KARNATAKA NEWS/ ONLINE / Malenadu today/ May 18, 2023 SHIVAMOGGA NEWS PAPER ONLINE
ಶಿವಮೊಗ್ಗ ಎಗ್ರೈಸ್ ತಿನ್ನಲು ಬೈಕ್ ಸೈಡ್ಹಾಕಿ ನಿಂತಿದ್ದಾಗ ಟ್ರ್ಯಾಕ್ಟರ್ ಗುದ್ದಿ, ಯುವಕನೊಬ್ಬ ಸಾವನ್ನಪ್ಪಿದ್ದಾನೆ.ಶಿವಮೊಗ್ಗದ ಹೊಳಲೂರಿನ ಕೆಇಬಿ ಕಚೇರಿ ಬಳಿ ಈ ಘಟನೆ ಸಂಭವಿಸಿದೆ.
ರೈಲಿಗೆ ಕಾಡುಕೋಣ ಡಿಕ್ಕಿ/ ಚರಂಡಿಗೆ ಬಿದ್ದು ಕಾಡು ಪ್ರಾಣಿಯ ನರಳಾಟ
ಹೇಗಾಯ್ತು!
ಹೊಳಲೂರಿನ ಕೆಇಬಿ ಮುಂಭಾಗ ಎಗ್ ರೈಸ್ ತಿನ್ನಲು ಆಕಾಶ್ (20) ಮತ್ತು ಸೋಮಿಕೊಪ್ಪದ ನವೀನ (23) ತೆರಳಿದ್ರು. ಬೈಕ್ ಸೈಡ್ಗೆ ಹಾಕಿ ಎಗ್ ರೈಸ್ ಆರ್ಡರ್ ಹೇಳಿ, ಬೈಕ್ ಬಳಿಯಲ್ಲಿಯೇ ಮೊಬೈಲ್ ನೋಡುತ್ತಾ ನಿಂತಿದ್ದರು.
ಶಿವಮೊಗ್ಗದಲ್ಲಿ ಎಲೆಕ್ಷನ್ ಡ್ಯೂಟಿ ಮುಗಿಸಿ ಊರಿಗೆ ಹೋದ ಅಧಿಕಾರಿಗೆ ಕಾದಿತ್ತು ಶಾಕ್
ಈ ವೇಳೆ ಮೇಲಿನ ಹನಸವಾಡಿಯಿಂದ ಇಟ್ಟಿಗೆ ತುಂಬಿಸಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ (shivamogga hospital) ಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Viral video/ ಕಾರಿನಲ್ಲಿ ಬಂದು ಸರಗಳ್ಳತನ! ! ವೈರಲ್ ಆಗ್ತಿದೆ ಈ ಸಿಸಿ ಟಿವಿ ದೃಶ್ಯ
Malenadutoday.com Social media
