ಧೀರರಾಜ್ ಸಾಹು ಬಳಿ ಸಿಕ್ಕ 300 ಕೋಟಿ ರೂಪಾಯಿ! ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ

This Article Written by / Malenadu Today / ಡಿಸೆಂಬರ್ 11, 2023

SHIVAMOGGA |  Dec 11, 2023 |  ಜಾರ್ಖಂಡ್‌ ನಲ್ಲಿ ಕಾಂಗ್ರೆಸ್  ಸಂಸದನ ಮನೆಯಲ್ಲಿ 300 ಕೋಟಿಗೂ ಹೆಚ್ಚಿನ ನಗದು ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ

ಧೀರರಾಜ್ ಸಾಹು

ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಧೀರರಾಜ್ ಸಾಹು ಅವರ ಮನೆಯಲ್ಲಿ ಕೋಟ್ಯಾಂತರ ನಗದು ಪತ್ತೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ,  ಲೂಟಿಕೋರ, ಲಂಚಕೋರ ಎಂಬುವುದು ಸಾಬೀತಾಗಿದೆ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. 

ಬೆಂಗಳೂರಿನಲ್ಲಿ 40 ಕೋಟಿ, 80 ಕೋಟಿ ಈಗ 300  ಕೋಟಿಗೂ ಅಧಿಕ ಹಣ ಕಾಂಗ್ರೆಸ್ ಮುಖಂಡರ ಮನೆಯಲ್ಲಿ

ಲಭ್ಯವಾಗಿದ್ದು, ಕಾಂಗ್ರೆಸ್‌ನ ಸಾಚಾತನ ಬಟಬಯಲಾಗಿದೆ. ಕೂಡಲೇ ಭ್ರಷ್ಟ ಧೀರರಾಜ್ ಸಾಹುರವರು ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅಲ್ಲಿಯವರೆಗೆ ತಕ್ಷಣ ಅವರನ್ನು ಐಟಿ ಅಧಿಕಾರಿಗಳು ಬಂಧಿ ಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. 

READ : ಭದ್ರಾವತಿ ಬಡಿದಾಟ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಫಸ್ಟ್ ರಿಯಾಕ್ಷನ್​!

ಕಾಂಗ್ರೆಸ್‌ ಗೆ ಇದೇನು ಹೊಸದಲ್ಲ, ಅಧಿಕಾರ ಬಂದಾಗಿನಿಂದ ಎಲ್ಲಾ ಗುತ್ತಿಗೆದಾರರನ್ನು ಹಿಂಡಿಹಿಪ್ಪೆ ಮಾಡಿ ಕೋಟ್ಯಾಂತರ ರೂ. ಕಮಿಷನ್ ಪಡೆದಿರುವುದು ಬಹಿರಂಗವಾಗಿದೆ. ನೈತಿಕತೆ ಇದ್ದರೆ ಕಾಂಗ್ರೆಸ್ ಪಕ್ಷ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್ ಪ್ರಮುಖರಾದ ಜ್ಯೋತಿ ಪ್ರಕಾಶ್, ಸಂತೋಷ್ ಬಳ್ಳಕೆರೆ, ರತ್ನಾಕರ್ ಶೆಣೈ, ಡಾ.ಧನಂಜಯ್ ವಿನ್ಸೆಂಟ್ ರೋಡ್ರಿಗಸ್, ಈ. ವಿಶ್ವಾಸ್, ಶ್ರೀನಾಥ್, ಮಾಲತೇಶ್, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ ರಡ್ಡಿ ಶ್ರೀನಿವಾಸ್, ದರ್ಶನ್ ಮತ್ತಿರರು ಇದ್ದರು.


 

ಮುಂದಿನ ಸುದ್ದಿ ಒದಿ

Leave a Comment