Viral video/ ಕಾರಿನಲ್ಲಿ ಬಂದು ಸರಗಳ್ಳತನ! ! ವೈರಲ್ ಆಗ್ತಿದೆ ಈ ಸಿಸಿ ಟಿವಿ ದೃಶ್ಯ

Viral video/ chain snatching incident, caught on CCTV camera, this CCTV footage is going viral

Viral video/  ಕಾರಿನಲ್ಲಿ ಬಂದು ಸರಗಳ್ಳತನ! ! ವೈರಲ್ ಆಗ್ತಿದೆ ಈ ಸಿಸಿ ಟಿವಿ ದೃಶ್ಯ

KARNATAKA NEWS/ ONLINE / Malenadu today/ May 17, 2023 GOOGLE NEWS / SHIVAMOGGA NEWS

ಕೊಯಂಬತ್ತೂರು/ (Viral video today)/ ಸರಗಳ್ಳರು ಸಹ ಇತ್ತೀಚೆಗೆ ಹೈಟೆಕ್ ಆಗಿದ್ದು ಕಾರಿನಲ್ಲಿ ಬಂದು ಕುತ್ತಿಗೆಗೆ ಕೈಹಾಕಿ ಸರಗಳನ್ನ ಕಿತ್ತುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತಹ ದೃಶ್ಯವೊಂದು ತಮಿಳುನಾಡಿನ ಕೊಯಮತ್ತೂರುನಲ್ಲಿ ಕಾಣಸಿಕ್ಕಿದೆ. ನಡೆದ ಘಟನೆಯನ್ನು ರಾಷ್ಟ್ರೀಯ ಸುದ್ದಿ ಮಾದ್ಯಮಗಳು ಸಿಸಿಟಿವಿ ಪೂಟೇಜ್​ ಸಮೇತ ಪ್ರಸಾರ ಮಾಡುತ್ತಿದ್ದು, ದೃಶ್ಯ ಆತಂಕ ಮೂಡಿಸ್ತಿದೆ. 

ನಡೆದಿದ್ದೇನು?

33 ವರ್ಷದ ಕೌಸಲ್ಯ ಎಂಬವರು ರಸ್ತೆಯೊಂದರಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸರಗಳ್ಳತನಕ್ಕೆ ಮುಂದಾಗಿದ್ದಾರೆ. ಡ್ರೈವರ್ ಮಹಿಳೆಯ ಸಮೀಪದಲ್ಲಿಯೇ ಕಾರು ಚಲಾಯಿಸಿದರೇ ಇನ್ನೊಂದು ಕಡೆ, ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರವನ್ನ ಎಳೆಯುತ್ತಾನೆ. ಈ ವೇಳೆ ಮಹಿಳೆ ಬಿದ್ದರು ಸಹ ಬಿಡದೇ ಆಕೆಯನ್ನ ಕೊಂಚ ದೂರ ಎಳೆದುಕೊಂಡು ಹೋಗುತ್ತಾರೆ. ಸರ ಕಿತ್ತುಕೊಂಡು ಇಬ್ಬರು ಸಹ ಕಾರಿನಲ್ಲಿಯೇ ಪರಾರಿಯಾಗುತ್ತಾರೆ. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಮಿಳುನಾಡು  . #TamilNadu ಪೊಲೀಸರು #Coimbatore ನಗರದಲ್ಲಿ ನಡೆದ ಘಟನೆಯ ಸಿಸಿ ಟಿವಿ ಪೂಟೇಜ್​ ದೃಶ್ಯವನ್ನು ಆಧರಿಸಿ ಕಾರನ್ನ ಪತ್ತೆ ಮಾಡಿದ್ಧಾರೆ. ಅಲ್ಲದೆ  ಇಬ್ಬರು ಸರಗಳ್ಳರಾದ ಅಭಿಷೇಕ್ ಮತ್ತು ಶಕ್ತಿವೇಲ್  ನನ್ನ ಬಂಧಿಸಿದ್ಧಾರೆ. 


ಮರುಕೂಳೆ ಹುಲ್ಲು ತಿಂದು 10 ಜಾನುವಾರು ಸಾವು! ಏನಿದು ವಿಷದ ಹುಲ್ಲು!?

ಸೊರಬ/ಶಿವಮೊಗ್ಗ/ ಇಲ್ಲಿನ ಕೆರೆಕೊಪ್ಪ ಗ್ರಾಮದಲ್ಲಿ ಮರುಕೂಳೆ ಹುಲ್ಲನ್ನು ತಿಂದು 8 ಜಾನುವಾರುಗಳು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಒಟ್ಟು 10 ಜಾನುವಾರುಗಳು ಸಾವನ್ನಪ್ಪಿದ್ದು, ಘಟನೆ ಅಚ್ಚರಿ ಮೂಡಿಸಿದೆ. 

ಏನಾಗಿದ್ದು!

ದ್ಯಾವರಾಯಪ್ಪ ಹಾಗೂ ರಾಮಣ್ಣ ಎಂಬವರಿಗೆ  ಸೇರಿದ 10 ಜಾನುವಾರುಗಳು ಸಾವನ್ನಪ್ಪಿವೆ. ಈ ಜಾನುವಾರು ಜಮೀನಲ್ಲಿ ಮರುಕೂಳೆ ಹುಲ್ಲು ತಿಂದು ಅಸ್ವಸ್ಥಗೊಂಡಿದ್ದವು. ತಕ್ಷಣವೇ ಪಶುವೈದ್ಯರನ್ನ ಕರೆಸಿ  ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ  2 ಹಸುಗಳು ಬದುಕುಳಿದಿವೆ. ಉಳಿದಂತೆ ಐದು ಆಕಳು, ಒಂದು ಜತೆ ಎತ್ತು ಹಾಗೂ ಒಂದು ಎಮ್ಮೆ ಸಾವನ್ನಪ್ಪಿದೆ. 

ರೊಟ್ಟಿ ಜೋಳದ ಮರುಕೂಳೆ ಹುಲ್ಲಿನಲ್ಲಿ ಸೈನೈಡ್ ಅಂಶ ಇರುತ್ತದೆ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಾನುವಾರು ಸಾವನ್ನಪ್ಪಿರುವ ಸಾಧ್ಯತೆ ಇದೆ. ಇನ್ನೂ ಸಾವಿಗೀಡಾದ ಜಾನುವಾರುಗಳನ್ನು ಮರಣೋತ್ತರ ಪರೀಕ್ಷೆ ಮಾಡಿ ಮಾದರಿಗಳನ್ನು  ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು,  ವರದಿ ಬಂದ ನಂತರ ಜಾನುವಾರು ಸಾವಿನ ನಿಖರ ಕಾರಣ ತಿಳಿಯಲಿದೆ. 


ಬೈಯ್ಯುವಾಗ ಹುಷಾರು! ಮೊಮ್ಮಗನಿಗೆ ಬೈದಿದ್ದಕ್ಕೆ, ಎದುರು ಮನೆಯವನಿಂದ ಹಲ್ಲೆ! ಕಾರಣ ‘ಮಂಜುನಾಥ’ಹೊಳೆಹೊನ್ನೂರು/  ಮೊಮ್ಮಗನಿಗೆ ಕುಡಿದು ದುಡ್ಡು ಹಾಳು ಮಾಡ್ತೀಯಾ ಎಂದು ಬೈದಿದ್ದಕ್ಕೆ ತನಗೆ ಬೈದರು ಎಂದುಕೊಂಡು ಎದುರು ಮನೆಯಾತ ಬಂದು ಹಲ್ಲೆ ಮಾಡಿದ ಘಟನೆ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿ ಕಳೆದ ಹನ್ನೊಂದರಂದು ನಡೆದ ಘಟನೆ ಸಂಬಂದ ತಡವಾಗಿ ದೂರು ದಾಖಲಾಗಿದೆ. 

ರಾತ್ರಿ ಬೈಕ್​ನಲ್ಲಿ ಹೋಗುವಾಗ ಹುಷಾರ್! ಯಾಮಾರಿದ್ರೆ ಜೀವಕ್ಕೆ ಆಪತ್ತು! ಹೀಗೂ ಆಗುತ್ತೆ ಹುಷಾರ್!

ಸ್ಥಳೀಯ ನಿವಾಸಿ ಜಯಮ್ಮ ಎಂಬವರು, ತಮ್ಮ ಮೊಮ್ಮಗ ತನ್ನ ಬಳಿ ಬಂದು ದುಡ್ಡು ಕೇಳಿದ್ದಕ್ಕೆ ಆತನಿಗೆ ನೀನು ಕುಡಿದು ಹಾಳು ಮಾಡ್ತೀಯ ಎಂದು ಬೈಯ್ಯುತ್ತಿದ್ದರಂತೆ. ಈ ವೇಳೆ ಎದುರು ಮನೆಯ ನಿವಾಸಿ ಬಂದು ನನಗೇಕೆ ಬೈಯ್ಯುತ್ತಿದ್ಯಾ ಎಂದು ಹಲ್ಲೆ ಮಾಡಿದ್ದಾರೆ. ಅಜ್ಜಿಯ ಮೊಮ್ಮಗ ಹಾಗೂ ಎದುರು ಮನೆಯ ನಿವಾಸಿಯ ಹೆಸರು ಒಂದೇ ಆಗಿದ್ದು, ಮೊಮ್ಮಗ ಮಂಜುನಾಥ್​ ನಿಗೆ ಬೈದಿದ್ದನ್ನ ಎದುರು ಮನೆಯ ನಿವಾಸಿ ಮಂಜುನಾಥ ತನಗೆ ಬೈದ್ರು ಎಂದು ತಿಳಿದು ಹಲ್ಲೆ ನಡೆಸಿದ್ದಾನೆ ಎಂದು  ದೂರಲಾಗಿದೆ. 

ಆನಂದಪುರದ ಬಳಿ ಭೀಕರ ಅಪಘಾತ! ಮರಕ್ಕೆ ಕಾರು ಡಿಕ್ಕಿ! ಕಾಂಗ್ರೆಸ್​ ಮುಖಂಡನ ಸಾವು ! ಇನ್ನೊಬ್ಬರ ಸ್ಥಿತಿ ಗಂಭೀರ

ಘಟನೆಯಲ್ಲಿ ವೃದ್ಧೆಯ ಮೇಲೆ ಮಂಜುನಾಥ್ ಹಾಗೂ ಇತರೇ ಮೂವರು ಸೇರಿ ಹಲ್ಲೆ ನಡೆಸಿದ ಆರೋಪ ಮಾಡಲಾಗಿದ್ದು, ಹೊಳೆಹೊನ್ನೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಪಾರಿವಾಳ ಬೇಕಾ ಎಂದು ಕೇಳಿಕೊಂಡು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕದ್ದರಾಶಿವಮೊಗ್ಗ/ ಪಾರಿವಾಳ ತಗೊಳ್ತೀರಾ ಬಂದು , ಮನೆಯಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಬಂಗಾರ ಕದ್ದು ಹೋದ ಆರೋಪದ ಸಂಬಂಧ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಾಗಿದೆ. ಘಟನೆ ನಡೆದು 15ಕ್ಕೂ ಹೆಚ್ಚು ದಿನದ ನಂತರ ಕಂಪ್ಲೆಂಟ್ ಆಗಿದ್ದು ಎಫ್ಐಆರ್ ಆಗಿದೆ.  

ಇದನ್ನು ಸಹ ಓದಿ /ಲಗೇಜ್​ ಆಟೋ ಹಾಗೂ ಬೈಕ್ ನಡುವೆ ಡಿಕ್ಕಿ! ಸಹಾಯ ಕೇಳಿದ್ರೂ ಸಹಕರಿಸಿದ ಜನ! ಮಾನವೀಯತೆ ಮೆರೆದ ಯುವಕರ ತಂಡ

ನಡೆದಿದ್ದೇನು?

ಶಿವಮೊಗ್ಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ, ಪ್ರಚಾರಕ್ಕೆ ಹೋಗಿ ವಾಪಸ್​  ಮನೆಗೆ  ಬಂದ ಸಂದರ್ಭದಲ್ಲಿ, ದೂರುದಾರ ಮಹಿಳೆಯೊಬ್ಬರಿಗೆ, ಬುದ್ದಾನಗರದ ಹುಡುಗರ ಗುಂಪೊಂದು ಪಾರಿವಾಳ ಬೇಕಾ ಎಂದು ಬಂದು ಕೇಳಿದೆ. 

ಆಗ ಮಹಿಳೆಯು ನಾವು ಪಾರಿವಾಳ ಸಾಕುವುದಿಲ್ಲ. ಬೇಡವೆಂದು ಹೇ, ಅಲ್ಲಿಂದ ಮನೆ ಪಕ್ಕಕ್ಕೆ ತೆರಳಿದ್ದಾರೆ. ಆ ಕಡೆಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಮನೆಯಲ್ಲಿದ್ದ  ವ್ಯಾನಿಟಿಬಾಗ್  ಕಣ್ಮರೆಯಾಗಿದೆ. ಅದರಲ್ಲಿದ್ದ 25 ಗ್ರಾಂ ತೂಕದ ಸುಮಾರು 100000/-ರೂ ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು 500/-ರೂ ನಗದು ಹಣವನ್ನ ಪಾರಿವಾಳ ಮಾರಲು ಬಂದ ಹುಡುಗರು ಕದ್ದೊಯ್ದಿರುವ ಅನುಮಾನದ ಮೇರೆಗೆ ದೂರು ದಾಖಲಾಗಿದ್ದು, ಈ ಸಂಬಂಧ ಎಫ್​ಐಆರ್​ನಲ್ಲಿ ಆರೋಪಿಸಲಾಗಿದೆ. 


FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

Malenadutoday.com Social media