ಮಳೆ, ಗಾಳಿಗೆ ಶಿವಮೊಗ್ಗ-ತಿರ್ಥಹಳ್ಳಿ ಹೆದ್ದಾರಿ ಮೇಲೆಯೇ ಉರುಳಿ ಬಿದ್ದ ಮರ!

Malenadu Today

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS

ಶಿವಮೊಗ್ಗ  ಜಿಲ್ಲೆ ಇವತ್ತು ಮಲೆನಾಡಿನ ಮಳೆಯನ್ನು ಸುಮಾರಾಗಿ ಕಾಣುತ್ತಿದೆ. ಈ ಮಧ್ಯೆ ಮಳೆ ,ಗಾಳಿಗೆ ಮರವೊಂದು ಬಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿರುವ  ಬಗ್ಗೆ ಮಂಡಗದ್ದೆಯಿಂದ ವರದಿಯಾಗಿದೆ. 

ಇಲ್ಲಿನ ತೀರ್ಥಹಳ್ಳಿ ಹೆದ್ದಾರಿಯಲ್ಲಿ ಮಂಡಗದ್ದೆ ಹಾಗು ಮುಡುಬ ನಡುವಿನ ನಿಡಗಳಲೇ ಸಮೀಪ ಇಂದು ಮಧ್ಯಾಹ್ನ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆಯೆ ಉರುಳಿ ಬಿದ್ದಿದೆ. ಪರಿಣಾಮ ರಸ್ತೆ ಸಂಚಾರ ಕೆಲ ಕಾಲ ಬಂದ್ ಆಗಿದೆ. ಅಲ್ಲದೆ ಮರ ಉರುಳಿ ಬಿದಿದ್ದರಿಂದ, ಅದರ ಜೊತೆಯಲ್ಲಿಯೇ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ಅಲ್ಲದೆ ಕರೆಂಟ್ ವಯರ್​ಗಳು ಕಟ್ ಆಗಿವೆ. ಪರಿಣಾಮ ಈ ಭಾಗದ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಿದೆ. 

ತೀರ್ಥಹಳ್ಳಿ ಹೆದ್ದಾರಿಯಲ್ಲಿ ಹಳೆಮರಗಳಿದ್ದು, ಮೆಸ್ಕಾಂ ಈ ಬಗ್ಗೆ  ಗಮನಹರಿಸಿಲ್ಲ , ಹೀಗಾಗಿಯೇ ಮಳೆ ಜೋರಾಗುತ್ತಲೇ ಮರಗಳು ಉರುಳಿ ಬೀಳುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.  

ಶಿವಮೊಗ್ಗ ನಗರದ ಐಬಿ ಸರ್ಕಲ್​ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್​ಗೆ ಕಾರು ಡಿಕ್ಕಿ

ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?

 

 

Share This Article