ದಾರಿಯಲ್ಲಿ ಒಬ್ಬೊಬ್ಬರೇ ಓಡಾಡುವ ಮಹಿಳೆಯರ ಜೊತೆ ಅಸಭ್ಯ ವರ್ತನೆ | ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಯುವಕ

A man was caught and beaten by locals in Chikkamagaluru district for harassing women

ದಾರಿಯಲ್ಲಿ ಒಬ್ಬೊಬ್ಬರೇ ಓಡಾಡುವ ಮಹಿಳೆಯರ ಜೊತೆ ಅಸಭ್ಯ ವರ್ತನೆ | ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಯುವಕ
in Chikkamagaluru district

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ದಾರಿಯಲ್ಲಿ ಒಬ್ಬೊಬ್ಬರಾಗಿ ಹೋಗುವ ಮಹಿಳೆಯರನ್ನ ಅಡ್ಡಗಟ್ಟಿ ಚುಡಾಯಿಸಿ ಅಸಭ್ಯವಾಗಿ ವರ್ತಿಸಿದ್ದ ಯುವಕನೊಬ್ಬನನ್ನ ಚಿಕ್ಕಮಗಳೂರು ಜಿಲ್ಲೆಯಲ್ಲಿ  ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಲ್ಲಿನ ವಸ್ತಾರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಆರೋಪಿಯೊಬ್ಬ ಚುಡಾಯಿಸುತ್ತಾ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಈ ಬಗ್ಗೆ ಹಲವರು ದೂರು ಹೇಳಿಕೊಂಡಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ಆತನಿಗಾಗಿ ಹುಡುಕಾಡಿದ್ದಾರೆ. ಅಷ್ಟರಲ್ಲಿ ಯುವಕ ತೋಟವೊಂದರಲ್ಲಿ ಅಡಗಿ ಕುಳಿತಿದ್ದ. ಆತನ ಇರುವಿಕೆ ತಿಳಿದ ಗ್ರಾಮಸ್ಥರು ಸುತ್ತುವರಿದು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.  A man was caught and beaten by locals in Chikkamagaluru district for harassing women.