20 ಅಡಿ ಆಳಕ್ಕೆ ಬಿದ್ದ ಕಾರು, 9 ಮಂದಿಗೆ ಗಾಯ/ ಹುಲಿಕಲ್​ನಲ್ಲಿ ಸಿಮೆಂಟ್ ಲಾರಿ ಪಲ್ಟಿ!/ ಫೋಟೋ, ವಿಡಿಯೋ ಕಳಿಸಿ ಎಂದ ಎಸ್​ಪಿ/ ಅಡಿಕೆ ಕದ್ದ ಗಂಡ-ಹೆಂಡ್ತಿ/ TODAY @NEWS

A brief account of the accidents, crimes, events of the day in Shivamogga and Chikkamagaluru districtsಶಿವಮೊಗ್ಗ , ಚಿಕ್ಕಮಗಳೂರು ಜಿಲ್ಲೆಯ ಅಪಘಾತ, ಅಪರಾಧ, ದಿನದ ಘಟನೆಗಳ ಸಂಕ್ಷಿಪ್ತ ವಿವರ

20  ಅಡಿ ಆಳಕ್ಕೆ ಬಿದ್ದ ಕಾರು, 9 ಮಂದಿಗೆ ಗಾಯ/ ಹುಲಿಕಲ್​ನಲ್ಲಿ ಸಿಮೆಂಟ್ ಲಾರಿ ಪಲ್ಟಿ!/ ಫೋಟೋ, ವಿಡಿಯೋ ಕಳಿಸಿ ಎಂದ ಎಸ್​ಪಿ/ ಅಡಿಕೆ ಕದ್ದ ಗಂಡ-ಹೆಂಡ್ತಿ/ TODAY @NEWS

KARNATAKA NEWS/ ONLINE / Malenadu today/ Jul 31, 2023 SHIVAMOGGA NEWS’

20 ಅಡಿ ಆಳಕ್ಕೆ ಬಿದ್ದ ಕಾರು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕಲ್ಮಕ್ಕಿ ಸಮೀಪ ಇನ್ನೋವಾ ಕಾರೊಂದು (Innova Car) ಸುಮಾರು 20 ಅಡಿ ಆಳಕ್ಕೆ ಉರುಳಿದ್ದು, ಮನೆಯ ಮುಂಭಾಗ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ತಿರುವಿನಲ್ಲಿ ತಗ್ಗಿಗೆ ಉರುಳಿ, ತಳಭಾಗದಲ್ಲಿದ್ದ ಮನೆಯ ಮುಂಭಾಗದಲ್ಲಿ ಬಿದ್ದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲಾ  ಕೋಲಾರ ಜಿಲ್ಲೆಯಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ (Horanadu Annapoorneshwari Temple) ಹೊರಟಿದ್ದರು.  

ಚೌಡಿಕಲ್ಲು ಅಂದುಕೊಂಡಿದ್ದ ಕಲ್ಲಿನಲ್ಲಿತ್ತು ಇತಿಹಾಸ

ಚೌಡಿಕಲ್ಲು ಎಂದು ಕೊಂಡಿದ್ದ ಕಲ್ಲಿನಲ್ಲಿ ಇತಿಹಾಸದ ಕೆತ್ತನೆಗಳು ಕಾಣಸಿಕ್ಕ, ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಲ್ಲುಇನ ಕೃಷಿಕ ವಿಶ್ವನಾಥ ಅವರಿಗೆ ಸೇರಿದ್ದ ಜಮೀನಿನಲ್ಲಿ  ವಿಜಯನಗರ ಕಾಲದ ಅಪೂರ್ವ ದಾನ ಶಾಸನ ಪತ್ತೆಯಾಗಿದೆ. ಗ್ರಾಮಸ್ಥರು ಚೌಡಿ ಕಲ್ಲು ಎಂದು ತಿಳಿದು ಈ ಶಾಸನಕ್ಕೆ ಪೂಜೆ ಸಲ್ಲಿಸುತ್ತಿದ್ದರು.14, 15ನೇ ಶತಮಾನದ ಶಾಸನ ಇದಾಗಿದ್ದು 47 ಸಾಲುಗಳ ಅಕ್ಷರಗಳು ಇಲ್ಲಿ ಕಾಣಬಹುದು 

ವಿಷ ಸೇವಿಸಿ ಆತ್ಮಹತ್ಯೆ!

