ಸಹಾಯಕ ಪ್ರಾಧ್ಯಾಪಕರುಗಳ ನೇಮಕಾತಿಗೆ ನೇರ ಸಂದರ್ಶನ

Direct Interview for Recruitment of Assistant Professors

ಸಹಾಯಕ ಪ್ರಾಧ್ಯಾಪಕರುಗಳ ನೇಮಕಾತಿಗೆ ನೇರ ಸಂದರ್ಶನ

KARNATAKA NEWS/ ONLINE / Malenadu today/ Jul 6, 2023 SHIVAMOGGA NEWS 

ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಕೆಳಕಂಡ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರುಗಳ ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿಗಾಗಿ ಜು.13 ರ ಬೆಳಗ್ಗೆ 11 ಗಂಟೆಗೆ ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂದರ್ಶನವನ್ನು  ಏರ್ಪಡಿಸಲಾಗಿದೆ.

ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವರಸಾಯನ ಶಾಸ್ತ್ರ ವಿಭಾಗ, ಜಾನುವಾರು ಉತ್ಪಾದನಾ ನಿರ್ವಹಣೆ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಸ್ತ್ರೀ ರೋಗ ಮತ್ತು   ಪ್ರಸೂತಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಪರೋಪಜೀವಿ ಶಾಸ್ತ್ರ ವಿಭಾಗ, 

ಜಾನುವಾರು ಸಾಗಾಣಿಕೆ ಸಂಕೀರ್ಣ ವಿಭಾಗ (ಪ್ರಾಣಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ), ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ಶಾಸ್ತ್ರ ವಿಭಾಗದಲ್ಲಿ  (ಪಶುವೈದ್ಯಕೀಯ ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ,  ಪಶುವೈದ್ಯಕೀಯ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ, ಪಶುವೈದ್ಯಕೀಯ ಚಿಕಿತ್ಸಾ ಶಾಸ್ತ್ರ, ಚಿಕಿತ್ಸಾ ರೋಗಶಾಸ್ತ್ರ/ಸೂಕ್ಷ್ಮಜೀವಾಣು ಶಾಸ್ತ್ರ/ಪರೋಪಜೀವಿ ಶಾಸ್ತ್ರ/ ಜೀವರಸಾಯನ ಶಾಸ್ತ್ರ) ವಿಭಾಗಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. 

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಜಲತಾಣ ವಿಳಾಸ www.kvafsu.edu.in  ನ್ನು ಮತ್ತು ದೂರವಾಣಿ ಸಂಖ್ಯೆ : 08182-200872 ನ್ನು ಸಂಪರ್ಕಿಸುವಂತೆ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.