KARNATAKA NEWS/ ONLINE / Malenadu today/ Jul 28, 2023 SHIVAMOGGA NEWS
ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC BANK) ನ ಅಧ್ಯಕ್ಷ ಚೆನ್ನವೀರಪ್ಪರವರ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಇವತ್ತು ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬಾಕಿ ಉಳಿದಿರುವ ಅಧಿಕಾರ ಅವಧಿ 9 ತಿಂಗಳಿಗೆ ನೂತನ ಅಧ್ಯಕ್ಷರು ಯಾರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
ಕಾಂಗ್ರೆಸ್ ಪಕ್ಷ ಬೆಂಬಲಿತ ನಿರ್ದೇಶಕರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪರವರ ಅವಿಶ್ವಾಸ ಮಂಡಿಸಿದ್ದರು. ಈ ಸಂಬಂದ ಇವತ್ತು ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 12.30 ರ ನಂತರ ನಡೆದ ಪ್ರಕ್ರಿಯೆಯಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 9 ಮತಗಳು ಲಭ್ಯವಾಗಿದೆ. ಅಧ್ಯಕ್ಷ ಚೆನ್ನವೀರಪ್ಪರವರ ಪರವಾಗಿ ಕೇವಲ ಮೂರು ಮತಗಳು ದಾಖಲಾಗಿದೆ.
ಅವಿಶ್ವಾಸ ನಿರ್ಣಯ ಪಾಸಾಗಲು 9 ನಿರ್ದೇಶಕರ ಬೆಂಬಲ ಅಗತ್ಯವಿತ್ತು. ಈ ಮಧ್ಯೆ ಡಿಸಿಸಿ ಬ್ಯಾಂಕ್‌ನಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕ ಜೆ.ಪಿ.ಯೋಗೇಶ್ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಪರವಾಗಿದ್ದರು. ಇನ್ನೂ ಇವತ್ತು ನಡೆದ ಗೊತ್ತುವಳಿ ನಿರ್ಣಯ ಮಂಡನೆಯ ವೇಳೆ ಬಿಜೆಪಿ ಪಾಳಯದ ಒಂದು ಮತ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಪರವಾಗಿ ಬಂದಿದೆ. ಹೀಗಾಗಿ ಚೆನ್ನವೀರಪ್ಪರವರಿಗೆ ಸೋಲಾಗಿದೆ.ಸದ್ಯ ಅವರ ಸ್ಥಾನದಲ್ಲಿ ಉಪಾಧ್ಯಕ್ಷರಾಗಿರುವ ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ]\

BIG EXCLUSIVE / ಶರತ್ಗಾಗಿ ಜ್ಯೋತಿರಾಜ್ ಹುಡುಕಾಟ! ಡ್ರೋಣ್ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!