ಭದ್ರಾವತಿಯಲ್ಲಿ ಬೈಕ್ ಕದಿಯುತ್ತಿದ್ದ ಕೋಳಿ ಅರೆಸ್ಟ್ ! ಬಗೆಹರಿಯಿತು ಎರಡು ಕೇಸ್​! ಪ್ರಕರಣದ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 25, 2023 SHIVAMOGGA NEWS

ಭದ್ರಾವತಿ ತಾಲ್ಲೂಕಿನ  ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಮುಂದೆ ನಡೆದಿದ್ದ ಬೈಕ್​ ಕಳ್ಳತನ ಪ್ರಕರಣವನ್ನು ಭದ್ರಾವತಿ ಪೊಲೀಸರು ಭೇದಿಸಿದ್ದಾರೆ. 

ಇಲ್ಲಿನ ನಿವಾಸಿಯೊಬ್ಬರು ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ಬೈಕ್​ನ್ನ   ಕಳ್ಳರು ಕಳ್ಳತನ ಮಾಡಿದ್ದರು  ಈ ಸಂಬಂಧ 379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ  ತನಿಖಾ ತಂಡವು ದಿನಾಂಕ:24/6/2023 ರಂದು ಆರೋಪಿಯನ್ನ ಬಂಧಿಸಿದ್ಧಾರೆ.  ಪ್ರಭು @ ಕೋಳಿ,  28 ವರ್ಷ, ಬೆಳಕಟ್ಟೆ ಗ್ರಾಮ ಶಿವಮೊಗ್ಗ ಬಂಧಿತ ಆರೋಪಿ. 

ಆರೋಪಿತನಿಂದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯ 01 ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 01 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 80,000/- ರೂ ಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.  


ಕೇವಲ 14 ಸೆಕೆಂಡ್​ನಲ್ಲಿಯೇ ದಾಖಲೆ ಬರೆದ ಭದ್ರಾವತಿಯ 2 ನೇ ಕ್ಲಾಸ್ ಬಾಲಕ!

ಭದ್ರಾವತಿಯ ಬಾಲಕನೊಬ್ಬ ಕೇವಲ 14 ಸೆಕೆಂಡ್​ನಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನ ಹೇಳುವ ಮೂಲಕ ರೆಕಾರ್ಡ್​ ಬುಕ್​​ನಲ್ಲಿ ದಾಖಲೆ ಮೆರೆದಿದ್ಧಾನೆ. ಭದ್ರಾವತಿ ತಾಲ್ಲೂಕಿನ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ 2ನೇ ತರಗತಿ ವಿದ್ಯಾರ್ಥಿ ಸಿ. ವೀರ್‌ನಾರಾಯಣ್‌ಸಿಂಗ್ ಒಎಂಜಿ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಸಾಧನೆ ದಾಖಲಿಸಿದ್ದಾನೆ. ಈತನಿಗೆ ಇನ್ನೂ 7 ವರ್ಷ 3 ತಿಂಗಳು, ಈತ ಕೇವಲ 14 ಸೆಕೆಂಡ್​ಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನು ಹೇಳಿದ್ದಾನೆ. 

ಇದೇನು ಸುಲಭದ ಕೆಲಸ ಅಂದುಕೊಂಡವರು, ಟೈಮರ್​ ಇಟ್ಟುಕೊಂಡು ಎಲ್ಲಾ ರಾಜ್ಯಗಳ ಹೆಸರನ್ನ ಹೇಳುವ ಪ್ರಯತ್ನ ನಡೆಸಬಹುದು.ಕಳೆದ ಏಪ್ರಿಲ್​ನಲ್ಲಿ ಈ ಸಂಬಂಧ ದಾಖಲೆ ರೆಕಾರ್ಡ್​ ಮಾಡಿದ್ದ ಬಾಲಕನಿಗೆ ಇದೀಗ ಪ್ರಮಾಣಪತ್ರ ದೊರಕಿದೆ.  ವೀರ್‌ನಾರಾಯಣ್‌ಸಿಂಗ್ ತಾಲೂಕಿನ ದೇವರನರಸೀಪುರ ಗ್ರಾಮದ ನಿವಾಸಿಗಳಾದ ಸಿ. ಚರಣ್‌ಸಿಂಗ್ ಮತ್ತು ಆರ್. ದಿವ್ಯರಾಣಿ ದಂಪತಿ ಪುತ್ರನಾಗಿದ್ದಾನೆ.  

 

Leave a Comment