ಲಯನ್ ಸಫಾರಿ ಬಳಿ ಅಪಘಾತ | ಚಿತ್ರದುರ್ಗ ಮೂವರು ದುರ್ಮರಣ | ಮಹಿಳೆ ಸ್ಥಿತಿ ಗಂಭೀರ | ನಾಲ್ವರು ವಿದೇಶಿಗರಿಗೆ ಆಘಾತ | ನಡೆದಿದ್ದೇನು?
head-on collision between two cars in Muttinakoppa, Shivamogga

SHIVAMOGGA | MALENADUTODAY NEWS | Jul 6, 2024 ಮಲೆನಾಡು ಟುಡೆ
ಶಿವಮೊಗ್ಗದ ಲಯನ್ ಸಫಾರಿ ಬಳಿ ಮುತ್ತಿನಕೊಪ್ಪದಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬೆಳವನ್ನೂರು ಮೂಲದವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೃತರನ್ನ ಸಿದ್ದಣ್ಣ, ಚಂದ್ರು ಹಾಗೂ ಇಮಾಮ್ ಸಾಬ್ ಎಂದು ಗುರುತಿಸಲಾಗಿದೆ.
ಇವರೆಲ್ಲಾ ಆಯನೂರು ಕಡೆಯಿಂದ ಶಿವಮೊಗ್ಗಕ್ಕೆ ಬಂದು ಚಳ್ಳಕೆರೆಗೆ ಹೋಗುತ್ತಿದ್ದವರು. ಅಷ್ಟರಲ್ಲಿ ಮುತ್ತಿನಕೊಪ್ಪದ ಸಮೀಪ ಇನ್ನೋವಾಕ್ಕೆ ಡಿಕ್ಕಿಯಾಗಿ ಅಪಘಾತವಾಗಿದೆ. ಇನ್ನೂ ಘಟನೆಯಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಇನ್ನೋವಾ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ವಿದೇಶಿಯರಿದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತವಾಗುತ್ತಲೇ ಏರ್ ಬ್ಯಾಗ್ ಓಪನ್ ಆದ್ದರಿಂದ ವಿದೇಶಿಯರಿಗೆ ಯಾವುದೇ ಅಪಾಯವಾಗಲಿಲ್ಲ ಎನ್ನಲಾಗಿದೆ. ಇವೆರಲ್ಲಾ ಒಂದೆ ಕುಟುಂಬದವರಾಗಿದ್ದು ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದರು. ಜೋಗ ನೋಡುವ ಸಲುವಾಗಿ ಇವತ್ತು ಹೊರಟಿದ್ದರು ಎಂದು ತಿಳಿದುಬಂದಿದೆ. ಇನ್ನೂ ಇನ್ನೋವಾ ಕಾರಿನ ಡ್ರೈವರ್ ಗಿರೀಶ್ ಕೂಡ ಗಾಯಗೊಂಡಿದ್ದು ಅವರಿಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಂಸಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅತಿವೇದಿಂದ ಈ ಘಟನೆ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದರು. ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಕಾರಿನಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಇನ್ನೋವಾ ಕಾರಿನಲ್ಲಿದ್ದ ಮಕ್ಕಳು ಭಯ ಬಿದ್ದು ಸ್ಥಳದಲ್ಲಿ ಛೀರುತ್ತಿದ್ದಾರೆ.
A head-on collision between two cars in Muttinakoppa, Shivamogga