲಾ ವಿದ್ಯಾರ್ಥಿಗಳ ರಾಖಿ ಬಿಚ್ಚಿಸಿದ್ದ ಶಿಕ್ಷಕರ ವಿರುದ್ಧ ಪೋಷಕರ ಆಕ್ರೋಶ

An argument broke out between parents and teachers over rakhi at Mankalale in Sagar taluk of Shivamogga district ಶಿವಮೊಗ್ಗಜಿಲ್ಲೆ ಸಾಗರ ತಾಲ್ಲೂಕಿನ ಮಂಕಳಲೆಯಲ್ಲಿ ರಾಖಿ ವಿಚಾರಕ್ಕೆ ಪೋಷಕರು ಹಾಗೂ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ

ಬಾಲಕಿ ರಾಖಿ ಕಟ್ಟಿದ್ದಕ್ಕೆ ಅತ್ತ ಬಾಲಕ! ಎಲ್ಲಾ ವಿದ್ಯಾರ್ಥಿಗಳ ರಾಖಿ ಬಿಚ್ಚಿಸಿದ್ದ ಶಿಕ್ಷಕರ ವಿರುದ್ಧ ಪೋಷಕರ ಆಕ್ರೋಶ

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (Sagara Taluk) ನ ಇಂಗ್ಲೀಷ್ ಮೀಡಿಯಂ ಸ್ಕೂಲ್​ವೊಂದರಲ್ಲಿ ರಾಖಿ ಕಟ್ಟಿಕೊಂಡು ಬಂದ ಮಕ್ಕಳನ್ನು ಹೊರಗೆ ನಿಲ್ಲಿಸಿದ್ದು ಹಾಗೂ ರಾಖಿ ಬಿಚ್ಚಿಸಿ ಕಳುಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಪೋಷಕರು ಹಿಂದೂ ಪರ ಸಂಘಟನೆಗಳು ಹಾಗೂ ಶಾಲೆಯ ಶಿಕ್ಷಕರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಕ್ಷಮೆ ಕೋರುವುದರೊಂದಿಗೆ ಪ್ರಕರಣ ಇತ್ಯರ್ಥ ಕಂಡಿದೆ. 

ಏನಾಯ್ತು?

ಮಂಕಳಲೆಯಲ್ಲಿರುವ ಶಾಲೆಯಲ್ಲಿ ರಕ್ಷಾಬಂಧನ ಹಿನ್ನೆಲೆಯಲ್ಲಿ 9ನೇ ತರಗತಿಯಲ್ಲಿ ಮಕ್ಕಳು ಪರಸ್ಪರ ರಾಖಿ ಕಟ್ಟಿಕೊಂಡಿದ್ದರು. ಈ ನಡುವೆ ಎಲ್ಲರ ಎದುರಲ್ಲಿ ವಿದ್ಯಾರ್ಥಿನಿಯೊಬ್ಬಳು ರಾಖಿ ಕಟ್ಟಿದ್ದಕ್ಕೆ ಹಾಗೂ ಅದನ್ನು ನೋಡಿ ಉಳಿದ ಸ್ಟೂಡೆಂಟ್ಸ್​ ನಕ್ಕಿದ್ದಕ್ಕೆ  ಒಬ್ಬ ವಿದ್ಯಾರ್ಥಿ ಬೇಸರಗೊಂಡು ಅಳಲು ಆರಂಭಿಸಿದ್ದನಂತೆ. ಈ ಕಾರಣಕ್ಕೆ  ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವರ್ಗ ವಿದ್ಯಾರ್ಥಿಯನ್ನು ಸಮಾಧಾನಪಡಿಸಿ, ರಾಖಿ ತೆಗೆಸಿದ್ದರು ಎನ್ನಲಾಗಿದೆ. ಜೊತೆಗೆ ಎಲ್ಲ ವಿದ್ಯಾರ್ಥಿಗಳು  ಕಟ್ಟಿಸಿಕೊಂಡ ರಾಖಿಯನ್ನು ಬಿಚ್ಚಿಸಿ ಕಳಿಸಿದ್ದರು. 

ಬುಧವಾರ ನಡೆದ ಈ ಘಟನೆ ಬೆನ್ನಲ್ಲೆ ಮರುದಿನ  ಗುರುವಾರ ಬೆಳಿಗ್ಗೆ 11 ಗಂಟೆವರೆಗೆ ಮಕ್ಕಳನ್ನು ಹೊರಗೆ ನಿಲ್ಲಿಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಮಕ್ಕಳ ಪರವಾಗಿ ಪೋಷಕರು ಹಿಂದೂಪರ ಸಂಘಟನೆಗಳು ಶಾಲೆಗೆ ಆಗಮಿಸಿ ಶಿಕ್ಷಕರ ಕ್ರಮವನ್ನು ಪ್ರಶ್ನಿಸಿದ್ದಾರೆ.  ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಯ ಕೋಮಲ್ ರಾಘವೇಂದ್ರ, ಸಂತೋಷ್, ರಾಘವೇಂದ್ರ ಕಾಮತ್, ಆಟೋ ಗಣೇಶ್, ಕುಮಾರ ಶೆಟ್ಟಿ, ಶ್ರೀಧರ್ ಸಾಗರ್, ಪ್ರತಿಮಾ ಜೋಗಿ, ನವೀನ್ ಯಳವರಸಿ, ಗಣೇಶ್ ಇನ್ನಿತರರು ಕಟ್ಟಿದ್ದ ರಾಖಿಯನ್ನು ಬಿಚ್ಚಿಸಿದ್ದ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವರ್ಗವನ್ನು ತರಾಟೆಗೆ ತೆಗೆದುಕೊಂಡರು.

ಅಂತಿಮವಾಗಿ ಸ್ಥಳಕ್ಕೆ ಬಂದ  ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಸರ್ಕಲ್ ಇನ್ಸ್‌ಪೆಕ್ಟರ್ ಸೀತಾರಾಮ್, ಕೃಷ್ಣಪ್ಪ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮುಖ್ಯ ಶಿಕ್ಷಕಿ ರಾಖಿ ತೆಗೆಸಿದಕ್ಕೆ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಘಟನೆಯನ್ನು ಸಮಾಪ್ತಿಗೊಳಿಸಲಾಯಿತು.

ಶಾಲೆಯಿಂದ ಹೊರಕಳಿಸುವುದು ಸರಿಯಲ್ಲ

ಇನ್ನೂ ಈ ವೇಳೇ ಪತ್ರಿಕೆಮಾದ್ಯಮಗಳ ಬಳಿ ಮಾತನಾಡಿದ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ  ರಕ್ಷಾ ಬಂಧನ ಹಬ್ಬ ಆಚರಿಸಿದರೆ ಮಕ್ಕಳಲ್ಲಿ ಸಹೋದರ ಭಾವನೆ ಬರುತ್ತದೆ. ಇದನ್ನು ಬಿಟ್ಟು ಒಬ್ಬರ ಆಚರಣೆಯನ್ನು ಮಾಡಬೇಡಿ ಎಂದು ಹೇಳುವುದು ತಪ್ಪಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ಸಂಸ್ಕೃತಿ ಹಾಗೂ ಪದ್ಧತಿಯನ್ನು ಬದಲಾಯಿಸಲು ಮುಂದಾಗುವುದು ತಪ್ಪಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳಿದ್ದಲ್ಲಿ ಪೋಷಕರ ಮೀಟಿಂಗ್ ಕರೆದು ವಿಚಾರ ತಿಳಿಸಬೇಕು. ಅದನ್ನು ಬಿಟ್ಟು ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಕಳಿಸುವುದು ಸರಿಯಲ್ಲ. ಇಂಥ ಪ್ರಕರಣ ಬೆಳಕಿಗೆ ಬಂದರೆ ಮಕ್ಕಳಿಗೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದೇನೆ ಎಂದರು.


ಇನ್ನಷ್ಟು ಸುದ್ದಿಗಳು