bhadravathi : ಭದ್ರಾವತಿ ಕ್ಷೇತ್ರ ಗೆಲ್ಲೋಕೆ ದೆಹಲಿ ಬಿಜೆಪಿ ಪ್ಲಾನ್​! ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್​ರವರಾ? ಟಿಕೆಟ್ ಕೇಳಲು ಬಂದವರಿಗೆ ಬಿಎಸ್​​ವೈ ಹೇಳಿದ್ದೇನು?

ಈ ಸಲ ಭದ್ರಾವತಿ ವಿಧಾನಸಭೆ ಕ್ಷೇತ್ರದ ಮೇಲೆ ಬಿಜೆಪಿಯ ದೆಹಲಿ ಕಣ್ಣು  ನೆಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಇದೇ ಮಾತನ್ನ ಹೇಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ಭದ್ರಾವತಿ ಬಿಜೆಪಿಯ ತಂಡದ ಭೇಟಿ. ಭದ್ರಾವತಿ ಬಿಜೆಪಿ ಕಾರ್ಯಕರ್ತರು, ಅಲ್ಲಿನ ಮಂಗೋಟೆ ರುದ್ರೇಶ್​ರವರಿಗೆ ಟಿಕೆಟ್​ ನೀಡಬೇಕು ಎಂದು ಇವತ್ತು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಯವರಿಗೆ ಅಹವಾಲು ಸಲ್ಲಿಸಿತು. 

ಈ ವೇಳೆ ಮಾತನಾಡಿದ ಬಿಎಸ್​ವೈ, ಭದ್ರಾವತಿಯಲ್ಲಿ ಬಿಜೆಪಿ ಗೆಲ್ಲಲೇಬೇಕು…ನೂರಕ್ಕೆ ನೂರು ಗೆಲ್ಲಲೇಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ದೆಹಲಿಯಿಂದ ಸರ್ವೆ ಆಗಿದೆ. ರಾಜ್ಯ ಬಿಜೆಪಿಯಿಂದಲೂ ಸರ್ವೆಯಾಗಿದೆ. ಈ ಸರ್ವೆಯಲ್ಲಿ ಯಾರ ಪರ ಒಲವಿರುತ್ತದೆಯೋ? ಯಾರ ಪರ ನಿಲುವು ಇರುತ್ತದೆಯೋ ಅವರಿಗೆ ಟಿಕೆಟ್ ನೀಡಲಾಗುತ್ತದೆ. 

ಫೆಬ್ರವರಿ 8 ಕ್ಕೆ ಮುಖ್ಯಮಂತ್ರಿ ಫೆಬ್ರವರಿ 27ಕ್ಕೆ ಪ್ರಧಾನ ಮಂತ್ರಿ ಶಿವಮೊಗ್ಗಕ್ಕೆ ! ಏನೇನಿದೆ ಕಾರ್ಯಕ್ರಮ? ವಿವರ ಇಲ್ಲಿದೆ

ಮೇಲಾಗಿ ಟಿಕೆಟ್ ದೆಹಲಿಯಲ್ಲಿ ನೀಡನಾಗುತ್ತದೆ. ಸಮೀಕ್ಷೆಗಳ ವರದಿ ಪಡೆದುಕೊಂಡು ಅಂತಿಮವಾಗಿ ಮೋದಿಯವರು ಈ ಸಂಬಂಧ ತೀರ್ಮಾನ ಮಾಡುತ್ತಾರೆ. ನಾನು ತೀರ್ಮಾನ ಮಾಡುವುದಿಲ್ಲ. ನಿಮ್ಮ ವಿಚಾರವನ್ನು ಸಹ ನಾಯಕರ ಗಮನಕ್ಕೆ ತರುತ್ತೇನೆ. ಯಾರೇ ಅಭ್ಯರ್ಥಿಯಾದರೂ ಸಹ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment