ಶಿವಮೊಗ್ಗದಲ್ಲಿ ಗಾಳಿ ಮಳೆಯದ್ದೆ ಅಬ್ಬರ! ಮನೆ ಮೇಲೆ ಬೀಳುತ್ತಿವೆ ಮರ! ತುಂಗಾ, ವರದಾ, ಮಾಲತಿ ನೀರಿನ ಮಟ್ಟ ಎಷ್ಟಿದೆ! ನಿನ್ನೆ ಏನೇನೇಲ್ಲಾ ಆಯ್ತು ? ವಿವರ ಇಲ್ಲಿದೆ

Malenadu Today

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಇನ್ನೂ ಎರಡು ದಿನ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವರ್ಷಧಾರೆಯ ಆರ್ಭಟವಿಲ್ಲದೆ ಮಲೆನಾಡು ಕಳೆಗುಂದಿತ್ತು. ಇದೀಗ ಎರಡು ದಿನಗಳಲ್ಲಿ ಆಗಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ ಕೊಳ್ಳಗಳು ಮೈದುಂಬಿ ಕೆಂಪು ನೀರು ತುಂಬಿಕೊಂಡಿವೆ. 

ತೀರ್ಥಹಳ್ಳಿಯಲ್ಲಿಯು ವ್ಯಾಪಕ ಮಳೆ

ತೀರ್ಥಹಳ್ಳ: ತಾಲೂಕಿನ ಆಗುಂಬೆ, ಆಗ್ರಹಾರ ಹೋಬಳಿಯಲ್ಲಿ ಬಿರುಸಿನ ಮಳೆಯಾಗಿದ್ದು, ತುಂಗಾನದಿಯಲ್ಲಿ ಒಳಹರಿವು ಹೆಚ್ಚಳಗೊಂಡಿದೆ. ತುಂಗಾನದಿಯನ್ನು ಸೇರುವ ಸಣ್ಣಪುಟ್ಟ ಹಳ್ಳ, ಕೊಳ್ಳ, ಉಪನದಿಗಳಲ್ಲಿಯು ಮಳೆ ನೀರು ಭರಪೂರವಾಗಿ ಹರಿಯುತ್ತಿದ್ದು  , ಗಾಜನೂರು ಜಲಾಶಯದಿಂದ ನೀರನ್ನ ನಿರಂತರವಾಗಿ ಹೊರಕ್ಕೆ ಬಿಡಲಾಗುತ್ತಿದೆ. 

Malenadu Today

ಉಕ್ಕಿದ ಮಾಲತಿ

ಇನ್ನೂ  ಮಳೆಯಿಂಧ ತೀರ್ಥಹಳ್ಳಿಯ ಪ್ರಮುಖ ನದಿ ಮಾಲತಿ ಹೊಳೆಯಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ. ಮಾಲತಿ ನದಿ ಪ್ರವಾಹ ಮಟ್ಟದಲ್ಲಿ ಹರಿಯುತ್ತಿದೆ. ಇನ್ನೂ  ನಿನ್ನೆ  ಶುಕ್ರವಾರ ಆಗುಂಬೆಯಲ್ಲಿ 84.5ಮೀ.ಮೀ., ತೀರ್ಥಹಳ್ಳಿ ಪಟ್ಟಣದಲ್ಲಿ 71.1 ಮಿ.ಮೀ. ಮಳೆ ಸುರಿದಿದೆ. 

ಮನೆ ಮೇಲೆ ಬಿದ್ದ ಮರ

ಮಳೆ ಗಾಳಿ ಅಬ್ಬರಕ್ಕೆ ಮರಗಳು ಉರುಳಿ ವಿದ್ಯುತ್​ ಕಂಬಗಳು ಮುರಿದುಬಿದ್ದಿರುವ ಬಗ್ಗೆಯು ವರದಿಯಾಗಿದೆ. ತೀರ್ಥಹಳ್ಳಿಯ ಕರಡಿಗ ಗ್ರಾಮದ ಸಿದ್ದಾಪುರ ವಾಸಿ ವಾಣಿ ಅವರ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿದೆ. ಮನೆಯ ಗೋಡೆ, ಚಾವಣಿ ಸಂಪೂರ್ಣ ಹಾನಿಗೀಡಾಗಿದೆ.

Malenadu Today

ವರದಾ ನದಿಯಲ್ಲಿ ಹೊಸ ಕಳೆ

ಅತ್ತ ಸೊರಬ  ತಾಲೂಕಿನಲ್ಲಿ ಮಳೆ ಬಿರುಸುಗೊಂಡಿದ್ದು ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.ವರದಾ ನದಿ ಪಾತ್ರದ ಕಡಸೂರು, ತಟ್ಟಿಗಂಡಿ, ಕಾರೆಹೊಂಡ ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ. ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಭರಪೂರ ನೀರು ಹರಿಯುತ್ತಿದ್ದು, ರೈತರಲ್ಲಿ ಮಳೆ ಸಂತಸ ಮೂಡಿಸಿದೆ. ಇನ್ನೂ ಗಾಳಿ ಮಳೆಗೆ ಮನೆ ಗೋಡೆಗಳು ಕುಸಿದಿರುವ ಘಟನೆ ಸಂಭವಿಸಿದೆ. 

ಹೊಸನಗರದಲ್ಲಿಯು ಮಳೆಯ ಕಳೆ

ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮಳೆ ಹೊಸನಗ ತಾಲ್ಲೂಕಿನಲ್ಲಾಗುತ್ತಿದೆ. ಮಳೆಯ ಆರ್ಭಟಕ್ಕೆ ಡ್ಯಾಂಗಳಲ್ಲಿ ಒಳಹರಿವು ಹೆಚ್ಚಳಗೊಂಡಿದೆ. ಅಲ್ಲದೆ ಮನೆಗಳು ಕುಸಿದ ಘಟನೆ ಬಗ್ಗೆಯು ವರದಿಯಾಗಿದೆ.  ಹೊಸನಗರದಲ್ಲಿ ಕಳೆದ 24 ಗಂಟೆಗಳಲ್ಲಿ 130.2 ಮಿ.ಮೀ. ಮಳೆ ದಾಖಲಾಗಿದೆ. ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದ್ದು, ಈ ಸಂಬಂಧ ತಾಲ್ಲೂಕು ಆಡಳಿತ ಎಚ್ಚರಿಕೆ ವಹಿಸಿದೆ.  

ಸಾಗರದಲ್ಲಿಯು ವ್ಯಾಪಕ ಮಳೆ

ಸಾಗರ ತಾಲ್ಲೂಕಿನಲ್ಲಿಯು ಉತ್ತಮ ಮಳೆಯಾಗುತ್ತಿದೆ. ಗಾಳಿ ಮಳೆ ಆರ್ಭಟಕ್ಕೆ ನಿನ್ನೆ ರಾತ್ರಿ ಸಾಗರದ ನಗರದ ನಗರಸಭೆ ಸದಸ್ಯೆ ಮಧು ಮಾಲತಿಯವರ ಮನೆ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿತ್ತು. ಘಟನೆಯಲ್ಲಿ  ರಸ್ತೆಯಲ್ಲಿ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿದೆ. ಅಲ್ಲದೆ ಮನೆಗ ಗೋಡೆಗೆ ಹಾನಿಯಾಗಿದೆ. ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.  

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

 

Share This Article