BIG EXCLUSIVE / ಶರತ್​ಗಾಗಿ ಜ್ಯೋತಿರಾಜ್​ ಹುಡುಕಾಟ! ಡ್ರೋಣ್​ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!

BIG EXCLUSIVE/ Jyothiraj is conducting a search operation at the spot for Sharath of Bhadravathi who fell into the Arasinagundi falls BIG EXCLUSIVE / ಅರಶಿನ ಗುಂಡಿ ಜಲಪಾತದಲ್ಲಿ ಬಿದ್ದ ಭದ್ರಾವತಿಯ ಶರತ್ ಗಾಗಿ ಜ್ಯೋತಿರಾಜ್​ ಸ್ಥಳದಲ್ಲಿ ಹುಡುಕಾಟದ ಕಾರ್ಯಾಚರಣೆ ನಡೆಸ್ತಿದ್ದಾರೆ

BIG EXCLUSIVE / ಶರತ್​ಗಾಗಿ ಜ್ಯೋತಿರಾಜ್​ ಹುಡುಕಾಟ! ಡ್ರೋಣ್​ ಬಳಕೆ!  ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!

KARNATAKA NEWS/ ONLINE / Malenadu today/ Jul 28, 2023 SHIVAMOGGA NEWS

ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತ (arashina gundi falls) ದಲ್ಲಿ ಕಾಲು ಜಾರಿ ಬಿದ್ದ ಶರತ್​ ರ ಪತ್ತೆಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ. ಆದರೆ ಹುಡುಕಾಟ ಫಲ ನೀಡುತ್ತಿಲ್ಲ.ಭದ್ರಾವತಿ ಮೂಲದ ಶರತ್ ಕುಮಾರ್  ಕಾಲು ಜಾರಿ ಬಿದ್ದ ವಿಷಯ ತಿಳಿಯುತ್ತಲೆ ಕೊಲ್ಲೂರು ಪೊಲೀಸ್​, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಹಾಗೂ ಈಜುಗಾರರು ಹಾಗೂ ಡೈವಿಂಗ್ ಎಕ್ಸ್​ಪರ್ಟ್ ಈಶ್ವರ್ ಮಲ್ಪೆ ಶರತ್​ರವರಿಗಾಗಿ ಹುಡುಕಾಟ ನಡೆಸ್ತಿದ್ದರು. ಆದರೆ ರಭಸವಾಗಿ ಹರಿಯುತ್ತಿರುವ ನೀರು ಮತ್ತು ಬಂಡೆಗಳ ಕೊರಕಲು ಶರತ್​ರವರ ಹುಡುಕಾಟವನ್ನು ಕಷ್ಟ ಸಾಧ್ಯವಾಗಿಸುತ್ತಿದೆ. 

ಜ್ಯೋತಿರಾಜ್​ರಿಂದ ಹುಡುಕಾಟ

ಇನ್ನೂ ಶರತ್​ ರವರ ಹುಡುಕಾಟಕ್ಕೆ ಜ್ಯೋತಿರಾಜ್​ರವರು ಸಹ ಸಾಥ್ ನೀಡಿದ್ದಾರೆ, ಮೊನ್ನೆಯಿಂದಲೇ ಜ್ಯೋತಿರಾಜ್ ಮತ್ತವರ ತಂಡ ಅರಶಿನ ಗುಂಡಿ ಫಾಲ್ಸ್​​ನಲ್ಲಿ ಶರತ್​ಗಾಗಿ ಹುಡುಕಾಟ ನಡೆಸ್ತಿದೆ. ಶರತ್ ಹಾಗೂ ಅವರ ಸ್ನೇಹಿತರು ಹೋದ ಹಾದಿಯಲ್ಲಿಯೇ ಹೋಗಿ , ಅವರು ಕಾಲುಜಾರಿದ ಸ್ಥಳದಲ್ಲಿ ನಿಂತು ಪರಿಶೀಲಿಸಿದ ಜ್ಯೋತಿರಾಜ್​, ಶರತ್​ರವನ್ನ ನೀರು ಕೊಚ್ಚಿಕೊಂಡು ಹೋಗಿಬರಬಹುದಾದ ಸ್ಥಳಗಳನ್ನು ಊಹಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ರಭಸವಾಗಿ ಹರಿಯುವ ನೀರಿಗೆ ಇಳಿದು ಶರತ್​ರವರ ಮೃತದೇಹ ಹುಡುಕಲು ಯತ್ನಿಸಿದ್ಧಾರೆ. 

