ಮನೆ ಬಾಡಿಗೆಗೆ ಕೇಳಿ ₹4 ಲಕ್ಷ ವಂಚನೆ! ಫೋನ್​ನಲ್ಲಿ ಜಾಸ್ತಿ ದುಡ್ಡು ಟ್ರಾನ್ಸಫರ್ ಮಾಡ್ತೀರಿ ಎಂದು ₹17 ಲಕ್ಷ ಮೋಸ! ಜಸ್ಟ್ ಮೊಬೈಲ್​ನಲ್ಲಿಯೇ ಹೇಗೆ ಮಾಡ್ತಾರೆ ಗೊತ್ತಾ ವಂಚನೆ

Rs 4 lakh cheated by asking for house rent Cheated of Rs 17 lakh for transferring too much money on phone Just see how they cheat on your mobile phone

ಮನೆ ಬಾಡಿಗೆಗೆ ಕೇಳಿ ₹4 ಲಕ್ಷ ವಂಚನೆ! ಫೋನ್​ನಲ್ಲಿ ಜಾಸ್ತಿ ದುಡ್ಡು ಟ್ರಾನ್ಸಫರ್ ಮಾಡ್ತೀರಿ ಎಂದು ₹17 ಲಕ್ಷ ಮೋಸ! ಜಸ್ಟ್  ಮೊಬೈಲ್​ನಲ್ಲಿಯೇ ಹೇಗೆ ಮಾಡ್ತಾರೆ ಗೊತ್ತಾ ವಂಚನೆ

KARNATAKA NEWS/ ONLINE / Malenadu today/ May 18, 2023 SHIVAMOGGA NEWS 

ಈಗೀಗ ಆನ್​ಲೈನ್​ ವಂಚನೆ ಯಾವ ರೀತಿಯಲ್ಲಿ ಮಾಡುತ್ತಾರೆ ಎಂದು ಹೇಳಲು ಆಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ದಾವಣಗೆರೆ ಜಿಲ್ಲೆಯಲ್ಲಿ ಮನೆ ಬಾಡಿಗೆಗೆ ಇದೆ ಎಂದು ಹಾಕಿದ್ದ ಜಾಹಿರಾತನ್ನ ನೋಡಿ ವ್ಯಕ್ತಿಯೊಬ್ಬ, ಮನೆ ಮಾಲೀಕರು ನಾಲ್ಕುವರೆ ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ. 

ಇನ್ನೊಂದೆಡೆ ವ್ಯಕ್ತಿಯೊಬ್ಬರ ಮೊಬೈಲ್​ ಮಾಡಿದ ವಂಚಕನೊಬ್ಬ ತಾನೊಬ್ಬ ಇನ್​ಕಮ್​ ಟ್ಯಾಕ್ಸ್​ (Income tax)  ಇಲಾಖೆಯವರು ಅಂತ ಪರಿಚಯಿಸಿಕೊಂಡು, ನಿಮ್ಮ ಅಕೌಂಟ್​ನಲ್ಲಿ  ಜಾಸ್ತಿ ಟ್ರಾಂಜಾಕ್ಷನ್ ಮಾಡ್ತಿದ್ದೀರಿ, ಹಾಗಾಗಿ ಸೆಕ್ಯುರಿಟಿ ವೆರಿಫಿಕೇಶನ್ ಮಾಡಬೇಕು ಎಂದು ಹೇಳಿ  17  ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಪೀಕಿದ್ದಾನೆ. 

ತನ್ನನ್ನ ಅಧಿಕಾರಿ ಎಂದು ಬಿಂಬಿಸಿಕೊಂಡ ಆತ, ಸೆಕ್ಯುರಿಟಿ ವೆರಿಫಿಕೇಶ್​ನ ಹೆಸರಿನಲ್ಲಿ ಕಂಪನಿ ಐಡಿ , ಅಕೌಂಟ್ ಇನ್​ಫಾರ್ಮೇಶನ್​ ಪಡೆದಿದ್ಧಾನೆ. ಅಲ್ಲದೆ ವೆರಿಪಿಕೇಶ್​ಗೆ ಅಂತಾ ಹಣ ಕಟ್ಟುವಂತೆ ತಿಳಿಸಿದ್ಧಾನೆ. ಹೀಗೆ ಹಂತ ಹಂತವಾಗಿ ಒಂದು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಪೀಕಿದ್ದಾನೆ. ತದನಂತರವೂ ಕರೆ ಮಾಡಿ, ಮತ್ತಷ್ಟು ಹಣ ಹಾಕುವಂತೆ ಹೇಳಿದ್ಧಾನೆ. ಹೀಗೆ ಒಟ್ಟು 17 ಲಕ್ಷ ರೂಪಾಯಿಯನ್ನು ಪಡೆದ ಆತ ಮತ್ತೆ ಹಣ ಕೇಳಿದಾಗ ಆತನ ಬಗ್ಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.  

