ರಿಪ್ಪನ್​ಪೇಟೆ ಸಮೀಪ ಕಾರು ಸ್ಕೂಟಿ ಡಿಕ್ಕಿ, ಮಹಿಳೆಗೆ ಗಂಭೀರ ಗಾಯ

Malenadu Today

SHIVAMOGGA |  Dec 11, 2023 | ಶಿವಮೊಗ್ಗ ಜಿಲ್ಲೆ ಹೊಸನಗರದ ರಿಪ್ಪನ್​ಪೇಟೆ ಸಮೀಪ ಗವಟೂರಿನಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ.  ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಮಹಿಳೆಯ ಕಾಲಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ

ರಿಪ್ಪನ್​ಪೇಟೆ ಗವಟೂರು

ಇಲ್ಲಿ ಹೊಸನಗರ ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್  ಹಾಗೂ ಹಳಿಯೂರು ರಸ್ತೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ದೊಡ್ಡಿನಕೊಪ್ಪ ಗ್ರಾಮದ ಚಂದ್ರಬಾಬು ಹಾಗೂ ಲಕ್ಷ್ಮೀ ದಂಪತಿ ಸ್ಕೂಟಿಯಲ್ಲಿ ಮುಖ್ಯ ರಸ್ತೆಗೆ ಬರುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಲಕ್ಷ್ಮೀಯವರ ಕಾಲಿಗೆ ಪೆಟ್ಟಾಗಿದೆ. 

ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್

ಇಲ್ಲಿನ ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸ್ಥಳೀಯರು ತಕ್ಷಣವೇ ನೆರವಿಗೆ ಬಂದು ಇಬ್ಬರನ್ನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಶಿವಮೊಗ್ಗದ ಮೆಗ್ಗಾನ್​ಗೆ ಗಾಯಾಳು ಲಕ್ಷ್ಮೀಯವರನ್ನ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.  

ಲಾರಿ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ! ಬೆಂಗಳೂರಿನಿಂದ ಹುಂಚಕ್ಕೆ ಬರುತ್ತಿದ್ದಾಗ ಘಟನೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ಇವತ್ತು ಬೆಳಗ್ಗೆ ಈ ಗಠನೆ ನಡೆದಿದೆ. 

ತೀರ್ಥಹಳ್ಳಿ ತಾಲ್ಲೂಕು

ಇಲ್ಲಿನ ಆರಗ ಸರ್ಕಲ್​ನಲ್ಲಿ ಘಟನೆ ಸಂಭವಿಸಿದ್ದು ಕೆಎಸ್​​ಆರ್​ಟಿಸಿ ಬಸ್​ ಹಾಗೂ ಹತ್ತು ಚಕ್ರದ ಲಾರಿಯ ಎದುರುಬದುರಾಗಿ ಒಂದು ಸೈಡ್​ಗೆ ಡಿಕ್ಕಿಯಾಗಿವೆ.

READ : ಭದ್ರಾವತಿ ಬಡಿದಾಟಕ್ಕೆ ಕಾರಣವೇನು? ಬಿಜೆಪಿ , ಕಾಂಗ್ರೆಸ್​ , ಗೋಕುಲ, ಕೆಂಚನಳ್ಳಿ, ಪೊಲೀಸು, ಇಸ್ಪೀಟು ಮತ್ತು ನಾ ನಿನ್ನ ಬಿಡಲಾರೆ! ಏನಿದೆಲ್ಲಾ Exclusive

ಕೆಎಸ್​ಆರ್​ಟಿಸಿ ಬಸ್ 

ಬೆಂಗಳೂರು ಬಸ್​ ತೀರ್ಥಹಳ್ಳಿ ಮೂಲಕ ಹುಂಚಕ್ಕೆ ಹೋಗುತ್ತಿತ್ತು. ಈ ವೇಳೆ ಘಟನೆ ಸಂಭವಿಸಿದೆ. ಅತ್ತ ಲಾರಿಯ ಮೂಲ ಸ್ಪಷ್ಟವಾಗಿಲ್ಲ. ಅಪಘಾತದಲ್ಲಿ ಬಸ್​ನ ಒಂದು ಬಾಗ ಜಖಂಗೊಂಡಿದೆ. ಲಾರಿಯ ಬಾಡಿ ಸಹ ಡ್ಯಾಮೇಜ್ ಆಗಿದೆ. ದಟ್ಟ ಮಂಜಿನ ಕಾರಣಕ್ಕೆ ಎದುರಿನ ದಾರಿ ಸ್ಪಷ್ಟವಾಗದೇ ಈ ಘಟನೆ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಅದೃಷ್ಟಕ್ಕೆ ಇಲ್ಲಿ ಯಾರಿಗೂ ಏನೂ ಸಹ ಆಗಿಲ್ಲ. 


 

Share This Article