ಅರಶಿನ ಗುಂಡಿ, ಹಿಡ್ಲುಮನೆ, ಬರ್ಕಳ ಸೇರಿ ಹಲವು ಜಲಪಾತಗಳ ಪ್ರವೇಶಕ್ಕೆ ನಿರ್ಬಂಧ | ನರಸಿಂಹಗಡಕ್ಕೂ ಇಲ್ಲ ಎಂಟ್ರಿ

Forest Department has restricted access to waterfalls, including Hidlumane Falls, Kudlu, Barkala, Hidlumane, Vanakabbi, and Bandaj

ಅರಶಿನ ಗುಂಡಿ, ಹಿಡ್ಲುಮನೆ, ಬರ್ಕಳ ಸೇರಿ ಹಲವು ಜಲಪಾತಗಳ ಪ್ರವೇಶಕ್ಕೆ ನಿರ್ಬಂಧ |  ನರಸಿಂಹಗಡಕ್ಕೂ ಇಲ್ಲ ಎಂಟ್ರಿ
Hidlumane Falls, Kudlu, Barkala, Hidlumane, Vanakabbi,

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಪ್ರವಾಸಿ ತಾಣಗಳಿಗೆ ದೌಡಾಯಿಸುತ್ತಿದ್ದಾರೆ. ಜೊತೆಯಲ್ಲಿ ಮಳೆಯ ಅಪಾಯಗಳು ಸಹ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜಲಪಾತದ ಸ್ಥಳಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗುತ್ತಿದೆ. 

ಈ ನಿಟ್ಟಿನಲ್ಲಿ ಪ್ರವಾಸಿಗರ ಸುರಕ್ಷಾತಾ ದೃಷ್ಟಿಯಿಂದ "ಹಿಡ್ಲು ಮನೆ ಫಾಲ್ಸ್ "ಸೇರಿದಂತೆ ವನ್ಯ ಜೀವಿ ಇಲಾಖೆಗೆ ಒಳಪಟ್ಟ ಎಲ್ಲಾ ಜಲಪಾತಗಳಿಗೆ ಪ್ರವೇಶ ನಿರ್ಬಂಧ ಹೇರಿ ಅರಣ್ಯ ಇಲಾಖೆ ಪ್ರಕಟಣೆ ನೀಡಿದೆ.  ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕುದುರೆಮುಖ ವನ್ಯಜೀವಿ ವಿಭಾಗದಿಂದ ಈ ಪ್ರಕಟಣೆ ನೀಡಲಾಗಿದ್ದು,  ವಲಯ ಅರಣ್ಯ ಅಧಿಕಾರಿ, ವನ್ಯಜೀವಿ ವಲಯ, ಬೆಳ್ತಂಗಡಿ, ಕುದುರೆಮುಖ, ಸೋಮೇಶ್ವರ, ಆಗುಂಬೆ. ಸಿದ್ದಾಪುರ, ಕೊಲ್ಲೂರು ಕೆರೆಕಟ್ಟೆ ಮತ್ತು ಕಾರ್ಕಳ ವ್ಯಾಪ್ತಿಗೆ ಪ್ರಕಟಣೆ ಅನ್ವಯಿಸಲಿದೆ. 

ಇನ್ನೂ ಪ್ರಕಟಣೆಯ ವಿವರ ಗಮನಿಸುವುದಾದರೆ, ಪ್ರಸ್ತುತ ಸಾಲಿನ ಮುಂಗಾರು ಮಳೆ ತೀವ್ರಗೊಂಡಿದ್ದು ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದ್ದು ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಜಲಪಾತಗಳಿಗೆ ಹಾಗೂ ನರಸಿಂಹಗಡ (ಗಡಾಯಿಕಲ್ಲು) ಇಲ್ಲಿಗೆ ಪ್ರವೇಶ ನಿರ್ಬಂಧಿಸುವುದು ಅವಶ್ಯಕವಾಗಿರುತ್ತದೆ.

ಆದುದರಿಂದ ನಿಮ್ಮ ವಲಯಗಳ ಅರಣ್ಯ ಪ್ರದೇಶಗಳಲ್ಲಿ ಬರುವ ಎಲ್ಲಾ ಜಲಪಾತಗಳು (ಅರಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಡುಮನೆ, ವನಕಬ್ಬಿ, ಬಂಡಾಜೆ ಇತ್ಯಾದಿ), ನರಸಿಂಹಗಡ-ಗಡಾಯಿಕಲ್ಲು, ಪ್ರದೇಶಗಳಿಗೆ ಪ್ರವೇಶ ನಿರ್ಬಂದಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

Forest Department has restricted access to waterfalls, including Hidlumane Falls, under the jurisdiction of the Wildlife Department. This restriction applies to all waterfalls within the Kudremukh Wildlife Division, including Belthangady, Kudremukh, Someshwara, Agumbe, Siddapura, Kollur, and Karkala. The decision to temporarily ban entry to waterfalls and Narasimhagad (Gadayikallu) is based on the increased risk to tourists during the monsoon season. The ban includes popular waterfalls like Arashinagundi, Kudlu, Barkala, Hidlumane, Vanakabbi, and Bandaje.