KARNATAKA NEWS/ ONLINE / Malenadu today/ Jul 29, 2023 SHIVAMOGGA NEWS
ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2020 – 23ನೇ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪಾರ್ವತಿ ಸಲೇರಾ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ಧಾರೆ. ಅಲ್ಲದೆ ಆರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇದೇ ವೇಳೆ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸ್ಮೃತಿ ಕೆ. ವಂತಕರ್ ರಾಜ್ಯಕ್ಕೆ 9ನೇ ರಾಂಕ್ ಪಡೆದಿದ್ದಾರೆ.
VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್ ಕ್ಯಾಂಟಿನ್ ಮೆಣಸಿನ ಕಾಯಿ ಬೋಂಡಾ! ವೈರಲ್ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!
ಸಾಗರ- ಹೊಸನಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು (MLA Gopalakrishna Belur ) ರಿಪ್ಪನ್ ಪೇಟೆಗೆ ಬಂದಿದ್ದ ವೇಳೆ ಬೋಂಡಾ ಹೇಗೆ ಮಾಡಿದರೆ ರುಚಿ ಜಾಸ್ತಿ ಎಂಬುದನ್ನ ವಿವರಿಸಿದ ವಿಡಿಯೋವೊಂದು ವೈರಲ್ ಆಗಿದೆ.
ನಡೆದಿದ್ದೇನು?
ರಿಪ್ಪನ್ ಪೇಟೆ ಪ್ರವಾಸದಲ್ಲಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ಮಳೆಯ ನಡುವೆ, ಅವರ ಅಭಿಮಾನಿಗಳ ಜೊತೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಬೃಂದಾವನ ಕ್ಯಾಂಟೀನ್ ಗೆ ತೆರಳಿದ್ದರು. ಅದೇ ಹೊತ್ತಿಗೆ ಕ್ಯಾಂಟೀನ್ ಮಾಲೀಕ ಸ್ವಾಮಿ ಬೋಂಡಾ ಮಾಡುತ್ತಿದ್ದರು. ಇದನ್ನು ಗಮನಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಈ ಮಳೆಗಾಲದಲ್ಲಿ ಇಂತಹ ಚುರುಮುರಿ ತಿಂಡಿ ಇದ್ದರೆ ಅದರ ಗಮತ್ತೆ ಬೇರೆ ಎಂದರು. ಅಲ್ಲದೆ ಮೆಣಸಿನಕಾಯಿ ದಪ್ಪ ಇರಬೇಕು, ಅದನ್ನು ಕತ್ತರಿಸಿ ಉಪ್ಪಿನಲ್ಲಿಟ್ಟು, ನಂತರ ಕಡ್ಲೆಹಿಟ್ಟಿನೊಂದಿಗೆ ಬೆರೆಸಿ, ಎಣ್ಣೆ ಬಾಣಲಿಗೆ ಹಾಕಿ ಕರಿಯಬೇಕು. ಹೀಗೆ ಬೋಂಡಾ ಕರಿದರೆ ಅದರ ರುಚಿಯ ಮಜವೇ ಬೇರೆ ಎಂದು ಹೋಟೆಲ್ ಮಾಲೀಕರಿಗೆ ಹೇಳಿದ್ರು. ಸದ್ಯ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು, ಶಾಸಕರ ಬಾಯಿರುಚಿ ಬಗ್ಗೆ ಜನರು ಮಾತನಾಡಿಕೊಳ್ತಿದ್ದಾರೆ.
SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!
ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ
