SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

Another good news for shivamogga airport/Shivamogga-Bengaluru passengers! SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ಶಿವಮೊಗ್ಗ ವಿಮಾನ ನಿಲ್ದಾಣದಿಂಧ ವಿಮಾನ ಹಾರಾಟಕ್ಕೆ ಬುಕ್ಕಿಂಗ್ ಶುರುವಾಗಿದ್ದು, ಇದರ ಬೆನ್ನಲ್ಲೆ ಪ್ರಯಾಣಿಕರಿಗೆ ಇನ್ನೊಂದು ಸಿಹಿಸುದ್ದಿ ಸಿಕ್ಕಿದೆ. ಇಂಡಿಗೋ ವಿಮಾನದ ಪ್ರಯಾಣದ ದರ ತುಸು ಕಡಿಮೆಯಾಗಿದೆ. ಆ.31ರಿಂದ ಬೆಂಗಳೂರು – ಶಿವಮೊಗ್ಗ ಮತ್ತು ಶಿವಮೊಗ್ಗ – ಬೆಂಗಳೂರು ಆರಂಭವಾಗಲಿದ್ದು, ಈ ಸಂಬಂಧ ಟಿಕೆಟ್ ಬುಕ್ಕಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಕುತೂಹಲದ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿದ್ದು,  ಶಿವಮೊಗ್ಗದಿಂದ ಹೊರಡುವ ಮೊದಲ ವಿಮಾನದ ಪ್ರಯಾಣಕ್ಕಾಗಿ , ಈಗಾಗಲೇ ಅರ್ಧದಷ್ಟು ಟಿಕೆಟ್ ಬುಕ್ಕಿಂಗ್ ಆಗಿde. 

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ವಿಮಾನ  75 ಸೀಟುಗಳ ಪೈಕಿ 33 ಬುಕ್‌ ಆಗಿವೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಪ್ಲೈಟ್​ ನ  75 ಸೀಟುಗಳ ಪೈಕಿ 45 ಬುಕ್‌ ಆಗಿವೆ. ಸೆಪ್ಟೆಂಬರ್​ 1 ಕ್ಕೆ ಟಿಕೆಟ್ ಬುಕ್ ಮಾಡುವವರಿಗೆ ಇಂಡಿಗೋ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಪರಿಷ್ಕೃತ ದರ ಪ್ರಕಟಿಸಲಾಗಿದೆ.  ಬೆಂಗಳೂರಿನಿಂದ ಶಿವಮೊಗ್ಗಕ್ಕೆ 2,909 ರೂ. (SAVER), 3,230 (FLEXI PLUS), ಶಿವಮೊಗ್ಗದಿಂದ ಬೆಂಗಳೂರು 2,913 ರೂ. (SAVER), 3,306 ರೂ. (FLEXI PLUS) ಇದೆ.ಈ ದರಗಳಲ್ಲಿ ಮತ್ತಷ್ಟು ಬದಲಾವಣೆಯಾಗುವ ಸಾಧ್ಯತೆಗಳು ಇವೆ.  


ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ

ಶಿವಮೊಗ್ಗದಲ್ಲಿ ಸಂಚರಿಸುವ ಕೆಲವು ರೈಲುಗಳು ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ಇದೇ ಆಗಸ್ಟ್​ ಒಂದರಂದು ವ್ಯತ್ಯಯವಾಗಲಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 

ಕೆಲವು ರೈಲುಗಳು ರದ್ದು/ ಮಾರ್ಗ ಮಧ್ಯ ನಿಯಂತ್ರಣ

ಮಂಡ್ಯ ನಿಲ್ದಾಣ ಹತ್ತಿರದ ಲೆವೆಲ್ ಕ್ರಾಸ್‌ ಗೇಟ್‌ ನಂ-73ರ ಕೆಳ ಸೇತುವೆ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿಯ ವಿವರ. 

