ಶಿವಮೊಗ್ಗದ ರೇಷನ್​ ಕಾರ್ಡ್​ದಾರರಿಗೆ ಮಹತ್ವದ ಮಾಹಿತಿ! ಪಡಿತರ ಪಡೆಯಲು 27 ಲಾಸ್ಟ್​ ಡೇಟ್​! ಇ ಕೆವೈಸಿ ಮಾಡಿಸಿದ್ರಾ?

Important information for ration card holders in Shimoga! 27 last date to get ration! Did you get e-KYC done?

ಶಿವಮೊಗ್ಗದ ರೇಷನ್​ ಕಾರ್ಡ್​ದಾರರಿಗೆ ಮಹತ್ವದ ಮಾಹಿತಿ!  ಪಡಿತರ ಪಡೆಯಲು 27 ಲಾಸ್ಟ್​ ಡೇಟ್​! ಇ ಕೆವೈಸಿ ಮಾಡಿಸಿದ್ರಾ?

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS

ಶಿವಮೊಗ್ಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಸರ್ವರ್ ನಿರ್ವಹಣಾ ಕಾರ್ಯವನ್ನು ಜೂ.28 ರಿಂದ ಕೈಗೊಳ್ಳಲಿದ್ದು, ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಜೂನ್-2023ರ ಮಾಹೆಯ ಪಡಿತರವನ್ನು ದಿನಾಂಕ  27/06/2023 ರೊಳಗಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳುವಂತೆ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶಿವಮೊಗ್ಗ ತಾಲೂಕು ಗ್ರಾಮಾಂತರ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಜೂ. 27ರೊಳಗಾಗಿ ಪಡಿತರ ವಿತರಣಾ ಕಾರ್ಯವನ್ನು ಕಡ್ಡಾಯವಾಗಿ ಮುಕ್ತಾಯಗೊಳಿಸುವಂತೆ ಹಾಗೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. 

ಆಗಸ್ಟ್​ 15 ಕ್ಕೆ ಶಿವಮೊಗ್ಗದ ಪ್ರಮುಖ ಮೇಲ್ಸೇತುವೆ ಉದ್ಘಾಟನೆ! ತುಂಗಾನದಿಯ ಹೊಸ ಬ್ರಿಡ್ಜ್​​ ಓಪನ್​! ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ ಓವರ್​ ಬ್ರಿಡ್ಜ್​ ಬಗ್ಗೆ ಸಂಸದರು ಹೇಳಿದ್ದೇನು?



ಶಿವಮೊಗ್ಗ ನಗರದ ವಿದ್ಯಾನಗರ ರೈಲ್ವೆ ಮೇಲು ಸೇತುವೆ ಕಾಮಗಾರಿಯು  ಮುಕ್ತಾಯ ಹಂತಕ್ಕೆ ಬಂದಿದ್ದು, ಇದೇ ಆಗಸ್ಟ್​  ಆಗಸ್ಟ್ 15ರಂದು ಲೋಕಾರ್ಪಣೆಗೊಳ್ಳಲಿದೆ. 

ಈ ಸಂಬಂಧ ಮಾಹಿತಿ ನೀಡಿರುವ  ಸಂಸದ ಬಿ. ವೈ.ರಾಘವೇಂದ್ರ  (B Y Raghavendra)  

44 ಕೋಟಿ ರೂ. ವೆಚ್ಚದ ವೃತ್ತಾಕಾರದ ಮೇಲು ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದೆ. ರೈಲ್ವೆ ಹಳಿಗಳ ಮೇಲಿನ ಕೆಲಸವಷ್ಟೆ ಬಾಕಿ ಇದೆ.

ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿಯನ್ನು ಮುಗಿಸಲಾಗುತ್ತದೆ. ಭದ್ರಾವತಿ ನಗರದ ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ ರೈಲ್ವೆ ಮೇಲು ಸೇತುವೆ ಸಹ ಇದೇ ಡಿಸೆಂಬರ್ ಅಂತ್ಯದೊಳಗೆ  ಕಾಮಗಾರಿಗಳು ಸಹ ಭರದಿಂದ ಸಾಗಿದ್ದು ಈ ಎಲ್ಲ ಕಾಮಗಾರಿಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ. 

ಬೈಪಾಸ್‌ ರಸ್ತೆಯಲ್ಲಿ ತುಂಗಾ ಸೇತುವೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಆಗಸ್ಟ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.