ಶಿವಮೊಗ್ಗದಲ್ಲಿ ಇವತ್ತು ಇದೆ ಭಾರೀ ಮಳೆ | ಆರೆಂಜ್‌ ಅಲರ್ಟ್‌ ಯಾವೆಲ್ಲಾ ಜಿಲ್ಲೆಯಲ್ಲಿದೆ? ಇವತ್ತಿನ ಹವಾಮಾನ ವರದಿ ಓದಿ

weather department has issued an orange alert for Shivamogga and five other districts

ಶಿವಮೊಗ್ಗದಲ್ಲಿ ಇವತ್ತು ಇದೆ ಭಾರೀ ಮಳೆ | ಆರೆಂಜ್‌ ಅಲರ್ಟ್‌ ಯಾವೆಲ್ಲಾ ಜಿಲ್ಲೆಯಲ್ಲಿದೆ? ಇವತ್ತಿನ ಹವಾಮಾನ ವರದಿ ಓದಿ
orange alert for Shivamogga

SHIVAMOGGA | MALENADUTODAY NEWS | Jun 24, 2024  ಮಲೆನಾಡು ಟುಡೆ

ಶಿವಮೊಗ್ಗದಲ್ಲಿಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ನೀಡಿದ್ದು,  ಒಟ್ಟು ಆರು ಜಿಲ್ಲೆಗಳಿಗೆ  ‘ಯೆಲ್ಲೊ ಅಲರ್ಟ್’ ಘೋಷಿಸಿದೆ. 

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. 

ಬಾಗಲಕೋಟೆ, ಗದಗ, ದಾವಣಗೆರೆ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಕರಾವಳಿಯಲ್ಲಿ ತೀವ್ರ ಬಿರುಗಾಳಿಯ ಸಾಧ್ಯತೆಯಿದೆ. ಗಂಟೆಗೆ 35 ಕಿ.ಮೀ.ನಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಢಿದೆ. 

ನಾಳೆಯು ಸಹ 14 ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆಯಿದ್ದು, ಏಳು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. 

weather department has issued an orange alert for Shivamogga and five other districts