50-100 ಕಾಯಂ ಗಾಯಬ್: ಕಳ್ಳ ಯಾರೆಂದು ಹುಡುಕ ಹೊರಟ ಅಂಗಡಿ ಮಾಲೀಕನಿಗೆ ಕಾದಿತ್ತು ಅಚ್ಚರಿ! ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram
Chikmagalur Shocking Rat Steals Cash from Shop
Chikmagalur Shocking Rat Steals Cash from Shop

Chikmagalur ಚಿಕ್ಕಮಗಳೂರು : ಅಯ್ಯೋ ದಿನ ಹೀಗಾಗ್ತ ಇದ್ಯಾಲ್ಲಾ, ಯಾರ್​​ ತೆಗಿತಿದ್ದಾರೆ, ದೊಡ್​​ ಅಮೌಂಟ್​​ ಏನ್​ ಅಲ್ಲ ಚಿಕ್​ದಾದ್ರು ಎಲ್ಲಾ ಹೋಗುತ್ತೇ ಅನ್ನೋದು ಗೊತ್ತಾಗ್​ಬೇಕ್​ ಅಲ್ವಾ ಅಂತ ಟೆನ್​ಷನ್​ ಮಾಡ್​ಕೊಂಡಿದ್ದ ಚಿಕನ್​ ಅಂಗಡಿ ಮಾಲೀಕನಿಗೆ ಕೊನೆಗೂ ತಿಳಿಯಿತು ಇಲಿರಾಯನ ಸತ್ಯ! ಈ ಹಿಂದೆ ತುಮಕೂರಿನ ಜ್ಯುವೆಲರಿ ಶಾಪ್​ ಒಂದರಲ್ಲಿ ಲಕ್ಷಾಂತರ ರೂಪಾಯಿ ಬಂಗಾರ ತಗೊಂಡು ಹೋಗಿ ಸುದ್ದಿ ಆಗಿದ್ದ ಇಲಿ, ಇಲ್ಲೂ ದುಡ್ಡು ತಗೊಂಡು ಹೋಗಿ ಸುದ್ದಿ ಆಗಿದೆ ನೋಡಿ. ಇದು ಎಲ್ಲಿ ನಡೆದಿದ್ದು, ಏನಾಯ್ತು ಅನ್ನೋ ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ.

ಶಿವಮೊಗ್ಗ ; 27 ವರ್ಷದ ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ, ಸಂತ್ರಸ್ತೆಗೆ 2 ಲಕ್ಷ ಪರಿಹಾರ, ಏನಿದು ಸುದ್ದಿ

ಈ ಘಟನೆ ನಡೆದಿದ್ದು ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದ ಜಮ್ ಜಮ್ ಅನ್ನೋ ಒಂದು ಚಿಕನ್​ ಅಂಗಡಿಯಲ್ಲಿ. ಏನಾಗ್ತಿತ್ತು ಅಂದರೆ ಚಿಕನ್​ ಅಂಗಡಿಯಲ್ಲಿ ದಿನಾ ವ್ಯಾಪಾರ ನಡೀತಾ ಇತ್ತು. ಮಾಲೀಕ ಸಿದ್ದೀಕ್ ​ ಹಣವನ್ನು ಡ್ರಾಯರ್​ನಲ್ಲಿ ಲೆಕ್ಕ ಮಾಡಿ ಹಾಕಿ ಇಡ್ತಾ ಇದ್ದರು. ಆದ್ರೆ ಮರುದಿನ ನೋಡುವಾಗ 50, 100 ರೂಪಾಯಿ ವ್ಯತ್ಯಾಸ ಬರ್ತಿತ್ತು. ಮೊದ್​ ಮೊದ್ಲಿಗೆ ಆತನಿಗೆ ಸಣ್ಣ ಅಮೌಂಟ್ ಅಲ್ವಾ, ಎಲ್ಲೋ ನನ್ನಿಂದಲೇ ಮಿಸ್​ ಆಗಿರ್ಬೇಕು ಅನ್ಸಿತ್ತು. ಆದ್ರೂ ದಿನಾ ಹೀಗೆ ಆಗ್ತಿರೋದ್ರಿಂದ ಯಾರಾದ್ರೂ ಅಂಗಡಿಗೆ ಕನ್ನ ಹಾಕ್ತಿದ್ದಾರಾ ಎಂಬ ಅನುಮಾನ ಹಾಗೆಯೇ ಭಯ ಆತನಲ್ಲಿ ಮೂಡಿತು. ಛೇ, ಎಲ್ಲೋ ಮಿಸ್​ ಹೊಡಿತಿದೆ. ಏನಾದ್ರೂ ಆಗ್ಲಿ, ಆ ಕಳ್ಳ ಯಾರೆಂದು ಪತ್ತೆ ಹಚ್ಚಲೇಬೇಕು ಎಂದು ಪಟ್ಟು ಹಿಡಿದು ಅಂಗಡಿಯ ಮೂಲೆಗಳನ್ನೆಲ್ಲಾ ಹುಡುಕಲಾರಂಭಿಸಿದರು.

ಆಗ ಆತನ ಕಣ್ಣಿಗೆ ಪ್ಲಾಸ್ಟಿಕ್​​ ಕವರ್​​​ ಒಂದು ಕಾಣಿಸಿತು. ಆ ಕವರ್​ ಅನ್ನು ಓಪನ್​ ಮಾಡಿದ ಆತನಿಗೆ 50, 100, 20 ರೂಪಾಯಿಯ ನೋಟುಗಳೊಂದಿಗೆ ವಿಮಲ್​ ಕವರ್ ಹಾಗೂ ​ಪ್ಲಾಸ್ಟಿಕ್​ ಕವರ್​ಗಳನ್ನು ಸೇರಿಸಿ ನಿರ್ಮಿಸಿದ ಐಷಾರಾಮಿ ಇಲಿಯ ಗೂಡು ಕಾಣಿಸಿತು! ಈ ಶ್ರೀಮಂತ ಇಲಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಲಿಗೂ ಹಣದ ಬೆಲೆ ಗೊತ್ತಾಗಿದೆ, ನೋಟುಗಳ ಮೇಲೆ ಮಲಗಿದ ಶ್ರೀಮಂತ ಇಲಿ ಎಂಬ ಹಾಸ್ಯಮಿಶ್ರಿತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಈ ಹಿಂದೆ ತುಮಕೂರಿನ ಜುವೆಲ್ಲರಿ ಶಾಪ್​ ಒಂದರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅದೇನಂದ್ರೆ ಇಲಿಯೊಂದು ಜುವೆಲ್ಲರಿ ಶಾಪ್​​ ಒಳ ಹೊಕ್ಕಿ ಸುಮಾರು 10 ಲಕ್ಷಕ್ಕೂ ಮೌಲ್ಯದ ಆಭರಣಗಳನ್ನು ಹೊತ್ತಿಯ್ದಿತ್ತು, ಆಗಲೂ ಶಾಪ್​ನ ಮಾಲೀಕರು ಇದೇ ರೀತಿ ತಲೆ ಕೆಡಿಸಿಕೊಂಡು ಕೊನೆಗೆ ಹುಡುಗಿದಾಗ ಇಲಿ ಚಿನ್ನಾಭರಣವನ್ನು ಹೊತ್ತೊಯ್ದಿದ್ದು ಪತ್ತೆಯಾಯ್ತು, ಇಲ್ಲಿಯೂ ಸಹ ಇಂತಹದ್ದೇ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor