ಅರಶಿನ ಗುಂಡಿ ಫಾಲ್ಸ್​ನಲ್ಲಿ ಸಾವನಪ್ಪಿದ ಶರತ್​ರ ಅಂತ್ಯಕ್ರಿಯೆ! ಸಾವಿಗೂ ಮೊದಲು ತೆಗೆದಿದ್ದರು ಸೆಲ್ಫಿ ವಿಡಿಯೋ ! ಕೊನೆ ಕ್ಷಣದ ದೃಶ್ಯ

The last rites of Sharath, who died at Arasinagundi Falls, were held at Bhadravathi. The selfie video was taken before his death! ಅರಶಿನ ಗುಂಡಿ ಫಾಲ್ಸ್​ನಲ್ಲಿ ಸಾವನಪ್ಪಿದ ಶರತ್​ರ ಅಂತ್ಯಕ್ರಿಯೆ ಭದ್ರಾವತಿಯಲ್ಲಿ ನಡೆದಿದೆ. ಸಾವಿಗೂ ಮೊದಲು ತೆಗೆದಿದ್ದರು ಸೆಲ್ಫಿ ವಿಡಿಯೋ ! ಕೊನೆ ಕ್ಷಣದ ದೃಶ್ಯ ಇಲ್ಲಿದೆ

ಅರಶಿನ ಗುಂಡಿ ಫಾಲ್ಸ್​ನಲ್ಲಿ ಸಾವನಪ್ಪಿದ ಶರತ್​ರ ಅಂತ್ಯಕ್ರಿಯೆ!  ಸಾವಿಗೂ ಮೊದಲು ತೆಗೆದಿದ್ದರು ಸೆಲ್ಫಿ ವಿಡಿಯೋ ! ಕೊನೆ ಕ್ಷಣದ ದೃಶ್ಯ
ಅರಶಿನ ಗುಂಡಿ ಫಾಲ್ಸ್​ನಲ್ಲಿ

KARNATAKA NEWS/ ONLINE / Malenadu today/ Jul 31, 2023 SHIVAMOGGA NEWS

ಅರಿಶಿನ ಗುಂಡಿ ಫಾಲ್ಸ್​ ನಲ್ಲಿ ಕಾಲುಜಾರಿ ಬಿದ್ದ ಶರತ್​ರವರ ಅಂತ್ಯಕ್ರಿಯೆ ಭದ್ರಾವತಿಯಲ್ಲಿ ನಡೆಯಿತುಭದ್ರಾವತಿಯ ಕೆ.ಹೆಚ್.ನಗರದಲ್ಲಿರುವ ಶರತ್​ ರವರ ನಿವಾಸಕ್ಕೆ ಶರತ್​ ರವರ ಮೃತದೇಹ ಬರುತ್ತಲೇ, ಅವರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.  

ಇನ್ನು ತಮಿಳು ಗೌಂಡರ್​ ಸಂಪ್ರದಾಯ ಪ್ರಕಾರ,ಶರತ್​ ರವರ ಅಂತಿಮ ವಿಧಿವಿಧಾನಗಳನ್ನು ನಡೆಸಿ ಸ್ಥಳೀಯ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಶರತ್ ಅವಿವಾಹಿತನಾಗಿದ್ದರಿಂದ,  ಅಂತ್ಯಕ್ರಿಯೆಗೂ ಮುನ್ನ ಶರತ್‌ಗೆ ವಿವಾಹ ಶಾಸ್ತ್ರ ಮಾಡಲಾಯ್ತು.  

ಕೊಲ್ಲೂರು (Kollur) ಬಳಿಯ ಅರಿಶಿನಗುಂಡಿ ಫಾಲ್ಸ್‌ನಲ್ಲಿ (Arishinagundi falls) ಶರತ್ ಕಾಲುಜಾರಿ ಕೊಚ್ಚಿಕೊಂಡು ಹೋಗಿದ್ದರು. ಅವರಿಗಾಗಿ ಕಳೆದ 8 ದಿನಗಳಿಂದ ಹುಡುಕಾಟ ನಡೆದಿತ್ತು.  ಭದ್ರಾವತಿ (Bhadravati) ಮೂಲದ ಯುವಕ ಶರತ್ (Sharath) ಮನೆಯ ಜವಾಬ್ದಾರಿಗಳನ್ನ ನಿಭಾಯಿಸುತ್ತಿದ್ದರು. ಇದೀಗ ಅವರನ್ನ ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.  

ಇನ್ನೂ ಕೊಲ್ಲೂರು ಸಮೀಪದ ಫಾಲ್ಸ್​ನಲ್ಲಿ ಶರತ್ ಸಾವಿಗೂ ಮುನ್ನ ಖುದ್ದು ಮೊಬೈಲ್​ನಲ್ಲಿ ಚಿತ್ರೀಕರಿಸಿದ ವಿಡಿಯೋವೊಂದು ಇದೀಗ ಮಾಧ್ಯಮಗಳಿವೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಶರತ್ ಪ್ರಕೃತಿಯ ರಮಣೀಯತೆಯನ್ನ ಅನುಭವಿಸುತ್ತಾ, ಕ್ಯಾಮರಾಗೆ ನಗುಮೊಗದಲ್ಲಿ ಫೋಸ್ ಕೊಟ್ಟಿದ್ದರು. ಅಪಾಯದ ಸಣ್ಣ ಸೂಚನೆ ಸಿಕ್ಕಿದ್ದರೂ ಸಹ, ಅವರು ಬದುಕಿ ಬರುತ್ತಿದ್ದರೇನೋ ಎನ್ನುವಂತಿದೆ ವಿಡಿಯೋ

ಅರಶಿನ ಗುಂಡಿ ಫಾಲ್ಸ್​ನಲ್ಲಿ ಶರತ್ ಸಾವು! ನೊಂದ ಕುಟುಂಬಸ್ಥರು ಸಂಸದ ಬಿ.ವೈ.ರಾಘವೇಂದ್ರರಿಗೆ ನೀಡಿದ್ರು ಒಂದು ಮನವಿ!

ಮಲ್ನಾಡ್​ನಲ್ಲಿ ಸಿಗದ ನೆಟ್​ವರ್ಕ್​! ಅಧಿಕಾರಿಗಳಿಗೆ ದಿಗ್ಬಂಧನ! ಪರಿಹಾರ ಹುಡುಕಲು ಸಂಸದರ ಮೀಟಿಂಗ್!

ಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್​ರ ಮೃತದೇಹ ಪತ್ತೆ!

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್​ ಆ್ಯಂಡ್​ ರನ್​ ಯುವಕ ಬಲಿ! ಏನಿದು ಘಟನೆ?

SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

 

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​