ಭದ್ರಾವತಿ ಬಡಿದಾಟಕ್ಕೆ ಕಾರಣವೇನು? ಬಿಜೆಪಿ , ಕಾಂಗ್ರೆಸ್​ , ಗೋಕುಲ, ಕೆಂಚನಳ್ಳಿ, ಪೊಲೀಸು, ಇಸ್ಪೀಟು ಮತ್ತು ನಾ ನಿನ್ನ ಬಿಡಲಾರೆ! ಏನಿದೆಲ್ಲಾ Exclusive

Bhadravathi assault case: Full details exclusive

ಭದ್ರಾವತಿ ಬಡಿದಾಟಕ್ಕೆ ಕಾರಣವೇನು? ಬಿಜೆಪಿ , ಕಾಂಗ್ರೆಸ್​ , ಗೋಕುಲ, ಕೆಂಚನಳ್ಳಿ, ಪೊಲೀಸು, ಇಸ್ಪೀಟು ಮತ್ತು  ನಾ ನಿನ್ನ ಬಿಡಲಾರೆ! ಏನಿದೆಲ್ಲಾ Exclusive

SHIVAMOGGA |  Dec 11, 2023 | ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ರಾಜಕೀಯ ಸಂಘರ್ಷ ಆರಂಭವಾಗಿದೆಯಾ? ಹೀಗೆ ಪ್ರಶ್ನೆ ಮೂಡುವುದಕ್ಕೆ ಕಾರಣವಾಗಿರುವುದು ನಿನ್ನೆ ಬಿಜೆಪಿ ಕಾರ್ಯಕರ್ತನ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣ.. 

ಶಾಸಕ ಸಂಗಮೇಶ್​ ಹಾಗೂ ಅವರ ಪುತ್ರನ ವಿರುದ್ಧ ಫೇಸ್​ಬುಕ್ ಫೋಸ್ಟ್​ನ್ನ ಗೋಕುಲಕೃಷ್ಣ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೆ ದುಷ್ಕರ್ಮಿಗಳು  ಗೋಕುಲ್​ ರವರಿಗೆ ಸೇರಿದ್ದ ಕಾರನ್ನ ಲಟ್ಟಾದಿಂದ ಹೊಡೆದು ಜಖಂಗೊಳಿಸಿದ್ದರು. ಇನ್ನೇನು ಇಲ್ಲಿಗೆ ಮುಗಿಯಿತು ಎನ್ನುವಷ್ಟರಲ್ಲಿ ನಿನ್ನೆ ರಾತ್ರಿ ಗೋಕುಲ್​ರವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದು, ನಡೆದ ಘಟನೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. 

ಕಾರು ಜಖಂಗೊಂಡ ಸಂದರ್ಭದಲ್ಲಿ ಗೋಕುಲ್ ಮನೆಯಲ್ಲಿ ಇರಲಿಲ್ಲ. ಬೇರೆಡೆಗೆ ಹೋಗಿದ್ದ ಅವರು ಸಂಜೆ ಭದ್ರಾವತಿಗೆ ವಾಪಸ್ ಆಗಿದ್ದಾರೆ. ಅಲ್ಲದೆ ಊಟ ತೆಗೆದುಕೊಳ್ಳಲು ಬಿ.ಹೆಚ್​.ರೋಡ್​ನಲ್ಲಿರುವ ಕಾಂಚನ್​ ಹೋಟೆಲ್​ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. 

READ : ಶಿವರಾಜ್ ಕುಮಾರ್ ಗೆ ಎಂಪಿ ಟಿಕೆಟ್ ನೀಡುತ್ತೇನೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್! ಶಿವಮೊಗ್ಗ ಕುತೂಹಲ!

