ಶಿವಮೊಗ್ಗದಲ್ಲಿ ಮತ್ತೊಂದು ಮೀಸಲಾತಿ ಹೋರಾಟ/ 2ಎ ಮೀಸಲಾತಿಗಾಗಿ ಕ್ಷತ್ರಿಯ ಮರಾಠರ ಆಗ್ರಹ

ಶಿವಮೊಗ್ಗ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪರಿಷತ್​ ಸದಸ್ಯರು ಪ್ರತಿಭಟನೆ ನಡೆಸಿ ತಮ್ಮ ಒತ್ತಾಯವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಸರ್ಕಾರಕ್ಕೆ ಸಲ್ಲಿಸಿದ್ರು.

ಶಿವಮೊಗ್ಗದಲ್ಲಿ ಮತ್ತೊಂದು ಮೀಸಲಾತಿ ಹೋರಾಟ/   2ಎ ಮೀಸಲಾತಿಗಾಗಿ ಕ್ಷತ್ರಿಯ ಮರಾಠರ ಆಗ್ರಹ

ಪ್ರವರ್ಗ 3(ಬಿ) ಇಂದ ಪ್ರವರ್ಗ 2(ಎ) ಗೆ ಕ್ಷತ್ರಿಯ ಮರಾಠ ಸಮುದಾಯವನ್ನು ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ರಾಜ್ಯ ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟಿದೆ. ಈ ಸಂಬಂಧ ಇವತ್ತು ಶಿವಮೊಗ್ಗ ನಗರದಲ್ಲಿರುವ  ಜಿಲ್ಲಾಧಿಕಾರಿಗಳ ಕಚೇರಿ ಎದುರು ಪರಿಷತ್​ ಸದಸ್ಯರು ಪ್ರತಿಭಟನೆ ನಡೆಸಿ ತಮ್ಮ ಒತ್ತಾಯವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಸರ್ಕಾರಕ್ಕೆ ಸಲ್ಲಿಸಿದ್ರು. 

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ರಾಜ್ಯದಲ್ಲಿ ಸುಮಾರು 40 ಲಕ್ಷ ಮರಾಠ ಜನಾಂಗದ್ದಾರೆ. ಆದರೆ ಈ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದೆ.  ಇನ್ನೂ ಮರಾಠ ಸಮುದಾಯದಲ್ಲಿ ಸುಮಾರು 33 ಪಂಗಡಗಳಿವೆ. ಆ ಪೈಕಿ 27 ಪಂಗಡಗಳನ್ನು ಈಗಾಗಲೆ ಪ್ರವರ್ಗ 2(ಎ)ಗೆ ಸೇರ್ಪಡೆಯಾಗಿದೆ.  ಆದರೆ,  ಕ್ಷತ್ರಿಯ ಮರಾಠ ಜನಾಂಗವನ್ನು ಸೇರಿಸಿಲ್ಲ. ಹೀಗಾಗಿ ಕ್ಷತ್ರಿಯ ಮರಾಠಾ ಜನಾಂಗದ ಸಮಸ್ಯೆಯನ್ನು ಬಗೆಹರಿಸಿ ಈ ಜನಾಂಗವನ್ನು 2(ಎ) ಪ್ರವರ್ಗಕ್ಕೆ  ಈಗಲಾದರೂ ಸೇರಿಸಬೇಕು ಎಂದ ಒತ್ತಾಯಿಸಿದ್ಧಾರೆ. 

 ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp