ಬಾಲ್ಯ ಸ್ನೇಹಿತರ ನಡುವೆ ನಡೆದಿದ್ದೇನು? ತುಂಗಾ ನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ ನಡೆದ ಮಾರಾಮಾರಿ ಘಟನೆ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

What did SP Mithun Kumar say about the fight that took place in Tunga Nagar Police Station Limits?ತುಂಗಾ ನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ ನಡೆದ ಮಾರಾಮಾರಿ ಘಟನೆ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Sep 23, 2023 SHIVAMOGGA NEWS’

 

ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಮಾರಾಮಾರಿ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಿರಣ್ ಹಾಗೂ ಪವನ್ ಎಂಬ ಬಾಲ್ಯಸ್ನೇಹಿತರ ನಡುವಿನ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಎಂಟು ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. 

ಇನ್ನೂ ಪ್ರಕರಣದ  ಬಗ್ಗೆ ಇವತ್ತು ಎಸ್​ಪಿ ಮಿಥುನ್​ ಕುಮಾರ್​ (SP Mithun Kumar) ಮಾತನಾಡಿದ್ದು, ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಎಂಟು ಆರೋಪಿಗಳನ್ನ ಅರೆಸ್ಟ್ ಮಾಡಿ ಜೆಸಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

BREAKING NEWS / ಶಿವಮೊಗ್ಗದ ಆಲ್ಕೋಳ ಸಮೀಪ ಎರಡು ಗುಂಪುಗಳ ಮಾರಾಮಾರಿ! ಐವರಿಗೆ ಇರಿತ! ಮೆಗ್ಗಾನ್​ಗೆ ದಾಖಲು

ಇಷ್ಟಕ್ಕೂ ನಡೆದಿದ್ದೇನು?

ಕಿರಣ್ ಮತ್ತು ಪವನ್ ಇಬ್ಬರು ಬಾಲ್ಯಸ್ನೇಹಿತರು, ಅವರ ನಡುವೆ ಕೆಲವೊಂದು ವಿಷಯಗಳಿಗೆ ಬಿನ್ನಾಭಿಪ್ರಾಯವಿತ್ತು. ಅಂದು ಮಧ್ಯರಾತ್ರಿಯವರೆಗೂ ಇಬ್ಬರು ಡ್ಯಾನ್ಸ್​ ಮಾಡಿದ್ದಾರೆ. ಈ ವೇಳೇ ಮೈಮೇಲೆ ಏಕೆ ಬೀಳ್ತಿಯಾ ಎಂಬ ವಿಷಯದ ಹಿಡಿದು ಕೆಲವು ಮಾತುಕತೆಗಳು ಇಬ್ಬರ ನಡುವೆ ನಡೆದಿದೆ. 



ಈ ವೇಳೆ ಅಲ್ಲಿಯು ಕಿತ್ತಾಟ ನಡೆದಿದೆ. ಆನಂತರ ಕಿರಣ್​ ಪವನ್​ಗೆ ಫೋನ್​ ಕಾಲ್​ ಮಾಡಿ ಎಲ್ಲಿದ್ಯೋ ನೀನು ಬಾರೋ ನೋಡ್ಕೊಳ್ತೀನಿ ಎಂದು ಹೇಳಿದ್ದಾನೆ. ಇದರಿಂದ ಪ್ರಚೋದನೆಗೆ ಒಳಗಾದ ಪವನ್ ಹುಡುಗರ ಜೊತೆ ಮಾರಕಾಸ್ತ್ರಗಳ ಜೊತೆಗೆ ಕಿರಣ್​ ಆ್ಯಂಡ್ ಗ್ಯಾಂಗ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಘಟನೆಯಲ್ಲಿ ಒರ್ವನಿಗೆ ಗಂಭೀರ ಗಾಯವಾಗಿದ್ದು, ಉಳಿದವರಿಗೆ ಮೈನರ್ ಇಂಜುರಿಯಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು