ಆಗಸ್ಟ್​ 15 ಕ್ಕೆ ಶಿವಮೊಗ್ಗದ ಪ್ರಮುಖ ಮೇಲ್ಸೇತುವೆ ಉದ್ಘಾಟನೆ! ತುಂಗಾನದಿಯ ಹೊಸ ಬ್ರಿಡ್ಜ್​​ ಓಪನ್​! ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ ಓವರ್​ ಬ್ರಿಡ್ಜ್​ ಬಗ್ಗೆ ಸಂಸದರು ಹೇಳಿದ್ದೇನು?

Shimoga flyover to be inaugurated on August 15 What did the MPs say about Kadadakatte, Savalanga Road, Kashipur overbridge?

ಆಗಸ್ಟ್​ 15 ಕ್ಕೆ  ಶಿವಮೊಗ್ಗದ ಪ್ರಮುಖ ಮೇಲ್ಸೇತುವೆ ಉದ್ಘಾಟನೆ! ತುಂಗಾನದಿಯ ಹೊಸ ಬ್ರಿಡ್ಜ್​​ ಓಪನ್​! ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ  ಓವರ್​ ಬ್ರಿಡ್ಜ್​ ಬಗ್ಗೆ ಸಂಸದರು ಹೇಳಿದ್ದೇನು?

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS

ಶಿವಮೊಗ್ಗ ನಗರದ ವಿದ್ಯಾನಗರ ರೈಲ್ವೆ ಮೇಲು ಸೇತುವೆ ಕಾಮಗಾರಿಯು  ಮುಕ್ತಾಯ ಹಂತಕ್ಕೆ ಬಂದಿದ್ದು, ಇದೇ ಆಗಸ್ಟ್​  ಆಗಸ್ಟ್ 15ರಂದು ಲೋಕಾರ್ಪಣೆಗೊಳ್ಳಲಿದೆ. 

ಈ ಸಂಬಂಧ ಮಾಹಿತಿ ನೀಡಿರುವ  ಸಂಸದ ಬಿ. ವೈ.ರಾಘವೇಂದ್ರ  (B Y Raghavendra)  44 ಕೋಟಿ ರೂ. ವೆಚ್ಚದ ವೃತ್ತಾಕಾರದ ಮೇಲು ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದೆ. ರೈಲ್ವೆ ಹಳಿಗಳ ಮೇಲಿನ ಕೆಲಸವಷ್ಟೆ ಬಾಕಿ ಇದೆ.

ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿಯನ್ನು ಮುಗಿಸಲಾಗುತ್ತದೆ. ಭದ್ರಾವತಿ ನಗರದ ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ ರೈಲ್ವೆ ಮೇಲು ಸೇತುವೆ ಸಹ ಇದೇ ಡಿಸೆಂಬರ್ ಅಂತ್ಯದೊಳಗೆ  ಕಾಮಗಾರಿಗಳು ಸಹ ಭರದಿಂದ ಸಾಗಿದ್ದು ಈ ಎಲ್ಲ ಕಾಮಗಾರಿಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ. ಬೈಪಾಸ್‌ ರಸ್ತೆಯಲ್ಲಿ ತುಂಗಾ ಸೇತುವೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಆಗಸ್ಟ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.