ಭದ್ರಾವತಿ ಬಡಿದಾಟ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಫಸ್ಟ್ ರಿಯಾಕ್ಷನ್​!

BJP state president B Y Vijayendra reacts to attack party worker in Bhadravathi

ಭದ್ರಾವತಿ ಬಡಿದಾಟ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಫಸ್ಟ್ ರಿಯಾಕ್ಷನ್​!

SHIVAMOGGA |  Dec 11, 2023 |  ಭದ್ರಾವತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣವನ್ನ ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಘಟನೆ ಸಂಬಂಧ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಿಯಾಕ್ಟ್ ಮಾಡಿದ್ದಾರೆ. ಪ್ರಕರಣ ಸಂಬಂಧ ಟ್ವಿಟ್ಟರ್ ಎಕ್ಸ್​ ಅಕೌಂಟ್​ Vijayendra Yediyurappa  ನಲ್ಲಿ ಪ್ರತಿಕ್ರಿಯಿಸಿರುವ ಅವರು ಹಲ್ಲೆ ಆತಂಕಕಾರಿ ಘಟನೆ ಎಂದಿದ್ದಾರೆ. 

ಬಿ.ವೈ.ವಿಜಯೇಂದ್ರ 

ಅಧಿಕಾರಸ್ಥ ಕಾಂಗ್ರೆಸ್ಸಿಗರ ಅಕ್ರಮಗಳ ವಿರುದ್ಧ ದನಿ ಎತ್ತುವ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಕಲಬುರ್ಗಿ, ಬೆಳಗಾವಿಯ ಪ್ರಕರಣಗಳ ಬೆನ್ನಲೇ ಭದ್ರಾವತಿಯ ನಮ್ಮ ಬಿಜೆಪಿ ಮುಖಂಡ ಗೋಕುಲ್ ಕೃಷ್ಣನ್ ಅವರ ಮೇಲೆ ನಡೆದಿರುವ ಗೂಂಡಾಗಳ ಹಲ್ಲೆ ಆತಂಕಕಾರಿ ಘಟನೆಯಾಗಿದೆ.

READ : ಭದ್ರಾವತಿ ಬಡಿದಾಟ | ಮೂವರು ಅರೆಸ್ಟ್ ! ನಡೆದಿದ್ದೇನು?

ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಸ್ಥಳೀಯ ಶಾಸಕರ ಕೈವಾಡ ಇರುವ ಬಗ್ಗೆ ಜಾಲತಾಣದಲ್ಲಿ ಗೋಕುಲ್ ಕೃಷ್ಣನ್ ಪ್ರಶ್ನಿಸಿದ್ದೇ, ಈ ದಾಳಿ ನಡೆಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿರುವಂತಿದೆ.

ತಕ್ಷಣವೇ ಭದ್ರಾವತಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಕಾರ್ಯಕರ್ತನಿಗೆ ರಕ್ಷಣೆ ನೀಡಿ, ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ.