ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ಪ್ಲೈಟ್! ವಿಮಾನ ಹಾರಿಸಲು ಶೀಘ್ರದಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಮಿಟ್​!? ಬುಕ್ಕಿಂಗ್​ಗೆ ಬಲೇ ಡಿಮ್ಯಾಂಡ್!

Malenadu Today

KARNATAKA NEWS/ ONLINE / Malenadu today/ Jul 28, 2023 SHIVAMOGGA NEWS

ಬೆಂಗಳೂರು: ಶಿವಮೊಗ್ಗದಿಂದ ತಿರುಪತಿ, ಗೋವಾ ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸೇವೆ ಶೀಘ್ರ ಆರಂಭವಾಗಲಿದೆ. ಈ ಸಂಬಂಧ ಮೂರು ಸಂಸ್ಥೆಗಳಿಗೆ ಅನುಮತಿ ದೊರೆತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್​  (MB Patil)ಹೇಳಿದ್ದಾರೆ. 

ನಿನ್ನೆ ವಿಧಾನಸೌಧದಲ್ಲಿ  ಮಾತನಾಡಿದ ಅವರು,  ಆಗಸ್ಟ್‌ 31ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ವಿಮಾನ ಹಾರಾಟ ನಡೆಸಲಿದೆ. ಇಂಡಿಗೊ‌ ಏರ್‌ಲೈನ್ಸ್‌ ಬುಕ್ಕಿಂಗ್‌ ಸೇವೆ ಆರಂಭಿಸಿದೆ. ಮೊದಲು ಹಾರಲಿರುವ ವಿಮಾನದಲ್ಲಿ ಪ್ರಯಾಣಿಸುವ ಅವಕಾಶಕ್ಕೆ ಸಾಕಷ್ಟು ಬೇಡಿಕೆ ಬಂದಿದೆ. ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ಲೈನ್ಸ್‌ ಹಾಗೂ ಅಲಯನ್ಸ್‌ ಸಂಸ್ಥೆಗಳು ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿವ ಎಂದು ತಿಳಿಸಿದ್ದಾರೆ. 

ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ದೊರೆತ ನಂತರ ಸೇವೆ ಆರಂಭಿಸಲಿವೆ ಎಂದು ಮಾಹಿತಿ ನೀಡಿದರು.


ಕಾಡು ದಾರಿಯಲ್ಲಿ ಅಡ್ಡ ಸಿಕ್ಕ ಹುಲಿರಾಯ! ಮಳೆ ನೀರು ಕುಡಿವ ವ್ಯಾಘ್ರ ರೂಪ ಇದೀಗ ವೈರಲ್​

ಶರಾವತಿ ಸಂತ್ರಸ್ತರ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ! ಜಿಲ್ಲಾಡಳಿತಕ್ಕೆ ಆರು ಮಹತ್ವದ ಸೂಚನೆ !

ವಿಮಾನ ಹಾರಾಟಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭ! ರೇಟು ಎಷ್ಟು? ಏನಿದು ಸೌಲಭ್ಯ? ಟೈಮಿಂಗ್ಸ್ ಏನು? ಫುಲ್ ಡಿಟೇಲ್ಸ್ ಇಲ್ಲಿದೆ

Malenadu Today

 

 

Share This Article