ಇದಕ್ಕಿದ್ದಂತೆ ನಿಮ್ಮ ಮೊಬೈಲ್ ನಲ್ಲಿ ಎಚ್ಚರಿಕೆ ಬೀಪ್ ಸೌಂಡ್ ಕೇಳುತ್ತಿದೆಯಾ? ಸ್ಕ್ರೀನ್​ನಲ್ಲಿ ಇಂಗ್ಲೀಷ್ ವಾರ್ನಿಂಗ್ ಮೆಸೇಜ್ ಬರ್ತಿದ್ಯಾ? ಏನಿದು ಗೊತ್ತಾ?

The Department of Telecommunications (DoT) Tuesday conducted multiple sample tests of pan-India emergency alerts powered by the Cell Broadcasting System ದೂರಸಂಪರ್ಕ ಇಲಾಖೆ (DoT) ಮಂಗಳವಾರ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್‌ನಿಂದ ನಡೆಸಲ್ಪಡುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆಗಳ ಬಹು ಮಾದರಿ ಪರೀಕ್ಷೆಗಳನ್ನು ನಡೆಸಿತು.

ಇದಕ್ಕಿದ್ದಂತೆ ನಿಮ್ಮ ಮೊಬೈಲ್ ನಲ್ಲಿ ಎಚ್ಚರಿಕೆ ಬೀಪ್ ಸೌಂಡ್ ಕೇಳುತ್ತಿದೆಯಾ? ಸ್ಕ್ರೀನ್​ನಲ್ಲಿ ಇಂಗ್ಲೀಷ್ ವಾರ್ನಿಂಗ್ ಮೆಸೇಜ್ ಬರ್ತಿದ್ಯಾ?  ಏನಿದು ಗೊತ್ತಾ?

 

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS

ನಿಮ್ಮ ಮೊಬೈಲ್ ಇದ್ದಕ್ಕಿದ್ದ ಹಾಗೆ ವಾರ್ನಿಂಗ್ ಸೌಂಡ್​ ನೀಡುತ್ತಿದೆಯಾ? ಯಾವುದೇ ರಿಂಗ್ ಇಲ್ಲದೆ ವಾರ್ನಿಂಗ್ ಮೆಸೇಜ್ ಬರುತ್ತಿದೆಯಾ? ಹೆದರಬೇಡಿ ಅದು  Department of Telecommunications (DoT)  ನಡೆಸುತ್ತಿರುವ  ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆಗಳ ಬಹು ಮಾದರಿ ಪರೀಕ್ಷೆ  

ನಿಜ ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ.

ಈ ರೀತಿ ಬರುತ್ತಿರುವ ಮೆಸೇಜ್​ಗೆ  ನಿಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆಯ ಅಗತ್ಯವಿಲ್ಲ. ಅಲ್ಲದೆ  ಈ ಸಂದೇಶದ ಬಗ್ಗೆ ಯಾವುದೆ ಆತಂಕ ಪಡುವ ಅವಶ್ಯಕತೆಯು ಇಲ್ಲ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೆ ತಂದಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗುತ್ತಿದೆ. 

ಇದಕ್ಕೆ ಸಂಬಂಧಿಸಿದ ಫ್ಲ್ಯಾಷ್ ಎಚ್ಚರಿಕೆ ಸಂದೇಶವೊಂದು ನಿಮ್ಮ ಮೊಬೈಲ್​ಗೆ ಬರುತ್ತದೆ. ಶ್ರಿಲ್ ಬೀಪ್ ಶಬ್ದದೊಂದಿಗೆ ಬರುವ ಈ ಮೆಸೇಜ್​ನನ್ನ ಬಳಕೆದಾರರು 'ಸರಿ' ಅಥವಾ OK ಬಟನ್ ಒತ್ತಿದರೆ ಅದು ನಿಲ್ಲುತ್ತದೆ.

ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ  ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ಸಂದೇಶಗಳನ್ನು ನೀಡುವಂತಹ ಉದ್ದೇಶದೊಂದಿಗೆ ಈ ಪರೀಕ್ಷೆಯನ್ನು   emergency alert system ಮೂಲಕ ಕೈಗೊಳ್ಳಲಾಗುತ್ತಿದೆ. 

ಯುದ್ಧ ಅಥವಾ ಯಾವುದೇ ಅವಗಢಗಳ ಸಂದರ್ಭದಲ್ಲಿ ಇಂತಹ ಅಲರ್ಟ್​ಗಳನ್ನು ಜನರ ಮೊಬೈಲ್​ಗಳಿಗೆ ನೀಡಲಾಗುತ್ತದೆ. ನಿನ್ನೆಯಿಂದ ಇದರ ಪರೀಕ್ಷೆಗಳು ನಡೆಯುತ್ತಿವೆ.  

ಈ ಪರೀಕ್ಷೆಗಳನ್ನು ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ಸಮಯಕ್ಕೆ ಅನುಗುಣವಾಗಿ ನಡೆಸಲಾಗುವುದು ಎಂದು ಸಂವಹನ ಸಚಿವಾಲಯ ತಿಳಿಸಿದೆ.




ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?