ದೊಡ್ಡ ಸುದ್ದಿ | ಆಗುಂಬೆ ಘಾಟಿ ನಾಲ್ಕನೆ ತಿರುವಿನಲ್ಲಿ ಒಮಿನಿ ಮೇಲೆ ಉರುಳಿದ ಮರ

large tree fell on a car near hear pin curve in agumbe Thirthahalli taluk of Shivamogga district

ದೊಡ್ಡ ಸುದ್ದಿ | ಆಗುಂಬೆ ಘಾಟಿ ನಾಲ್ಕನೆ ತಿರುವಿನಲ್ಲಿ ಒಮಿನಿ ಮೇಲೆ ಉರುಳಿದ ಮರ
agumbe ,Thirthahalli taluk, Shivamogga district

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿ ಹಿಮ್ಮುಡಿ ತಿರುವಿನಲ್ಲಿ ಬೃಹತ್‌ ಮರವೊಂದು ಬಿದ್ದಿದೆ. ಮರವೂ ಒಮಿನಿ ವಾಹನದ ಮೇಲೆ ಬಿದ್ದ ಪರಿಣಾಮವಾಗಿ ಕಾರಿನಲ್ಲಿದ್ದವರಿಗೆ ಗಾಯಗಳಾದ ಬಗ್ಗೆ ವರದಿಯಾಗಿದೆ. ಅದೃಷ್ಟಕ್ಕೆ ಯಾರಿಗೂ ಪ್ರಾಣಾಪಾಯವಾಗಿಲ್ಲ

ಆಗುಂಬೆ ಘಾಟಿಯ ನಾಲ್ಕನೆ ತಿರುವಿನಲ್ಲಿ ಘಟನೆ ನಡೆದಿದೆ. ಎತ್ತರದ ಮರವೊಂದು ರಸ್ತೆಗೆ ಅಡ್ಡಲಾಗಿಯೇ ಬಿದ್ದಿದೆ. ಅದರ ಜೊತೆಗೆ ಅಕ್ಕಪಕ್ಕದ ಮರಗಳ ಬೃಹತ್‌ ರೆಂಬೆಗಳು ನೆಲಕ್ಕುರುಳಿವೆ. ಹೀಗಾಗಿ ರಸ್ತೆ ಸಂಚಾರ ಬಂದ್‌ ಆಗಿದೆ. ಈ ಮಾರ್ಗದಲ್ಲಿ ಟ್ರಾಫಿಕ್‌ ಸಹ ಜಾಮ್‌ ಆಗಿದೆ. ಇನ್ನೂ ಸ್ಥಳೀಯ ಆಡಳಿತ ವ್ಯವಸ್ಥೆ ಮರ ತೆರವುಗೊಳಿಸಲು ಮುಂದಾಗಿದೆ

A large tree fell on a car near hear pin curve in agumbe Thirthahalli taluk of Shivamogga district.