ತುಂಗಾ ಡ್ಯಾಂನಲ್ಲಿ ನಡೆದಿದ್ದೇನು? ಯುವಕ ನೀರಿಗೆ ಬಿದ್ದಿದ್ದಾ? ಬೀಳಿಸಿದ್ದಾ? ಕುಟುಂಬಸ್ಥರು ಹೇಳೋದೇನು?

The family members of the youth, who fell into the water near tunga reservoir, have expressed doubts about his caseತುಂಗಾ ಜಲಾಶಯದ ಬಳಿಯಲ್ಲಿ ನೀರಿಗೆ ಬಿದ್ದಿದ್ದ ಯುವಕನ ಪ್ರಕರಣದ ಬಗ್ಗೆ ಅವರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ

ತುಂಗಾ ಡ್ಯಾಂನಲ್ಲಿ ನಡೆದಿದ್ದೇನು? ಯುವಕ ನೀರಿಗೆ ಬಿದ್ದಿದ್ದಾ? ಬೀಳಿಸಿದ್ದಾ? ಕುಟುಂಬಸ್ಥರು ಹೇಳೋದೇನು?

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS 

ಶಿವಮೊಗ್ಗದ ಗಾಜನೂರು ಜಲಾಶಯದ ಮುಂಬಾಗದಲ್ಲಿ ನೀರಿಗೆ ಬಿದ್ದು ಯುವಕನ ನಾಪತ್ತೆ ಪ್ರಕರಣದ ಸಂಬಂಧ ಅವರ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಗಾಜನೂರು ಜಲಾಶಯದ (Gajanur Dam) ಎದುರು ಭಾಗದಲ್ಲಿ ಪಾರ್ಟಿ ಮಾಡ್ತಿದ್ದ ಹುಡುಗರ ನಡುವೆ ಓರ್ವ ನೀರಿಗೆ ಬಿದ್ದಿದ್ದ. ಈತನನ್ನು ಮಿಳಘಟ್ಟದ ಹರೀಶ್‌ (22) ಎಂದು ಗುರುತಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಆತನ ಕುಟುಂಬದವರು ಹರೀಶನ ಜೊತೆಗೆ ಬಂದ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನು ಸಹ ಓದಿ : ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್​ ಅದಾಲತ್​! ಯಾವಾಗ? ಯಾವೆಲ್ಲಾ ಕೇಸ್​ಗಳು ಆಗಲಿವೆ ಇತ್ಯರ್ಥ! ಪಾಲ್ಗೊಳ್ಳುವುದು ಹೇಗೆ?|

ಹರೀಶ್ ಕುಟುಂಬದ ಆರೋಪಗಳೇನು?

ಹರೀಶ್​ ನಾಪತ್ತೆಯಾಗಿರುವ ವಿಷಯ ಗೊತ್ತಾಗಿನಿಂದಲೂ ಅವರ ಸ್ನೇಹಿತರ ಮೊಬೈಲ್​ಗಳು ಸ್ವಿಚ್ ಆಫ್ ಆಗಿದೆ. ಒಬ್ಬರು ಸಂಪರ್ಕಕ್ಕೆ ಸಿಗುತ್ತಿಲ್ಲ  ಪಮ್ಮು, ರಘು, ಸಂತೋಷ್ ಜೊತೆಗೆ ಹೋಗಿದ್ದ. ಹರೀಶ್ ನನ್ನು ಕರೆದುಕೊಂಡು ಬಂದವರು ಆತನ ಜೊತೆಗೆ ಪಾರ್ಟಿ ಮಾಡಿದ್ದಾರೆ. ನೀರಿಗೆ ಬಿದ್ದ ಮೇಲೆ ಒಬ್ಬ ಮಾತ್ರ ನೀರಿಗೆ ಹಾರಿ ಆತನಿಗಾಗಿ ಹುಡುಕಾಡಿದರು ಎಂದು ಹೇಳುತ್ತಾರೆ. ಮೂರು ವರ್ಷದ ಹಿಂದೆ ಹರೀಶನ ಕೈಯಿಂದ ಆತನ ಸ್ನೇಹಿತ 13000 ಸಾಲ ಪಡೆದಿದ್ದ, ಆ ಕಾರಣಕ್ಕೆ ಈ ರೀತಿ ಮಾಡಿದ್ರಾ ಗೊತ್ತಿಲ್ಲ. ಹರೀಶ್​ಗೆ ಈಜಲು ಬರಲ್ಲ, ಆತನನ್ನ ನೀರಿಗೆ ಏಕೆ ಇಳಿಸಿದ್ರು, ಆತನಜೊತೆಗೆ ಪಾರ್ಟಿ ಮಾಡಿದ್ದೇಕೆ?  ಹಣ ಕೇಳುತ್ತಿದ್ದಾನೆಂದು ನೀರಿಗೆ ದೂಡಿದ್ರಾ? ಇದೆಲ್ಲಾಅನುಮಾನಸ್ಪದವಾಗಿ ದೂರು ನೀಡಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು. 

ಇದನ್ನು ಸಹ ಓದಿ : ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?

ಪೊಲೀಸ್ ತನಿಖೆಯಲ್ಲಿ

ಇನ್ನೂ ಈ ಪ್ರಕರಣವನ್ನು ದಾಖಲಿಸಿಕೊಂಡಿಸಿರುವ ಪೊಲೀಸರು ಕುಟುಂಬಸ್ಥರ ಅನುಮಾನದ ಬಗ್ಗೆಯು ಆಲಿಸಿದ್ದಾರೆ. ಘಟನೆ ವೇಳೆ ಹರೀಶನ ಜೊತೆಗಿದ್ದವರನ್ನು ವಿಚಾರಿಸ್ತಿದ್ದಾರೆ. ಪ್ರಕರಣ ತನಿಖಾ ಹಾದಿಯಲ್ಲಿದ್ದು, ಅಂತಿಮವಾಗಿ ವಿಚಾರಣೆ ಪೂರ್ಣಗೊಂಡ ಬಳಿಕ ನಡೆದಿದ್ದೇನು ಎಂಬುದು ಗೊತ್ತಾಗಲಿದೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು