BREAKING NEWS / ಶಿವಮೊಗ್ಗದ ಆಲ್ಕೋಳ ಸಮೀಪ ಎರಡು ಗುಂಪುಗಳ ಮಾರಾಮಾರಿ! ಐವರಿಗೆ ಇರಿತ! ಮೆಗ್ಗಾನ್​ಗೆ ದಾಖಲು

Yesterday there was a fight between two groups near Alkola in Shimoga and the police have registered a case in this connectionಶಿವಮೊಗ್ಗದ ಆಲ್ಕೊಳ ಸಮೀಪ ನಿನ್ನೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

BREAKING NEWS / ಶಿವಮೊಗ್ಗದ ಆಲ್ಕೋಳ ಸಮೀಪ  ಎರಡು ಗುಂಪುಗಳ ಮಾರಾಮಾರಿ! ಐವರಿಗೆ ಇರಿತ! ಮೆಗ್ಗಾನ್​ಗೆ ದಾಖಲು

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್​ ಸಮೀಪ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. 

ಆಲ್ಕೋಳ ಸಮೀಪ ಇರುವ ವಿಶಾಲ್​ ಮಾರ್ಟ್ ಬಳಿಯಲ್ಲಿ ಎಲ್​ಐಸಿ ಆಫೀಸ್​  ಹಿಂಭಾಗದಲ್ಲಿ ಎರಡು ಗುಂಪುಗಳು ಪರಸ್ಪರ ಮಾರಾಮಾರಿಯಾಗಿದೆ. ಘಟನೆಯಲ್ಲಿ ಐದು ಮಂದಿಗೆ ಚಾಕುವಿಗೆ ಇರಿಯಲಾಗಿದೆ ಒಬ್ಬರ ಸೀರಿಯಸ್ ಇದ್ದಾರೆ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದೆ. 

ಈ ಭಾಗದಲ್ಲಿರುವ ಪವನ್​ ಮತ್ತು ಕಿರಣ್ ಎಂಬಿಬ್ಬರು ಸ್ನೇಹಿತರಾಗಿದ್ದು, ಇವರ ನಡುವೆ ಕಳೆದ 2 ವರ್ಷಗಳಿಂದ ಸಣ್ಣಪುಟ್ಟ ವಿಚಾರಕ್ಕೆ ಬಿನ್ನಾಭಿಪ್ರಾಯಗಳಿದ್ದವು. ಅಲ್ಲದೆ ಇದೇ ಕಾರಣಕ್ಕೆ ಕಿರಿಕ್ ಆಗುತ್ತಿತ್ತು. ಈ ಮಧ್ಯೆ ನಿನ್ನೆ ರಾತ್ರಿ ನೇತಾಜಿ ಸರ್ಕಲ್​ನಲ್ಲಿ ಇದೇ ವಿಚಾರಕ್ಕೆ ಕಿರಿಕ್ ಆಗಿದೆ.

ನೇತಾಜಿ ಸರ್ಕಲ್​ನಲ್ಲಿ ನಡೆದ ಜಗಳದ ಬೆನ್ನಲ್ಲಿಯೇ ಪವನ್ ಆ್ಯಂಡ್ ಟೀಂ ವಿಶಾಲ್ ಮಾರ್ಟ್​ ಸಮೀಪವಿದ್ದ ಕಿರಣ್​ ಆ್ಯಂಡ್ ಗ್ಯಾಂಗ್ ಮೇಲೆ ಅಟ್ಯಾಕ್​ ಮಾಡಿದೆ. ಈ ವೇಳೆ ಕಿರಣ್​ ಗ್ಯಾಂಗ್​ನ ಐವರಿಗೆ ಗಾಯಗಳಾಗಿದೆ. ಐವರಿಗೆ ಇರಿತವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. 

ಇನ್ನೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪವನ್ ಹಾಗೂ ಆತನ ಗ್ಯಾಂಗ್​ನಲ್ಲಿದ್ದು ದಾಳಿ ಮಾಡಿದ ಆರೋಪಿಗಳಿಗಾಗಿ ಹುಡುಕಾಟ ನಡೆಸ್ತಿದ್ದಾರೆ.  


ಇನ್ನಷ್ಟು ಸುದ್ದಿಗಳು