ಯಾವುದೇ ಕಂಪನಿಗಳಾಗಲಿ ಅಥವಾ ವ್ಯಕ್ತಿಗಳೇ ಆಗಲಿ ಖಾಸಗಿ ಮಾಹಿತಿಗಳನ್ನು ನೀಡಲೇಬೇಡಿ. ಈ ಬಗ್ಗೆ ಪೊಲೀಸ್ ಇಲಾಖೇ ಪದೇ ಪದೇ ಜಾಗೃತಿಯನ್ನು ಮಾಡುತ್ತಲೇ ಬಂದಿದೆ.ಯಾವುದೇ ಅಪರಿಚಿತ ಕರೆಗಳು ಬಂದಾಗಲೂ ಅದನ್ನೊಮ್ಮೆ ಅನುಮಾನದಿಂದಲೇ ನೋಡಿ ಆನಂತರ ಪ್ರಶ್ನಿಸಿ ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಿ. ಎಂತಹ ನಂಬಿಕೆಯ ಮಾತನ್ನಾಡಿದರು ಅಕೌಂಟ್ ಮಾಹಿತಿಗಳನ್ನು , ಓಟಿಪಿಗಳನ್ನ ನೀಡಲೇ ಬೇಡಿ. ಹಾಗೆ ಮಾಡಿದಲ್ಲಿ ಮಾತ್ರ ಆನ್​ಲೈನ್ ವಂಚನೆಗಳಿಂದ ಮುಕ್ತರಾಗಬಹುದು. 




ಕಾಳಿಂಗಕ್ಕೆ ಮುತ್ತುಕೊಟ್ಟ ಯುವಕ! ವೈರಲ್ ಆಗ್ತಿದೆ ವಿಡಿಯೋ

#Viralvideo/ ಕಾಳಿಂಗ ಸರ್ಪವೊಂದಕ್ಕೆ ಪುಣ್ಯಾತ್ಮನೊಬ್ಬ ಮುತ್ತು ಕೊಡುತ್ತಿರುವ ವಿಡಿಯೋವೊಂದು ಸಖತ್ ವೈರಲ್​ ಆಗುತ್ತಿದೆ nickthewrangler ಹೆಸರಿನ ಇನ್​ಸ್ಟಾಗ್ರಾಮ್ ಅಕೌಂಟ್​ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ವಿಶೇಷ ಕುತೂಹಲ ಮೂಡಿಸುತ್ತಿದೆ. 

Nickthewrangler  ಹಂಚಿಕೊಂಡಿರುವ ವಿಡಿಯೋದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿರುವಾತ, ಮಾತನಾಡುತ್ತಲೇ ಅದಕ್ಕೆ ಮುತ್ತಿಕ್ಕುತ್ತಾನೆ. ಹಾವು ಅದರ ಅರಿವಲ್ಲದಂತೆ ಇರುತ್ತದೆ. ಈ ದೃಶ್ಯವನ್ನು ಕ್ಯಾಮರಾ ಮ್ಯಾನ್ ಕೂಡ ಸುಂದರವಾಗಿ ಚಿತ್ರಿಸಿದ್ದು, ವಿಡಿಯೋ  ನಾಲ್ಕು ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಇದನ್ನು ಸಹ ಓದಿ: charmadi ghat/ ಘಾಟಿಯಲ್ಲಿ ದುತ್ತೆಂದು ಎದುರಾದ ಒಂಟಿ ಸಲಗ! ಸರ್ಕಾರಿ ಬಸ್​ ಸ್ವಲ್ಪದರಲ್ಲಿಯೇ ಪಾರು!

Public Nuisance / ತುಂಗಾ ನಗರ ಪೊಲೀಸರಿಂದ ಮುಂದುವರಿದ ಸ್ಪೆಷಲ್ ಕಾರ್ಯಾಚರಣೆ! 11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಕೇಸ್

 ಶಿವಮೊಗ್ಗ/ ತುಂಗಾನಗರ ಪೊಲೀಸ ಸ್ಟೇಷನ್  ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ Area Domination    ವಿಶೇಷ ಗಸ್ತನ್ನು ಮುಂದುವರಿಸಿದ್ದಾರೆ. 

ನಿನ್ನೆಯು ಸಹ ( ದಿನಾಂಕ: 17-05-2023)  ತುಂಗಾನಗರ ಪೊಲೀಸ್ ಠಾಣೆ ಪಿಎಸ್​ಐ ಕುಮಾರ್​  ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಸೂಳೆಬೈಲು, ಮದಾರಿಪಾಳ್ಯ, ಎಂಆರ್. ಎಸ್ ವೃತ್ತ, ಪ್ರಿಯಾಂಕಾ ಲೇಔಟ್ ಮತ್ತು ವಡ್ಡಿನ ಕೊಪ್ಪ ಗ್ರಾಮದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ನಡೆಸಿದೆ. 

11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಪಿಟ್ಟಿ ಕೇಸ್​

ಇನ್ನೂ ಈ ವೇಳೆ ವಿವಿಧ ಎರಿಯಾಗಳಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ 11 ಜನರನ್ನು  ಪೊಲೀಸ್ ಠಾಣೆಗೆ ಕರೆತಂದು ಅವರುಗಳ ಪೂರ್ವಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ 08 ಲಘು ಪ್ರಕರಣಗಳನ್ನು ದಾಖಲಿಸಿದ್ಧಾರೆ.