ಸಾರ್ವಜನಿಕರಲ್ಲಿ ವಿನಂತಿ! ಡಿಸೆಂಬರ್ 21 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್

Request to the public! There will be no electricity in these parts of Shivamogga on December 21

ಸಾರ್ವಜನಿಕರಲ್ಲಿ ವಿನಂತಿ! ಡಿಸೆಂಬರ್ 21 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್

SHIVAMOGGA |  Dec 20, 2023  | ಶಿವಮೊಗ್ಗ ತಾಲ್ಲೂಕು, ಕುಂಸಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಆಯನೂರು ಶಾಖಾ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸರಬರಾಜಾಗುವ 11 ಕಿವಿ ಮಾರ್ಗಗಳಾದ ಕೆಎಫ್-2, 3, 9, 16 ಮತ್ತು ಕೆಎಫ್-18 ಹೊರೆಯನ್ನು ಕುಂಸಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ನಿರ್ಮಿಸಿರುವ ಆಯನೂರು 110/11 ಕೆವಿ ವಿದ್ಯುತ್ ಕೇಂದ್ರಕ್ಕೆ ವರ್ಗಾಯಿಸುವ ಕಾಮಗಾರಿಯನ್ನ ಮೆಸ್ಕಾಂ ಶಿವಮೊಗ್ಗ ವಿಭಾಗ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

READ :ಒಂದೇ ದಿನ 2 ಕಡೆ ಸರಗಳ್ಳತನ ! ಮತ್ತೊಂದು ಕಡೆ ವಿಫಲ ಯತ್ನ! ಮಹಿಳೆಯರೇ ಹುಷಾರ್

ಆಯನೂರು ಶಾಖಾ ವ್ಯಾಪ್ತಿಯ ಹಳ್ಳಿಗಳಾದ ಆಯನೂರು, ಮಂಡಘಟ್ಟ, ಸೂಡೂರು, ಕೂಡಿ, ರಾಗಿಹೊಸಳ್ಳಿ, ಮಲೆಶಂಕರ, ಚಿನ್ಮನೆ, ಇಟ್ಟಿಗೆಹಳ್ಳಿ, ದೊಡ್ಡಮತ್ತಲಿ, ತಮ್ಮಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿ.21 ರಂದು ಬೆಳಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.