ನೀರು ಅಪಾಯಕಾರಿ

ಇನ್ನೂ ಇದೇ ವಿಚಾರದ ಬಗ್ಗೆ ಜ್ಯೋತಿರಾಜ್​ರವರನ್ನ ಮಲೆನಾಡು ಟುಡೆ ಮಾತನಾಡಿಸಿತ್ತು. ಅವರು ಹೇಳುವ ಪ್ರಕಾರ, ನೀರು ಸಿಕ್ಕಾಪಟ್ಟೆ ರಭಸದಲ್ಲಿದೆ. ಅಲ್ಲದೆ ವಿಪರೀತ ಬಂಡೆಗಳಿದ್ದು ನೀರಿಗೆ ಇಳಿದ ತಕ್ಷಣ ನೀರು ಎಳೆದುಕೊಂಡು ಹೋಗಿ ಬಂಡೆಗೆ ಬಡಿಸುತ್ತಿದೆ. ಹಾಗಾಗಿ ನೀರಿಗಿಳಿಯುವುದು ಸಹ ಕಷ್ಟವಾಗಿದೆ. ಡೈವಿಂಗ್ ಎಕ್ಸ್​ಫರ್ಟ್​ ಈಶ್ವರ್ ಮಲ್ಪೆಯವರು ಸಹ ಕಾರ್ಯಾಚರಣೆಯಲ್ಲಿ ಹರಸಾಹಸ ಪಟ್ಟು ಶೋಧ ಕಾರ್ಯ ನಡೆಸ್ತಿದ್ದಾರೆ. ಅವರಿಗೂ ಕಾರ್ಯಾಚರಣೆಯಲ್ಲಿ ಪೆಟ್ಟಾಗಿದೆ. ಜೋಗದ ಜಲಪಾತದಲ್ಲಿ ಕೆಲವು ಕಡೆಗಳಲ್ಲಿ ನೀರು ರಭಸವಾಗಿ ಇರುವುದಿಲ್ಲ. ಆದರೆ ಇಲ್ಲಿ ಇಳಿಜಾರಾಗಿ ಸಾಲುಗಟ್ಟಿರುವ ಬಂಡೆಗಳಿವೆ. ಅವುಗಳ ಮೇಲೆ ರಭಸವಾಗಿ ನೀರು ಹರಿಯುತ್ತಿದೆ. ಇದರ ನಡುವೆ ಶೋಧ ಕಾರ್ಯಾಚರಣೆ ನಡೆಸುವುದು ದುಸ್ತರವಾದ ಕೆಲಸವಾಗಿದೆ. ನಮ್ಮ ಪ್ರಯತ್ನವನ್ನು ಶಕ್ತಿ ಮೀರಿ ಮಾಡುತ್ತಿದ್ದೇವೆ  ಎಂದು ತಿಳಿಸಿದ್ದಾರೆ. 

ಡ್ರೋಣ್ ಬಳಕೆ

ಇನ್ನೂ ಕಾರ್ಯಾಚರಣೆ ಮುಂದುವರಿಸಿರುವ ರಕ್ಷಣಾ ತಂಡ, ಶರತ್​ರವರ ಪತ್ತೆಗಾಗಿ ಡ್ರೋಣ್ ಕ್ಯಾಮರಾವನ್ನು ಸಹ ಬಳಕೆ ಮಾಡುತ್ತಿದ್ಧಾರೆ. ಮಳೆಯು ಸಹ ತುಸು ಕಡಿಮೆಯಾಗಿದೆ. ಆದರೆ ದುರ್ಗಮವಾದ ಜಲಪಾತದ ನೀರು  ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. 

ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ಪ್ಲೈಟ್! ವಿಮಾನ ಹಾರಿಸಲು ಶೀಘ್ರದಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಮಿಟ್​!? ಬುಕ್ಕಿಂಗ್​ಗೆ ಬಲೇ ಡಿಮ್ಯಾಂಡ್!



 ​