KARNATAKA NEWS/ ONLINE / Malenadu today/ Jun 16, 2023 SHIVAMOGGA NEWS
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport) ನಲ್ಲಿ ವಿಮಾನಗಳ ಹಾರಾಟ ಮೊದಲು ಆಗಸ್ಟ್ 11 ರಿಂದ ಆರಂಭವಾಗಲಿದೆ ಎನ್ನಲಾಗಿತ್ತು. ಇದೀಗ ಆಗಸ್ಟ್ 8 ರಿಂದಲೇ ವಿಮಾನಯಾನ ಆರಂಭವಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ವರ್ತಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಂಸದರು, ಇನ್ನೆರಡು ತಿಂಗಳಲ್ಲಿ ಮಲೆನಾಡಿನಿಂದ ವಿಮಾನಯಾನ ಆರಂಭವಾಗಲಿದೆ. ಇಂಡಿಗೋ ಸಂಸ್ಥೆಯೊಂದಿಗೆ ಒಡಂಬಡಿಕೆ ಪೂರ್ಣಗೊಂಡಿದೆ ಎಂದಿದ್ದಾರೆ.
ಶಿವಮೊಗ್ಗ-ಬೆಂಗಳೂರು ವಿಮಾನದ ಟೈಮಿಂಗ್ಸ್ ಏನು!? ಟಿಕೆಟ್ ದರ ಎಷ್ಟು? ಬುಕ್ಕಿಂಗ್ ಯಾವಾಗಿನಿಂದ ಪ್ರಾರಂಭ!? ಪೂರ್ತಿ ವಿವರ
ಆಗಸ್ಟ್ 8 ರಿಂದಲೇ ಆರಂಭ ವಿಮಾನಯಾನ
ಶಿವಮೊಗ್ಗದಿಂದ ನಾಗರಿಕ ವಿಮಾನ ಯಾನವು ಆಗಸ್ಟ್ 8 ರಿಂದ ಆರಂಭವಾಗಲಿದೆ. ಅಲ್ಲಿಂದ ಜಿಲ್ಲೆ ಅಲ್ಲದೆ ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ. ಕೈಗಾರಿಕೆ, ವಾಣಿಜ್ಯೋದ್ಯಮ, ಪ್ರವಾಸೋದ್ಯಮ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ
ರೈಲ್ವೆ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆ ಯಾಗಲಿದೆ ಎಂದ ಸಂಸದ ಬಿ.ವೈ ರಾಘವೇಂದ್ರರವರು,. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಮಾರ್ಗವು 10 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸಹ ಜಿಲ್ಲೆಯ ಸರ್ವಾ೦ಗೀಣ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲಎಂದರು.
ಸಿಗಂದೂರು ಸೇತುವೆ ವಿಚಾರದಲ್ಲಿ ಸ್ಪಷ್ಟನೆ!
ಲಿಂಗನಮಕ್ಕಿ ಜಲಾಶಯದ ನೀರನ್ನು ನಾವು ಕಡಿಮೆ ಮಾಡಿದ್ದೇವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಪಾದಿಸಿದ್ದಾರೆ. ಅದ್ಯಾಕೆ ಆ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ, ಸೇತುವೆ ನಿರ್ಮಾಣ ಮಾಡಲು, ಸಾಮಗ್ರಿಗಳನ್ನು ಸಾಗಿಸಲು ನೀರು ಬೇಕು. ನೀರು ನಾವು ಕಡಿಮೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ರು.
ಆಗಸ್ಟ್ 15 ಕ್ಕೆ ಶಿವಮೊಗ್ಗದ ಪ್ರಮುಖ ಮೇಲ್ಸೇತುವೆ ಉದ್ಘಾಟನೆ! ತುಂಗಾನದಿಯ ಹೊಸ ಬ್ರಿಡ್ಜ್ ಓಪನ್! ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ ಓವರ್ ಬ್ರಿಡ್ಜ್ ಬಗ್ಗೆ ಸಂಸದರು ಹೇಳಿದ್ದೇನು?
ಶಿವಮೊಗ್ಗದ ರೇಷನ್ ಕಾರ್ಡ್ದಾರರಿಗೆ ಮಹತ್ವದ ಮಾಹಿತಿ! ಪಡಿತರ ಪಡೆಯಲು 27 ಲಾಸ್ಟ್ ಡೇಟ್! ಇ ಕೆವೈಸಿ ಮಾಡಿಸಿದ್ರಾ?
ಶಿವಮೊಗ್ಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಸರ್ವರ್ ನಿರ್ವಹಣಾ ಕಾರ್ಯವನ್ನು ಜೂ.28 ರಿಂದ ಕೈಗೊಳ್ಳಲಿದ್ದು, ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಜೂನ್-2023ರ ಮಾಹೆಯ ಪಡಿತರವನ್ನು ದಿನಾಂಕ 27/06/2023 ರೊಳಗಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳುವಂತೆ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕು ಗ್ರಾಮಾಂತರ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಜೂ. 27ರೊಳಗಾಗಿ ಪಡಿತರ ವಿತರಣಾ ಕಾರ್ಯವನ್ನು ಕಡ್ಡಾಯವಾಗಿ ಮುಕ್ತಾಯಗೊಳಿಸುವಂತೆ ಹಾಗೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