I. ರೈಲುಗಳ ರದ್ದು:

1. ರೈಲು ಸಂಖ್ಯೆ 06270 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮೈಸೂರು ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರಂದು ರದ್ದುಗೊಳಿಸಲಾಗುತ್ತಿದೆ.

2. ರೈಲು ಸಂಖ್ಯೆ 06268 ಮೈಸೂರು-ಅರಸಿಕೆರೆ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 31 ರಂದು ರದ್ದುಗೊಳಿಸಲಾಗುತ್ತಿದೆ. 

II. ಮಾರ್ಗ ಮಧ್ಯ ನಿಯಂತ್ರಣ:

1. ಜುಲೈ 30 ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16591 ಎಸ್‌.ಎಸ್‌.ಎಸ್‌ ಹುಬ್ಬಳ್ಳಿ-ಮೈಸೂರು ದೈನಂದಿನ ಹಂಪಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

2. ಜುಲೈ 30 ರಂದು ಮೈಲಾಡುತುರೈ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16231 ಮೈಲಾಡುತುರೈ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

3. ಜುಲೈ 30 ರಂದು ತಾಳಗುಪ್ಪಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 45 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

4. ಜುಲೈ 30 ರಂದು ತಿರುಪತಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16220 ತಿರುಪತಿ-ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

5. ಜುಲೈ 30 ರಂದು ಚೆನ್ನೈ ಸೆಂಟ್ರಲ್‌ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16021 ಡಾ ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 120 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

II. ರೈಲುಗಳು ಭಾಗಶಃ ರದ್ದು/ತಡವಾಗಿ ಪ್ರಾರಂಭ/ನಿಯಂತ್ರಣ

ತುಮಕೂರು-ಅರಸೀಕೆರೆ ಭಾಗದ ಹೆಗ್ಗೆರೆ ನಿಲ್ದಾಣದ ಪಾದಾಚಾರಿಗಳ ಮೇಲ್ಸೆತುವೆ ಕಾಮಗಾರಿ ಸಲುವಾಗಿ ಆಗಸ್ಟ್ 1 ರಂದು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ ಈ ಕೆಳಗಿನ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ವಿವರ. 

a) ರೈಲು ಭಾಗಶಃ ರದ್ದು:

1. ರೈಲು ಸಂಖ್ಯೆ 06514 ಶಿವಮೊಗ್ಗ ಟೌನ್-ತುಮಕೂರು ವಿಶೇಷ ಡೆಮು ರೈಲನ್ನು ತಿಪಟೂರು ಮತ್ತು ತುಮಕೂರು ನಿಲ್ದಾಣಗಳ ನಡುವೆ ಆಗಸ್ಟ್ 1 ರಂದು ಭಾಗಶಃ ರದ್ದುಗೊಳಿಸಲಾಗುತ್ತಿದೆ.

b) ರೈಲುಗಳು ತಡವಾಗಿ ಪ್ರಾರಂಭ:

1. ಆಗಸ್ಟ್ 1 ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06512 ತುಮಕೂರು-ಬಾನಸವಾಡಿ ಡೆಮು ವಿಶೇಷ ರೈಲು 120 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ. 

2. ಆಗಸ್ಟ್ 1 ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16567 ತುಮಕೂರು-ಶಿವಮೊಗ್ಗ ಟೌನ್ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲು 15 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ. 

ಸಿ) ರೈಲು ನಿಯಂತ್ರಣ:

1. ರೈಲು ಸಂಖ್ಯೆ 12089 ಕೆ.ಎಸ್.ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 1 ರಂದು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

BIG EXCLUSIVE / ಶರತ್​ಗಾಗಿ ಜ್ಯೋತಿರಾಜ್​ ಹುಡುಕಾಟ! ಡ್ರೋಣ್​ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!

ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ಪ್ಲೈಟ್! ವಿಮಾನ ಹಾರಿಸಲು ಶೀಘ್ರದಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಮಿಟ್​!? ಬುಕ್ಕಿಂಗ್​ಗೆ ಬಲೇ ಡಿಮ್ಯಾಂಡ್!