ಭದ್ರಾವತಿ ಬಡಿದಾಟ | ಮೂವರು ಅರೆಸ್ಟ್ ! ನಡೆದಿದ್ದೇನು?

Police have arrested three persons in connection with the incident in Bhadravathi

ಭದ್ರಾವತಿ ಬಡಿದಾಟ | ಮೂವರು ಅರೆಸ್ಟ್ ! ನಡೆದಿದ್ದೇನು?

SHIVAMOGGA |  Dec 11, 2023 |  ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಿನ್ನೆ  ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಇದಕ್ಕೂ ಮೊದಲು ಹಲ್ಲೆಗೊಳಗಾಗಿರುವ ಗೋಕುಲಕೃಷ್ಣರವರಿಗೆ ಸೇರಿದ ಕಾರನ್ನು ಮೂವರು ಜಖಂಗೊಳಿಸಿದ್ದರು. ಈ ಸಂಬಂಧ ಭದ್ರಾವತಿ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ದಾರೆ. 

READ : ರಿಪ್ಪನ್​ಪೇಟೆ ಸಮೀಪ ಕಾರು ಸ್ಕೂಟಿ ಡಿಕ್ಕಿ, ಮಹಿಳೆಗೆ ಗಂಭೀರ ಗಾಯ

ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ 

ಭದ್ರಾವತಿ ನ್ಯೂ ಟೌನ್ ಪೊಲೀಸ್ ಸ್ಟೇಷನ್ ಪೊಲೀಸರು ಈ ಸಂಬಂಧ ಕಾರ್ಯಾಚರಣೆ ನಡೆಸಿ ಹರ್ಷ(23)ಗಣೇಶ(22) ನಂಜೇಗೌಡ (22) ಎಂಬವರನ್ನ ಬಂಧಿಸಿದ್ದಾರೆ. ಭದ್ರಾವತಿಯಲ್ಲಿ ಇಸ್ಟೀಟ್ ಹಾವಳಿ ಹೆಚ್ಚಾಗಿದೆ ಎಂದು ಗೋಕುಲ್ ಫೇಸ್​ಬುಕ್ ಪೋಸ್ಟ್ ಹಾಕಿದ್ದರು. ಈ ನಡುವೆ ಗೋಕುಲ್​ರ ಮೇಲೆ ಹಳೇ ವೈಷಮ್ಯವೂ ಕೆಲವರಲ್ಲಿತ್ತು. ಈ ಹಿನ್ನೆಲೆಯಲ್ಲಿ ಅವರ ಪೋಸ್ಟ್​ ಬೆನ್ನಲ್ಲೆ  ಬೈಕ್​ನಲ್ಲಿ ಬಂದ ಆರೋಪಿಗಳು ಕಾರನ್ನ ದೊಣ್ಣೆ ಬಳಸಿ ಜಖಂಗೊಳಿಸಿದ್ದರು. 

ಈ ಸಂಬಂಧ ಗೋಕುಲ್ ನೀಡಿದ ದೂರಿನನ್ವಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಎಸ್​ಪಿ ಮಿಥುನ್ ಕುಮಾರ್ ಪ್ರಕರಣ ಸಂಬಂಧ ವಾಟ್ಸ್ಯಾಪ್ ಸಂದೇಶದಲ್ಲಿ ಆರೋಪಿಗಳನ್ನ ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.