ಇನ್ನೂ ಪ್ರಕರಣ ಅಸಲಿಗೆ ಬೇರೆಯದ್ದೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ವೈಯಕ್ತಿಕ ದ್ವೇಷ ಹಾಗೂ ಪ್ರಚೋದನೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.ಗೋಕುಲಕೃಷ್ಣನ್​ ಫೇಸ್​ಬುಕ್​ ಫೋಸ್ಟ್​ಗಳು ಈ ಸಂಬಂಧ ವೈರಲ್ ಆಗುತ್ತಿವೆ. ಭದ್ರಾವತಿಯ ಇಸ್ಪೀಟ್​, ಕ್ರಿಕೆಟ್​ ದಂಧೆ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಕಣ್ಮುಚ್ಚಿ ಕುಳಿತಿರುತ್ತದೆಯಷ್ಟೆ

ಇನ್ನೂ ಈ ವಿಚಾರದಲ್ಲಿ ಗೋಕುಲ್ ಕೃಷ್ಣನ್ ಹಾಕಿದ ಫೋಸ್ಟ್​ ಸಂಬಂಧ ಅವರ ಕಾರು ಜಖಂಗೊಳಿಸಲಾಯ್ತು ಹಾಗೂ ಅವರ ಮೇಲೆ ಹಲ್ಲೆ ಮಾಡಲಾಯ್ತು ಎಂಬುದು ಒಂದು ಕಡೆಯವರ ವಾದ.. ಇದೇ ರೀತಿಯಲ್ಲಿ ಇನ್ನೊಂದು ಕಡೆಯ ವಾದ  ಹೀಗಿದೆ. ಈ ಸಂಬಂಧ ವಾಟ್ಸ್ಯಾಪ್​​ಗಳಲ್ಲಿ ಗೋಕುಲ್ ಕೃಷ್ಣನ್​ರವರದ್ದು ಎನ್ನಲಾದ ಫೋನ್ ಕಾಲ್ ವೊಂದು ವೈರಲ್ ಆಗುತ್ತಿದೆ. ಅಲ್ಲದೆ ಗೋಕುಲ್​ರವರು ಹಾಕಿರುವ ಫೇಸ್​ ಬುಕ್​ ಪೋಸ್ಟ್​ ಸಹ ಭದ್ರಾವತಿಗರ ವಾಟ್ಸ್ಯಾಪ್​ಗಳಲ್ಲಿ ಷೇರ್ ಆಗುತ್ತಿದೆ. 

READ : ಶಕ್ತಿ ಯೋಜನೆ ಹೆಸರಲ್ಲಿ ಸರ್ಕಾರಿ ಬಸ್​ ನಿರ್ವಾಹಕನಿಗೆ ಖಾಸಗಿ ಬಸ್​ ಸಿಬ್ಬಂದಿ ಹಲ್ಲೆ ! ತೀರ್ಥಹಳ್ಳಿಯಲ್ಲಿ ನಡೆದಿದ್ದೇನು?

ಗೋಕುಲ ಹಾಗೂ ಕೆಂಚನಳ್ಳಿ ..... ಎಂಬುವವರ ನಡುವೆ ವಿವಿಧ ಕಾರಣಕ್ಕೆ ವ್ಯಾಜ್ಯವಿದೆ ಎನ್ನಲಾಗಿದೆ. ನಿನ್ನೆ ಈ ಸಂಬಂಧ ಗೋಕುಲ್​ ಫೇಸ್​ಬುಸ್ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದೆ.  ಕಾರು ಜಖಂ ಆದ ಘಟನೆಯ ನಂತರದ ಫೋಸ್ಟ್​ಗಳಲ್ಲಿ ಕುಲ್ಡಾ ಐ ಆಮ್ ಕಮ್ಮಿಂಗ್​, ಡಾರ್ಲಿಂಗ್ ಕೆಂಚು, ಐ ಆ್ಯಮ್​ ಇನ್ ಭದ್ರಾವತಿ ಅಟೆಂಡ್ ಕಾಲ್ ಎಂದು ಗೋಕುಲ್ ಕೃಷ್ಣನ್ ಫೋಸ್ಟ್ ಹಾಕಿದ್ದಾರೆ ಎಂಬ ಸ್ಕ್ರೀನ್​ಶಾಟ್​ಗಳು ಹರಿದಾಡುತ್ತಿವೆ. ಇಷ್ಟೆ ಅಲ್ಲದೆ ಕೆಂಚನಳ್ಳಿ......ಗೆ ಕರೆ ಮಾಡಿದ ಗೋಕುಲ್ ಕಾಂಚನ್​ ಹೋಟೆಲ್​ ಹತ್ರ ಇದ್ದೇನೆ ಬಾ ಎಂದು ಹೇಳುವ ಆಡಿಯೋವೊಂದು ವಾಟ್ಸ್ಯಾಪ್​ ನಲ್ಲಿ ಹರಿದಾಡುತ್ತಿದೆ. 

ಲಭ್ಯ ಮಾಹಿತಿ ಪ್ರಕಾರ, ಈ ಆಡಿಯೋ ಸವಾಲ್​ ಬೆನ್ನಲ್ಲೆ ಕಾಂಚನ್​ ಹೋಟೆಲ್​ ಬಳಿಗೆ ಒಂದು ಬಣ ತೆರಳಿದೆ. ಅಲ್ಲಿ  ಹೊಡೆದಾಟವಾಗಿದ್ದು, ಗೋಕುಲ್​ರಿಗೆ ಪೆಟ್ಟು ಬಿದ್ದಿದೆ. ಇಷ್ಟೆ ಅಲ್ಲದೆ ಸರ್ಕಾರಿ ಆಸ್ಪತ್ರೆಯ ಮುಂದೆಯು ಇದೇ ಕಾರಣಕ್ಕೆ ಎರಡು ಕಡೆಯವರ ನಡುವೆ ಹೊಡೆದಾಟವಾಗಿದ್ದು ಭದ್ರಾವತಿಯ ಪ್ರಮುಖ ಮುಖಗಳು ಅಲ್ಲಿ ಕಾಣಸಿಕ್ಕಿದ್ದವು ಎನ್ನುತ್ತದೆ ಸುದ್ದಿಮೂಲ. 

ಒಟ್ಟಾರೆ ವೈಯಕ್ತಿಕ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಗಳ ಸದಸ್ಯರ ನಡುವೆ ಹೊಡೆದಾಟ ನಡೆದಿದ್ದು ಗಲಾಟೆಗೆ ಅದರದ್ದೆ ಆದ ಆಯಾಮಗಳು ಸಿಕ್ಕು  ವಿವಿಧ ರೀತಿಯಲ್ಲಿ ವರದಿಯಾಗುತ್ತಿದೆ. ಇಲ್ಲಿ ಮುಖ್ಯವಾಗಿ ಇದೆಲ್ಲವೂ ಆರಂಭವಾಗಿದ್ದು ಕನಕಮಂಟಪದ ಕಬ್ಬಡಿ ಆಟದಿಂದ..! ಎರಡನೆಯದ್ದಾಗಿ ಅಕ್ರಮ ದಂಧೆ ಇಸ್ಪೀಟು, ಓಸಿ, ಕ್ರಿಕೆಟ್ ಬೆಟ್ಟಿಂಗ್​ ಮತ್ತು ಪೊಲೀಸ್ ಸ್ಟೇಷನ್​ನಗಳ ಲಕ್ಷ ಲಕ್ಷ ಮಾಮೂಲು ಅತಿರೇಕದ ಟೆಂಪ್ರವರಿ ಕ್ಲೈಮ್ಯಾಕ್ಸ್​ಗೆ ಕಾರಣ.. ಈ ಎಲ್ಲಾ ಕಥೆಗಳನ್ನು  ಶೀಘ್ರದಲ್ಲಿಯೇ ಹೇಳುತ್ತೇವೆ..