ಸಾಗರ ತಾಲೂಕಿನ  ಬಲಿಕೇವಿ ಗ್ರಾಮದ ನಿವಾಸಿ ಶರತ್(26) ಎಂಬವರು  ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.  ಕೂಲಿ ಕೆಲಸ ಮಾಡಿಕೊಂಡಿದ್ದ ಶರತ್  ಇತ್ತೀಚೆಗೆ ಗಲಾಟೆಯೊಂದರ ಕಾರಣಕ್ಕೆ ಪೊಲೀಸರು ವಿಚಾರಣೆಗೆ ಬರಲು ತಿಳಿಸಿದ್ದರು. ಬಳಿಕ ಶರತ್​ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಸಾಗರ  ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.  

ವಿಡಿಯೋ ಕಳಿಸಿ ಎಂದ ಎಸ್​ಪಿ ಮಿಥುನ್ ಕುಮಾರ್

ಶಿವಮೊಗ್ಗ ನಗರದಲ್ಲಿ ನಡೆದ ಭಾವಸಾರ ವಿಜನ್​ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ಎಸ್​ ಪಿ ಮಿಥುನ್ ಕುಮಾರ್  ಸಾರ್ವಜನಿಕರು, ತಮ್ಮ ವ್ಯಾಪ್ತಿಯಲ್ಲಿ ಸಮಾಜಕ್ಕೆ ತೊಂದರೆಯಾಗುವಂತಹ ಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ತೊಂದರೆಯುಂಟಾಗುವ ಘಟನೆಗಳ  ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿದರೆ, ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಅಡಿಕೆ ಕದ್ದ ದಂಪತಿ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕೆಲಸಕ್ಕಿದ್ದ ದಂಪತಿ, ಮಾಲೀಕನ ಮನೆಯ ಶೋಕೇಸ್​ನಲ್ಲಿದ್ದ 23500 ದುಡ್ಡು ಹಾಗೂ ಕೊಟ್ಟಿಗೆಯಲ್ಲಿದ್ದ 35 ಕೆಜಿ ಅಡಿಕೆ ಕದ್ದು ಪರಾರಿಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಕಳೆದ ಜುಲೈ 11 ರಂದು ನಡೆದಿದ್ದ ಘಟನೆ ಬಗ್ಗೆ ತಡವಾಗಿ ವರದಿಯಾಗಿದೆ. ನ್ಯಾಮತಿ ಮೂಲದ ಇಬ್ಬರು ಹಣ ಹಾಗೂ ಅಡಿಕೆಯೊಂದಿಗೆ ಪರಾರಿಯಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ.  

ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಪಲ್ಟಿ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಲಿಕಲ್‌ ಬಳಿಯಲ್ಲಿ ಸಿಮೆಂಟ್ ಲಾರಿಯೊಂದು ಪಲ್ಟಿಯಾಗಿದೆ. ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದ್ದು ಚಾಲಕ ಶಂಕರಪ್ಪಗೆ ಗಾಯಗೊಂಡಿದ್ಧಾರೆ. ಅವರಿಗೆ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 12 ಚಕ್ರದ ಲಾರಿಯಲ್ಲಿ ಸಿಮೆಂಟ್‌ ಸಾಗಿಸಲಾಗುತ್ತಿತ್ತು. ಬಳ್ಳಾರಿಯಿಂದ ಮಂಗಳೂರಿಗೆ ಲಾರಿ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.


ಅರಶಿನ ಗುಂಡಿ ಫಾಲ್ಸ್​ನಲ್ಲಿ ಶರತ್ ಸಾವು! ನೊಂದ ಕುಟುಂಬಸ್ಥರು ಸಂಸದ ಬಿ.ವೈ.ರಾಘವೇಂದ್ರರಿಗೆ ನೀಡಿದ್ರು ಒಂದು ಮನವಿ!

ಮಲ್ನಾಡ್​ನಲ್ಲಿ ಸಿಗದ ನೆಟ್​ವರ್ಕ್​! ಅಧಿಕಾರಿಗಳಿಗೆ ದಿಗ್ಬಂಧನ! ಪರಿಹಾರ ಹುಡುಕಲು ಸಂಸದರ ಮೀಟಿಂಗ್!

ಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್​ರ ಮೃತದೇಹ ಪತ್ತೆ!

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್​ ಆ್ಯಂಡ್​ ರನ್​ ಯುವಕ ಬಲಿ! ಏನಿದು ಘಟನೆ?

SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

 

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​